Advertisement

Category: ಸರಣಿ

ನಿನ್ನ ಪ್ರೇಮ ನಿನ್ನೆಯ ವೃತ್ತಪತ್ರಿಕೆಯಂತೆ..

ಒರ್ಲಾಂಡೊ ಯಾವಾಗಲೂ ಸಮೀಪದಲ್ಲಿ ಇದ್ದಾನೆ ಎನ್ನುವ ಭಾವನೆ ಅವಳಿಗೆ. ಹೀಗಾಗಿ ಅವಳು ಕಾರಿನಲ್ಲಿ ಹೋಗುವಾಗ ಹಿಂಬದಿಯ ಸೀಟಿನಲ್ಲಿ ಅವನು ಕುಳಿತಿರುವಂತೆ ತೋರುವುದು, ಹಾಡುಗಳ ಮಧ್ಯೆ ಉಳಿದವರೆಲ್ಲ ಮಾಯವಾಗಿ ಅಷ್ಟು ದೂರದಿಂದ ತನ್ನೆಡೆಗೆ ಹಸನ್ಮುಖಿಯಾಗಿ ನಡೆದು ಬರುತ್ತಿರುವಂತೆ ಕಾಣುವುದು ಮತ್ತು ಎಲ್ಲರೂ ಮರೆಯಾಗಿ ಬೆಳ್ಳಿ ಪದರುಗಳ ರೆಕ್ಕೆಗಳು ಮೂಡಿ ಹಾರಾಡುತ್ತಿರುವ ಭಾವನೆಯಿಂದ ನರ್ತಿಸುವುದನ್ನು ಕಲ್ಪಿಸಿಕೊಳ್ಳುತ್ತಾಳೆ.
ಎ.ಎನ್‌. ಪ್ರಸನ್ನ ಬರೆಯುವ ಲೋಕ ಸಿನಿಮಾ ಟಾಕೀಸ್‌ ಸರಣಿ

Read More

ಕಾಮನ ಬಿಲ್ಲ ಎದೆಗೆ ಏರಿಸಿದ್ದೆ

ಪೆಂಟೆಗೆ ಬಂದೆ. ತೋಟದ ಮರೆಯಲ್ಲೊಂದು ಮಾಯಾಲೋಕ ಅದು. ಪಡ್ಡೆ ಹುಡುಗ ಹುಡುಗಿಯರೆ ಹೆಚ್ಚಿದ್ದರು. ಕುಡುಕರ ಸ್ವರ್ಗ. ಮಾಂಸಕ್ಕೆ ಕಾರ ಮಸಾಲೆ ಹಚ್ಚಿ ಸೌದೆ ಬೆಂಕಿಯಲ್ಲಿ ಸುಟ್ಟು ಎಂಡಗುಡುಕರಿಗೆ ಮಾರುತಿದ್ದರು. ವಿಚಿತ್ರ ಕಂಟು ಕಮಟು ವಾಸನೆ. ಟಿಕೇಟು ಪಡೆದೆ. ಇಷ್ಟವಾದ ಬಟಾಣಿ, ಕಡಲೆ ಬೀಜ ತಿನ್ನುತ್ತ ಕೂತಿದ್ದೆ. ಹತ್ತು ಗಂಟೆಗೆ ಸಿನಿಮಾ ಆರಂಭವಾಗುತ್ತಿದ್ದುದು. ಮೈಸೂರಿನದೇ ನೆನಪು. ತಾತನೂ ಸರಿ ಇಲ್ಲ ಎನಿಸಿತ್ತು. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ಹೊಸ ಬರಹ

Read More

ಬಹುಮಾನವಾಗಿ ಸಿಕ್ಕ ಆನೆಮರಿಯೊಂದರ ಜೀವನಗಾಥೆ

ಕೊರೆಯುವ ನೆಲದ ಮೇಲೆ ಕಾಲಿಡುತ್ತಿದ್ದ ಆನಾಬೆಲ್‌ಳ ಪಾದಗಳಲ್ಲಿ ಗಾಯವಾಗತೊಡಗಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಆನೆಗಳಲ್ಲಿ, ಪಾದಗಳೂ ನಮ್ಮ ಕಿವಿಯೊಳಗಿನ ಇಯರ್-ಡ್ರಂಗಳಂತೆ ಕೆಲಸಮಾಡುತ್ತವೆ. ವಿಜ್ಞಾನಿಗಳು ಹೇಳುವಂತೆ, ಆನೆಯ ಗುಂಪೊಂದು ನಡೆಯುತ್ತಿದ್ದರೆ, ಆ ಗುಂಪಿನಿಂದ ಇಪ್ಪತ್ತು ಮೈಲಿ ದೂರದಲ್ಲಿರುವ ಆನೆಯೊಂದು, ಆ ಆನೆಗಳ ನಡೆತದಿಂದಾಗುವ ಕಂಪನಗಳನ್ನು ತನ್ನ ಪಾದದ ಮೂಲಕವೇ ಗುರುತಿಸಬಲ್ಲದಂತೆ.
ಶೇಷಾದ್ರಿ ಗಂಜೂರು ಬರೆಯುವ ‘ಆನೆಗೆ ಬಂದ ಮಾನ’ ಸರಣಿಯಲ್ಲಿ ಆನೆಮರಿಯ ಬದುಕಿನ ಕತೆಯೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ

Read More

ಕನಸುಗಾರ್ತಿಯೊಬ್ಬಳು ಬೇಹುಗಾರ್ತಿಯಾದ ಕತೆ

ಹಿಂದೆ ಇದ್ದ ಅಬಿಂಗ್ಡನ್ ಪ್ರಾಂತ್ಯದ ಮನೆಯಲ್ಲಿ ವ್ಯರ್ಥವಾದ ಸಮಯವನ್ನು ಇಲ್ಲಿ ತುಂಬಿಸಿಕೊಳ್ಳುತ್ತಿದ್ದೇನೆ. ನೀನು ಮರಳುವಾಗ ಬಹುಶಃ ಇಲ್ಲೇ ಇರುತ್ತೇನೆ” ಎಂದು ಬರೆದಿದ್ದಳು. ಮುಂದೊಂದು ದಿನ ತಾನು ಜರ್ಮನಿಯಲ್ಲಿ ಸೆರೆಯಲ್ಲಿರುವುದನ್ನು ಅಂದು ಅವಳು ಊಹಿಸರಲಿಲ್ಲ, ಆದರೆ ಹಾಗೆ ಸೆರೆಯಲ್ಲಿರುವಾಗ, ಊಟದ ತಟ್ಟೆಯ ಮೇಲೆ ತನ್ನ ಹೆಸರನ್ನು “ನೋರಾ ಬೇಕರ್, ರೇಡಿಯೋ ನಿರ್ವಾಹಕಿ” ಎಂದು ಕೆತ್ತಿ ಜೈಲಿನಲ್ಲಿರುವ ಸಹವಾಸಿಗಳೊಡನೆ ಸಂಪರ್ಕಿಸುತ್ತಿದ್ದಳು.
ಯೋಗೀಂದ್ರ ಮರವಂತೆ ಬರೆಯುವ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯ ಹೊಸ ಬರಹ

Read More

ನಾವು ಎತ್ತ ಸಾಗಿದ್ದೇವೆ?

ಈ ಜಾತ್ರೆಯಲ್ಲಿ ಬಡಿಗೆಗಳನ್ನು ಕೊಳ್ಳುವುದೊಂದು ವಿಶೇಷ. ಹಿಡಿಯಲು ಅನುಕೂಲವಾಗುವಷ್ಟು ದಪ್ಪನೆಯ ಬೆತ್ತದ ಬಡಿಗೆಗಳಿಗೆ ಕೇರಿನ ರಸದಿಂದ ಡಿಸೈನ್ ಮಾಡಿ ಸಿಂಗರಿಸುತ್ತಿದ್ದರು. ಈ ಜಾತ್ರೆಯಲ್ಲಿ ಮನೆಗೆ ಮತ್ತು ಒಕ್ಕಲುತನಕ್ಕೆ ಬೇಕಾದ ಎಲ್ಲ ವಸ್ತುಗಳು ಕೂಡ ಸಿಗುತ್ತಿದ್ದವು. ಎತ್ತುಗಳ ಆಲಂಕಾರಿಕ ವಸ್ತುಗಳು ರೈತರ ಮನಸೂರೆಗೊಳ್ಳುತ್ತಿದ್ದವು. ತಮ್ಮ ದನಕರುಗಳನ್ನು ಸಿಂಗರಿಸುವುದೆಂದರೆ ರೈತರಿಗೆ ಎಲ್ಲಿಲ್ಲದ ಖುಷಿ. ಅವರು ಆ ಪರಿಯಿಂದ ಕಾಳಜಿ ವಹಿಸಿ ತಮ್ಮ ಮಕ್ಕಳ ಸಿಂಗಾರ ಮಾಡಿದ್ದನ್ನು ನಾನು ಹಳ್ಳಿಯಲ್ಲಿ ನೋಡಲಿಲ್ಲ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ