ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹೊಸ ಅಂಕಣ “ಇನ್ನೊಂದು ಬದಿ” ಇಂದಿನಿಂದ
ನಮ್ಮ ಪುರಾಣಗಳನ್ನು ಕೆದಕುತ್ತಾ ಹೋದರೆ ಇಂತಹ ಬಹಳಷ್ಟು ಮಾದರಿಗಳು ಸಿಗಬಹುದು. ಪ್ರತಿಯೊಬ್ಬರ ಪರಿಸ್ಥಿತಿಗಳು ಪ್ರತಿಯೊಬ್ಬರ ಋಣದ ಬೇರುಗಳು ಭಿನ್ನವಾಗಿರಬಹುದು. ಆದರೆ ಧರ್ಮಸಂಕಟದ ಆ ಉತ್ಕಟ ಕ್ಷಣಗಳಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಖಂಡಿತವಾಗಿಯೂ ನಮ್ಮ ಬದುಕಿನ ಸಮಸ್ಯೆಗಳಿಗೂ ಒಂದು ದಾರಿಯನ್ನು ತೋರಿಸಬಹುದು. ಬದುಕಿನ ಅನಾಮಿಕ ತಿರುವಿನಲ್ಲಿ ಎದುರಾಗುವ ದ್ವಂದ್ವಗಳಲ್ಲಿ ಇಲ್ಲಿದ್ದು ಇಲ್ಲಿಲ್ಲ; ಅಲ್ಲಿದ್ದು ಅಲ್ಲಿಲ್ಲ ಅನ್ನುವಂತಾಗಿ ಇದು ಅಥವಾ ಅದು ಅನ್ನುವ ಆಯ್ಕೆ ಮಾಡಲೇಬೇಕಾದ ಪರಿಸ್ಥಿಗಳಲ್ಲಿ ನಮ್ಮ ಮುಂದೆ ಇವರು ಕೊಟ್ಟು ಹೋದ ಮಾದರಿಗಳಿವೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹೊಸ ಅಂಕಣ “ಇನ್ನೊಂದು ಬದಿ” ಇಂದಿನಿಂದ
