ಸಂತೆಗದ್ದಲದಲ್ಲೂ ಸಂತನಂತಿದ್ದ ರಾವ್‌ಬೈಲ್
“ನಾನೆಂದೂ ಅವರ ಬಳಿ ಹೆಚ್ಚು ಮಾತನಾಡದಿದ್ದರೂ ಅವರ ಪ್ರಭಾವ ನನ್ನ ಎಳೆವಯಸ್ಸಿನಲ್ಲಿಯೇ ಆಗಿದೆ. ಅದರಿಂದಾಗಿ ಬಣ್ಣಗಳ ಬಗೆಗೆ, ವಿನ್ಯಾಸದ ಬಗೆಗೆ, ಚಿತ್ರಕಲೆಯ ಬಗೆಗೆ ನನ್ನೊಳಗೆ ಅಮೂರ್ತ ಕಲ್ಪನೆ ಮತ್ತು ಅದರ ಬಗೆಗೆ ಗಾಢವಾದ ಒಲವನ್ನು ಮೂಡಿಸಿದೆ. ಮುಖ್ಯವಾಗಿ ಅಲಂಕಾರಿಕ ಚಿತ್ರಗಳ ಭ್ರಮೆಯಿಂದ ನನ್ನನ್ನು ದೂರಮಾಡಿದೆ. ಮನುಷ್ಯ ಮುಖದ ಓರೆಕೋರೆಗಳನ್ನು ಅತ್ಯಂತ ಸರಳವಾದ ಕೆಲವೇ ರೇಖೆಗಳಲ್ಲಿ ಹಿಡಿದಿಡುತ್ತಿದ್ದ ರಾವ್‌ಬೈಲ್ ತುಂಬು ಜೀವನವನ್ನು ಸಂತೆಯ ಗದ್ದಲದಲ್ಲೇ ಮಾಡಿದವರು”
ರಂಗ ಕಲಾವಿದೆ ರಜನಿ ಗರುಡ ಬರೆದ ಅನುಪಮ ಕಲಾವಿದನೊಬ್ಬನ ನೆನಪುಗಳು.