ಆಶ್ರಯ ಕೊಡು-ಕೊಳ್ಳುವಿಕೆಯ ಕಹಿ ಸತ್ಯ
ತಮ್ಮ ದೇಶದಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧ, ಗಲಾಟೆ, ಹಿಂಸೆ, ಸಾವು, ಮಿಲಿಟರಿ ಆಡಳಿತ ಎಂಬಂತೆ ಜೀವಹಾನಿಕಾರಕ ಪರಿಸ್ಥಿತಿಯಿದ್ದು ಜೀವ ರಕ್ಷಿಸಿಕೊಳ್ಳಲು ದೇಶ ಬಿಟ್ಟು ಬರುವ ಜನರು ಇತ್ತೀಚಿನ ದಶಕಗಳಲ್ಲಿ ಹೆಚ್ಚುತ್ತಿದ್ದಾರೆ. ಅಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಕಾರಣವನ್ನು ಮುಂದೆ ಮಾಡಿಕೊಂಡು ಕೂಡ ಸಾವಿರಾರು ಜನರು ದೇಶ ತೊರೆದು ಬೇರೆ ಕಡೆ ಆಶ್ರಯವನ್ನು ಬೇಡಿಕೊಂಡು ಹೋಗುತ್ತಾರೆ. ಇವರು ‘ಅಸೈಲಮ್ ಸೀಕರ್’ ಎಂದು ಕರೆಸಿಕೊಳ್ಳುತ್ತಾರೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”