‘ಅಮ್ಮನ್ ಮನೆ ಅಪೀ. ಹೆದರ್ಕ್ಯಳಡʼ…: ಜಯರಾಮ ಹೆಗಡೆ ಜೀವನ ಕಥನದ ಆಯ್ದ ಭಾಗ
ಜಯರಾಮ ಹೊರಗೆ ಬಂದು ಮಡಿ ಬಿಚ್ಚಿ ಅಂಗಿ ಚಡ್ಡಿ ಹಾಕಿಕೊಳ್ಳುವಾಗಲೂ ಕೈ ಕಾಲು ನಡುಕ ಹೋಗಿಲ್ಲ. ಹೊರಬಂದ ಮೇಲೆ ಹೊರಾಂಗಣದಿಂದಲೇ ಒಂದು ಸುತ್ತು ಪ್ರದಕ್ಷಿಣಿ ಹಾಕಿ ದೇವರಿಗೆ ಒಂದು ಸಲ ಕೈಮುಗಿದು ಹೋಗುವುದು ರೂಢಿ. ಹಾಗೇ ಇವನೂ ಆಚೀಚೆ ನೋಡದೆ ಸುತ್ತು ಪ್ರದಕ್ಷಿಣೆ ಬರುತ್ತಿದ್ದಾನೆ. ಏಕಾಏಕಿ ದೇವಾಲಯದ ಮೇಲ್ಛಾವಣಿಯ ಕಡೆ ದೃಷ್ಟಿ ಹೋದಾಗ ಏನನ್ನು ಕಾಣುತ್ತಾನೆ? ನಾನಾ ವಿಧದ ಹಾವುಗಳು ನೇತಾಡುತ್ತಿವೆ. ಅವವುಗಳೇ ಜೊತೆಯಾಟ ಆಡುತ್ತಿವೆ.
ಜಯರಾಮ ಹೆಗಡೆ ಜೀವನ ಕಥನ ‘ಬೀದಿಯ ಬದುಕು’ ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ
