Advertisement

Category: ಸರಣಿ

ಸಾಮಾಜಿಕ ಜನಜೀವನ: ಭಾಗ ಒಂದು

ರಾಜರ ಸಹಾಯಕ್ಕಾಗಿ ಒಂದು ಬೋಧಕ ಮಂಡಳಿಯಿತ್ತು. ಪುರೋಹಿತನು ಇದರ ಪ್ರಧಾನಿಯಾಗಿದ್ದನು. ಸೇನಾನಿ ಮತ್ತು ಗ್ರಾಮದ ಮುಖ್ಯಸ್ಥ ಗ್ರಾಮಣಿಯು ಯುದ್ಧದಲ್ಲಿ ರಾಜನಿಗೆ ಸಹಾಯಕರಾಗಿರುತ್ತಿದ್ದರು. ಸಮಿತಿ ಮತ್ತು ಸಭ ಎಂಬ ಎರಡು ಸಂಸ್ಥೆಗಳಿದ್ದುವು. ರಾಜ್ಯವು ವಿಸ್ತಾರವಾಗುತ್ತ, ರಾಜನ ಅಧಿಕಾರವು ಹೆಚ್ಚುತ್ತಾ ಬಂದು, ವಾಜಪೇಯ, ರಾಜಸೂಯ, ಅಶ್ವಮೇಧವೆಂಬ ಯಾಗಗಳನ್ನು ಮಾಡುವ ಅರಸರ ರಾಜ್ಯಗಳು ರಾಜ್ಯ, ವೈರಾಜ್ಯ, ಸಾಮ್ರಾಜ್ಯಗಳೆಂದು ಕರೆಯಲ್ಪಡುತ್ತಿದ್ದುವು. ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿ

Read More

ತೀರಿಹೋದವರನ್ನು ಕುರಿತು ಮಾತು ಬೇಕೆ?

ತೀರಿಹೋದವರನ್ನು ಎಷ್ಟು ನೆನಸಿಕೊಳ್ಳಬೇಕು, ಹೇಗೆ, ಯಾವಾಗ ನೆನಸಿಕೊಳ್ಳಬೇಕು ಎಂಬುದು ಒಂದು ಕಲೆ, ವಿಜ್ಞಾನ ಮತ್ತು ಕೈಗಾರಿಕೆ. ಸದ್ಯವನ್ನೇ ತೆಗೆದುಕೊಳ್ಳಿ. ಗಾಂಧಿ, ನೆಹರು, ಸಾವರ್ಕರ್‌, ಟಿಪ್ಪು, ಇವರನ್ನೆಲ್ಲ ಹೇಗೆ, ಎಷ್ಟು ನೆನಸಿಕೊಳ್ಳಬೇಕು, ಎಷ್ಟು ಮರೆಯಬೇಕು, ಇವರ ಬಗ್ಗೆ ಎಷ್ಟು, ಯಾವ ಮಾತನಾಡಬೇಕು ಎಂದು ನಮಗೆಲ್ಲ ಪಾಠ ಹೇಳಿ ಕೊಡಲು ಜ್ಞಾನವಂತರ ಎಷ್ಟು ದೊಡ್ಡ ಪಡೆಯೇ ಇದೆ. ಶ್ರಾದ್ಧ ಕರ್ಮಗಳನ್ನು ಮಾಡಿಸುವ ಪುರೋಹಿತರ ಸಂಖ್ಯೆಗಿಂತ ಈ ಪಡೆಯಲ್ಲೇ ಹೆಚ್ಚು ಜನ ಉದ್ಯೋಗ ಪಡೆದಿದ್ದಾರೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿ

Read More

ಬದುಕೇ ಒಂದು ಓಟದ ಸ್ಪರ್ಧೆ…

ಚಿತ್ರಕ್ಕೆ ನಮ್ಮ ಪ್ರವೇಶ, ಗಡಿಯಾರವನ್ನು ತಲೆಯ ಮೇಲಿಟ್ಟುಕೊಂಡಿದ್ದ ಮರದ ಮುಖದ ಅಷ್ಟಾವಕ್ರ ಪ್ರಾಣಿ ಬಾಯಿ ತೆರೆದು ಉಂಟಾದ ಕತ್ತಲೆಯಲ್ಲಿ ಕ್ಯಾಮೆರಾ ಜೂ಼ಮ್-ಇನ್ ಮಾಡುವ ಮೂಲಕ. ಆಗ ಎದುರಾಗುತ್ತದೆ ಒಂದಕ್ಕೊಂದು ಸಂಬಂಧ ಮತ್ತು ಸಾತತ್ಯವಿರದ ಪ್ರಶ್ನೆ ಮತ್ತು ಉತ್ತರಗಳನ್ನು ಹುಡುಕಾಡುವುದೇ ಮನುಷ್ಯನ ಬದುಕು ಎನ್ನುವುದನ್ನು ಟಿ. ಎಸ್. ಎಲಿಯಟ್ ಮತ್ತು ಹೆರ್‌ಬರ್ಗರ್ ಅವರಿಂದ ಉದ್ಧರಿಸಿದ ಸಾಲುಗಳು ಮೂಡಿ, ಅಡ್ಡಾದಿಡ್ಡಿ ಓಡೋಡುತ್ತಲಿರುವ ಜನಜಂಗುಳಿ ಮರೆಯಾಗುತ್ತಿದ್ದಂತೆ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ಟೆಲಿಫೋನ್ ಬೂತಿನಲ್ಲಿ ಮಾನಿ ಲೋಲಾಗೆ ಮಾತಾಡುವ ದೃಶ್ಯದಲ್ಲಿ ಘಟನೆಯ ಮೂಲಕ್ಕೆ ಪರಿಚಿತಗೊಳ್ಳುತ್ತೇವೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ ಸರಣಿ

Read More

ಒಳಾಂಗಣದ ಬದುಕು

ಒಳಾಂಗಣದ ಬದುಕು ಎಷ್ಟೇ ಚೆನ್ನಾಗಿದ್ದರೂ, ಸುಂದರವಾಗಿದ್ದರೂ ಅದೇ ಸರ್ವಸ್ವವಲ್ಲ. ಮನುಷ್ಯ ಕೊನೆಗೂ ಗೆಲ್ಲಬೇಕಾದ್ದು ಹೊರ ಜಗತ್ತನ್ನು, ಬದುಕಬೇಕಾದ್ದು ಕೂಡ ಹೊರ ಜಗತ್ತಿನಲ್ಲಿ. ಒಳಾಂಗಣದಲ್ಲೇ ಲೋಲುಪರಾಗಿ ಕಾಲ ಕಳೆಯುತ್ತಾ ಕೂರಬಾರದು. ಎರಡರ ಸಮನ್ವಯವಿರಬೇಕು. ಪರಸ್ಪರ ಚಲನೆಯಿರಬೇಕು. ಹುಲಿಕಲ್ಲು ನೆತ್ತಿಯ ಮೇಲಿನ ಒಳಾಂಗಣದ ಸುತ್ತ ಇರುವ ಅನಂತ ಕಾಲದ ಪ್ರಾಕೃತಿಕ ಶ್ರೀಮಂತಿಕೆಯ ಹೊರಾಂಗಣದ ಮಹತ್ವ ಕುವೆಂಪು ಭೇಟಿ ಮಾಡಿದ ಎಷ್ಟೋ ದಿನಗಳ ನಂತರ ನನಗೆ ಅರ್ಥವಾಯಿತು
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಎರಡನೇ ಪ್ರಬಂಧ ನಿಮ್ಮ ಓದಿಗೆ

Read More

‘ಕಾಲೇ ಕೋ ಜಿಂದಗಿ ನಹಿ’

ಎರಡನೇ ಮಹಾಯುದ್ಧದಲ್ಲಿ ಸ್ಟ್ಯಾಲಿನ್ ವಿಶಿಷ್ಟವಾದ ಯುದ್ಧತಂತ್ರಗಳಿಂದ ಫ್ಯಾಸಿಸ಼ಂ ಸೋಲಿಸಿದ್ದು ರೋಮಾಂಚನಕಾರಿಯಾಗಿದೆ. ಎಂಥ ಪ್ರಸಂಗದಲ್ಲೂ ಉತ್ಪಾದನೆ ನಿಲ್ಲಲಿಲ್ಲ. ಫ್ಯಾಸಿಸ್ಟ್ ಸೈನ್ಯ ದೇಶದೊಳಗೆ ನುಗ್ಗಿದಂತೆಲ್ಲ ಆ ಪ್ರದೇಶದಲ್ಲಿನ ಕಾರ್ಖಾನೆಗಳನ್ನು ಮೊದಲೇ ಮುಂದಿನ ಪ್ರದೇಶದಲ್ಲಿ ಶಿಫ್ಟ್ ಮಾಡಲಾಗುತ್ತಿತ್ತು. ಹೀಗಾಗಿ ವೈರಿಗಳಿಗೆ ಸಿಗದಂತೆ ಮತ್ತು ಉತ್ಪಾದನೆ ಸಂಪೂರ್ಣ ಸ್ಥಗಿತಗೊಳ್ಳದಂತೆ ಸ್ಟ್ಯಾಲಿನ್ ನೋಡಿಕೊಂಡಿದ್ದ. ಭಾರಿ ಹಿಮ ಬೀಳುವ ಸಂದರ್ಭದಲ್ಲೇ ಹಿಟ್ಲರನ ಸೈನ್ಯ ಮಾಸ್ಕೋ ಪ್ರವೇಶಿಸುವಂತೆ ಯೋಜನೆ ರೂಪಿಸಿದ್ದ. ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ