ಮೂರ್ತದಿಂದ ಅಮೂರ್ತದೆಡೆಗೆ: ನಾರಾಯಣ ಯಾಜಿ ಬರಹ
ಪಾಶ್ಚಾತ್ಯವೇ ಇರಲಿ ಪೌರಾತ್ಯವೇ ಇರಲಿ ಈ ನಾಟಕ ಹೇಗೆ ಮತ್ತು ಯಾವಾಗ ವಿಕಸಗೊಂಡಿತು ಎನ್ನುವದನ್ನು ನಿಖರವಾಗಿ ತಿಳಿಸಲು ಸಾಧ್ಯವಾಗುವದಿಲ್ಲ. ಪ್ರಾಚೀನ ಗ್ರೀಸಿನ ಮೊದಲ ನಾಟಕಗಳು ಮೇಳಗೀತಗಳಿಂದ ಮೊದಲ ಅಭಿನಯ ಮತ್ತು ನಟನೆಗಳು ಹುಟ್ಟಿರಬಹುದೆನ್ನುವದನ್ನು ತತ್ವಜ್ಞಾನಿ ಅರಿಸ್ಟಾಟಲ್ ಹೇಳುತ್ತಾನೆ. ನಟನೆ ಎನ್ನುವುದು ಜೀವಿಗಳ ಕಲಿಕೆಯ ಮೊದಲ ಹಂತವೆನ್ನಬಹುದು.
ವಿಶ್ವರಂಗಭೂಮಿಯ ದಿನಾಚರಣೆಯ ಹೊತ್ತಿನಲ್ಲಿ ಭರತನ ನಾಟ್ಯಶಾಸ್ತ್ರದ ಪ್ರಸ್ತುತತೆಯ ಕುರಿತು ನಾರಾಯಣ ಯಾಜಿ ಬರಹ
						