Advertisement

Category: ಅಂಕಣ

ರೈತನ ಮಿತ್ರ ಎರೆಹುಳು ಆದರೆ ಅದರ ವೈರಿ…?

ಮಾನವನ ಪ್ರಕೃತಿಯ ಮೇಲಿನ ದಬ್ಬಾಳಿಕೆಗೆ ಇದೊಂದು ಸಣ್ಣ ಉದಾಹರಣೆ ಅಷ್ಟೆ. ಟ್ರಾಕ್ಟರ್‌ನಂತಹ ಯಂತ್ರ ಎಲ್ಲರಂತೆಯೇ ಜೀವಿಸುವ ಹಕ್ಕಿರುವ ಹಾವಿನ ಜೀವಕ್ಕೆ ಕುತ್ತು ತಂದಿತ್ತು. ಹಾವು ಕಣ್ಣಿಗೆ ಕಾಣುವ ಜೀವ. ಇನ್ನೂ ಸೂಕ್ಷ್ಮವಾಗಿರುವ ಕಣ್ಣಿಗೆ ಕಾಣದ ಎಷ್ಟೋ ಜೀವಗಳು ಮಣ್ಣಿನಲ್ಲಿ ಬೆರೆತು ವಾಸ ಮಾಡುತ್ತವೆ. ಅವುಗಳನ್ನೆಲ್ಲ ಬುಡಮೇಲು ಮಾಡಿ ಕತ್ತರಿಸಿ ಹಾಕಲು ನಮಗೆ ಹಕ್ಕಿದೆಯೆ? ಅಲ್ಲೊಂದು ನಮಗರಿವಿಲ್ಲದೆ ಉಸಿರಾಡುತ್ತಿರುವ ಜಗತ್ತು ಇದೆ. ಅವುಗಳಿಂದ ನಮ್ಮ ಗಿಡ ಮರಗಳಿಗೆ ಪೋಷಣೆಯೂ ನಿರಂತರವಾಗಿ ಸಿಗುತ್ತಿದೆ.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

Read More

ಅಂಗೈ ಗೆರೆಗಳಾಗುವುದಿಲ್ಲ ಭವಿಷ್ಯದ ಹೆದ್ದಾರಿಗಳು

ನನಗೆ ನನ್ನ ಭವಿಷ್ಯದ ಬಗ್ಗೆ ತಿಳಿಯುವ ಕುತೂಹಲವುಂಟಾಗಿ ನನ್ನ ಅಂಗೈಯನ್ನು ಅವನ ಮುಂದೆ ಮಾಡಿದೆ. ಆ ಭವಿಷ್ಯಗಾರ ಇಡಿ ನನ್ನ ಅಂಗೈ ಜಾಲಾಡಿ ‘ನಿನ್ನ ವಿದ್ಯಾಭ್ಯಾಸ ಇಲ್ಲಿಗೆ ಕೊನೆ ಆಗತೈತಿ. ಇನ್ ಮುಂದಾ ಓದಾಕ ಹೋಗಬ್ಯಾಡ. ಓದಿದ್ರೂ ತಲಿಗೆ ಹತ್ತಾಂಗಿಲ್ಲ. ಈ ಲಾರಿನ ನಿನಗ ಗತಿ ಆಗ್ತೇತಿ’ ಅಂತ ಹೇಳಿ ಇಳಿದು ಹೋಗಿಬಿಟ್ಟ. ಅಂಗೈ ಮೇಲಿನ ಭವಿಷ್ಯ ನಿಜಾನೋ ಸುಳ್ಳೋ ಒಂದು ತಿಳಿಯದ ವಯಸ್ಸದು. ಯಾರಾದ್ರೂ ಏನಾದ್ರೂ ಹೇಳಿಬಿಟ್ಟರೆ ನಂಬಿಬಿಡುವ ಮುಗ್ಧತೆಯೋ ದಡ್ಡತನವೋ ಆಗ ನನ್ನಲ್ಲಿತ್ತು. ಇಸ್ಮಾಯಿಲ್‌ ತಳಕಲ್‌ ಅಂಕಣ

Read More

ಯಕ್ಷಗಾನ ಸಂಘಟಕರ ಸಂದರ್ಶನ…

ನಿಜವಾಗಿ ಹೇಳೊದಂದ್ರೆ ನಮಗೆ ಯಕ್ಷಗಾನದ ಮೇಲಿರೊ ಪ್ರೀತಿನೆ ಯಕ್ಷಗಾನ ಮಾಡಿಸೋಕೆ ಇರೊ ಕಾರಣ. ಇಲ್ಲಿ ಪ್ರತಿ ದಿನ ಒಂದಿಪ್ಪತ್ತು ಜನ ಇಲ್ಲಿ ಸೇರ್ತೇವಲ್ಲ, 365 ದಿನನೂ ಯಕ್ಷಗಾನದ ಏನಾದ್ರು ಒಂದು ಸುದ್ದಿ ಮಾತಾಡೇ ಆಡ್ತಿವಿ. ಮಳೆಗಾಲದಲ್ಲಿ ತಾಳಮದ್ದಲೆ ನೋಡ್ತಿವಿ. ಇಲ್ಲಿ ಈ ತರ ಅರ್ಥ ಹೇಳಿದರು. ಅಲ್ಲೊಂದು ಆಟ ನೋಡಿಕೊಂಡು ಬಂದೆ, ಹಿಂಗಾಯಿತು, ಹಂಗಾಯಿತು ಅಂತ ಏನೊ ಒಂದು ಮಾತು ಇರತ್ತೆ.
“ಯಕ್ಷಾರ್ಥ ಚಿಂತಾಮಣಿ” ಅಂಕಣದಲ್ಲಿ ಕೃತಿ ಆರ್ ಪುರಪ್ಪೇಮನೆ ಬರಹ

Read More

ಕೊಳ್ಳುವ ಭರದಲ್ಲಿ ವಿವೇಕವೇ ಕಳೆದುಹೋದರೆ!

ಮುವ್ವತ್ತರ ಸುಮಾರಿಗೆ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ. ಕಂಡಿದ್ದನ್ನೆಲ್ಲಾ ಕೊಳ್ಳುವ ಶಕ್ತಿ ನೀಡುವ ಖುಷಿ, ಸವಿಯಾದ ನೆನಪಿನ ಘಮ ಹೊತ್ತ ಅರಿವೆಗಳು ನೀಡುವ ಹಿತಾನುಭವಕ್ಕೆ ಸಾಟಿಯಾಗಬಲ್ಲದೆ? ಕೊಳ್ಳುತ್ತೇನೆಂಬುದು ನಮ್ಮ ಅಹಂಕಾರವನ್ನು ತಣಿಸಬಹುದು. ಆದರೆ ಅಕ್ಕರೆಯ ಸಕ್ಕರೆಯಾಗಬಹುದೆ? ಅರವತ್ತರ ಸುಮಾರಿಗೆ ಈ ಮಟ್ಟಗಿನ ಸರಳತೆ ರೂಢಿಸಿಕೊಳ್ಳೋಣ ಅನ್ನುವಂತಿಲ್ಲ. ಇದು ಖಂಡಿತ ವೈರಾಗ್ಯದ ದಾರಿಯಲ್ಲ. ವಿವೇಚನೆಯ ಹಾದಿ.
ಎಸ್ ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ

Read More

ಕ್ರಿಕೆಟ್‌ನ ‘ಲಿಟಲ್ ಮಾಸ್ಟರ್ಸ್’ – 1

ವೆಸ್ಟ್ ಇಂಡೀಸ್‌ಗೆ ಹೋಗಿ ಅವರು ಅಲ್ಲೂ ಸುಮ್ಮನೆ ಕೂರಲಿಲ್ಲ! ಪ್ರಪ್ರಥಮವಾಗಿ ಟೆಸ್ಟ್‌ಗೆ ಇಳಿದ ಸುನಿಲ್‌ರ ಆರ್ಭಟ ಎಷ್ಟರ ಮಟ್ಟಿಗೆ ಇತ್ತೆಂದರೆ ಅವರು ಮಾಡಿದ ಭಾರತದ ದಾಖಲೆ ಇನ್ನೂ ಯಾರೂ ಮುರಿದಿಲ್ಲ! ಐದರಲ್ಲಿ, ನಾಲ್ಕು ಟೆಸ್ಟ್ ಅಡಿದ ಸುನಿಲ್ ಗವಾಸ್ಕರ್ ಮೊಟ್ಟ ಮೊದಲನೇಯ ಸರಣಿಯಲ್ಲಿ 774ರನ್ ಹೊಡೆದು ಇಂದಿಗೂ ಆ ವಿಶ್ವದಾಖಲೆ ಜೀವಂತವಾಗಿ ಉಳಿದಿದೆ!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಸುನಿಲ್‌ ಗವಾಸ್ಕರ್‌ ಆಟದ ಕುರಿತ ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ