Advertisement

Category: ದಿನದ ಅಗ್ರ ಬರಹ

ಅಣಬೆ ಬೆಳೆಗೆ ಕೈ ಹಾಕಿದ ನಮ್ಮೂರ ಹುಡುಗರ ಕಥೆ

ಆತ್ಮಾರಾಮನ ಸಹಾಯದಿಂದ ರಾಮಣ್ಣನ ಮನೆಯ ಹಿಂಭಾಗದ ಕೋಣೆಯನ್ನು ಬಾಡಿಗೆ ಹಿಡಿದು ಅಲ್ಲಿ ಅಣಬೆ ಕೃಷಿಗೆ ಓನಾಮ ಹಾಡಲಾಯಿತು. ಅದು ಬಿಟ್ಟರೆ ಅನ್ಯಮಾರ್ಗವಿಲ್ಲದೆ ಪಕ್ಕದ ಬೀದಿಯ ಆಫೀಸರನ ಮನೆಗೆ ಹೋಗಬೇಕಾಗಿತ್ತು. ಆದರೆ ಅಲ್ಲಿ ಅವನ ಹೆಂಡತಿಯ ಕಾಟ ಎಂಬುದು ಇವರ ದರ್ದು! ಅಂತೂ ಒಂದು ಶುಭದಿನ ಒಣಹುಲ್ಲಿನ ರಾಶಿ ಬಂದು ಬಿದ್ದು ಅಣಬೆ ಬೆಳೆಗೆ ನಾಂದಿಯಾಯಿತು. ಕೋಣೆಯ ಒಳಗೆ ಒಂದಷ್ಟು ಕಬ್ಬಿಣದ ರ‌್ಯಾಕ್‌ಗಳು ಬಂದವು.
ಮಧುರಾಣಿ ಬರೆಯುವ “ಮಠದ ಕೇರಿ” ಕಥಾನಕ

Read More

ವ್ಯಕ್ತಿಗಳ ತಲ್ಲಣಗಳ ಮೂಲಕ ರಾಜಕೀಯ ಸಾಮಾಜಿಕ ಪ್ರಶ್ನೆಗಳನ್ನು ಕೇಳುವ ಇಷಿಗುರೊ: ಎಸ್. ಸಿರಾಜ್ ಅಹಮದ್ ಅಂಕಣ

“ಸ್ಟೀವನ್ಸ್ ತನ್ನ ವೃತ್ತಿಯ ಹುಸಿ ಘನತೆ ಮತ್ತು ಹೊಣೆಗಾರಿಕೆಗಳಲ್ಲಿ ಅವನ ಒಳ ಬದುಕು ಎಷ್ಟು ಮುರುಟಿಹೋಗಿದೆ ಎಂದರೆ ಅವನು ಅಪರೂಪಕ್ಕೆ ಎಂಬಂತೆ ರೊಮ್ಯಾಂಟಿಕ್ ಕಾದಂಬರಿಯನ್ನು ಓದುವುದು ತನ್ನ ವೃತ್ತಿಗೆ ಅಗತ್ಯವಾಗಿ ಬೇಕಾದ ಇಂಗ್ಲೀಷನ್ನು ಸರಿಪಡಿಸಿಕೊಳ್ಳಲು ಮಾತ್ರ! ಸ್ಟೀವನ್ಸ್ ಏನು ಓದುತ್ತಾನೆ, ಅವನ ಕತ್ತಲಗೂಡಿನಂತಹ ಕೋಣೆಯಲ್ಲಿ ಯಾಕೆ ಒಂದು ಹೂಗುಚ್ಛವನ್ನೂ ಇಡಲು ಜಾಗವಿಲ್ಲ ಎಂದೆಲ್ಲ ಯೋಚಿಸುತ್ತ, ಅವನ ಅಂತರಂಗವನ್ನು ತಡವಿ, ಒಳಗನ್ನು ಅರಿತುಕೊಳ್ಳುವ ಆಸೆಯಿಂದ ಹೊರಡುವ ಮಿಸ್ ಕೆಂಟನ್‍ ಗೆ ಅಲ್ಲಿ ಕಾಣುವುದು ಇಂಥ ಒಣ ಶಿಷ್ಟಾಚಾರ, ವೃತ್ತಿಯ ಬಗೆಗಿನ ಕುರುಡು ನಿಷ್ಠೆ. ಮಾತ್ರ.”
ಎಸ್. ಸಿರಾಜ್ ಅಹಮದ್ ಬರೆಯುವ ಅಂಕಣ

Read More

ಹೂವಿನ ಹಡಗಲಿಯ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಗದಗದಿಂದ ಹೊರಟು ಹೂವಿನ ಹಡಗಲಿಯನ್ನು ತಲುಪಿದ ನಮ್ಮನ್ನು ಮಿತ್ರ ಪಂಪಾಪತಿರಾಯರು ದೊಡ್ಡ ಅಂಗಳವಿದ್ದ ಮನೆಯೊಂದಕ್ಕೆ ಕರೆದೊಯ್ದರು. ವಾಸ್ತವವಾಗಿ, ಅದು ವಾಸದ ಮನೆಯಾಗಿರದೆ, ಹೊಯ್ಸಳ ಕಾಲದ ದೇವಶಿಲ್ಪಗಳನ್ನು ಇರಿಸಿದ ಗುಡಿಯೆಂದು ತಿಳಿದಾಗ ಅಚ್ಚರಿಯಾಯಿತು. ಯೋಗಮಾಧವನ ಭವ್ಯವಾದ ಶಿಲ್ಪವೊಂದನ್ನು ಇಲ್ಲಿನ ಕೋಷ್ಠವೊಂದರಲ್ಲಿ ಇರಿಸಿದೆ. ಆರಡಿ ಎತ್ತರದ ಈ ವಿಗ್ರಹವು ಹೊಯ್ಸಳ ಕಾಲದ ಅತಿ ಸುಂದರ ಮೂರ್ತಿಗಳಲ್ಲೊಂದೆಂಬುದರಲ್ಲಿ ಸಂಶಯವಿಲ್ಲ. ಚತುರ್ಭುಜ ವಿಷ್ಣು ಹಿಂದಿನ ಎರಡು ಕೈಗಳಲ್ಲಿ ಶಂಖಚಕ್ರಗಳನ್ನು ಧರಿಸಿದ್ದು ಮುಂದಿನ ಕೈಗಳಲ್ಲಿ ಯೋಗಮುದ್ರೆಯನ್ನು ಪ್ರದರ್ಶಿಸುತ್ತ ಕಣ್ಮುಚ್ಚಿ ಪದ್ಮಾಸನದಲ್ಲಿ ಕುಳಿತಿರುವ ಭಂಗಿ ಅನನ್ಯವಾಗಿದೆ.”
ಟಿ. ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತೈದನೆಯ ಕಂತು

Read More

ಕವಿತೆಯ ಕುರಿತು: ಕೆ. ವಿ. ತಿರುಮಲೇಶ್ ಬರೆದ ಲೇಖನ

“ಕವಿ ರಾಘವಾಂಕನು ಜನ್ನನ ನಿಕಟೋತ್ತರದಲ್ಲಿ ಬಂದವನು – ಹಳೆಗನ್ನಡದಿಂದ ನಡುಗನ್ನಡಕ್ಕೆ ಯುಗ ಬದಲಾದ ಕಾಲ ಅದು, ಅಂತೆಯೇ ಚಂಪೂವಿನಿಂದ ಷಟ್ಪದಿಗೆ. ನಡುಗನ್ನಡದಲ್ಲಿ ಷಟ್ಪದಿಯಲ್ಲಿ ಬರೆದ ಮೊದಲಿಗರಲ್ಲಿ ರಾಘವಾಂಕ ಪ್ರಮುಖನು. ಅವನು ಮೂರು ನಾಲ್ಕು ಕಾವ್ಯಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಜನಪ್ರಿಯವಾದ್ದು ವಾರ್ಧಕ ಷಟ್ಪದಿಯಲ್ಲಿ…”

Read More

ಆತ್ಮಚರಿತ್ರೆ ಬರೆಯುವ ಅಗತ್ಯವೇನು?: ಡಾ. ಜ್ಯೋತಿ ಬರೆದ ಲೇಖನ

“ಓದುಗರ ದೃಷ್ಟಿಯಿಂದ ನೋಡಿದರೆ, ಸಾಮಾನ್ಯವಾಗಿ, ನಮ್ಮ ವೃತ್ತಿಯಲ್ಲಿ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಆತ್ಮಚರಿತ್ರೆ ಓದಲು ಆಸಕ್ತಿಯಿರುತ್ತದೆ. ಅವರ ಜೀವನ ವಿಧಾನ, ವಿಶಿಷ್ಟ ಮೈಲಿಗಲ್ಲುಗಳು ಅಥವಾ ಸಂಘರ್ಷಗಳನ್ನು ಆತ್ಮಚರಿತ್ರೆಯಲ್ಲಿ ಹುಡುಕಲು ಪ್ರಯತ್ನಿಸುತ್ತಾ, ಅದರಿಂದ ನಮಗೇನು ಹೊಸ ಅರಿವು, ಮಾರ್ಗದರ್ಶನ, ಅಥವಾ ಪ್ರೇರಣೆ ಸುಳಿವು ಸಿಗಬಹುದೆಂದು ಆಶಿಸುತ್ತೇವೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ