Advertisement

Category: ಸರಣಿ

ನನ್ನ ನಿರುಮ್ಮಳ ಇರುಳು ನನ್ನದು…

ಅಲ್ಲೊಂದು ಸಹಜ ಜಲ ಬಾವಿ ಇತ್ತು ಅನಾದಿಯಿಂದಲೂ. ಅದರ ಪವಿತ್ರ ಜಲದಿಂದಲೇ ಆ ಕಾಲದ ವೈದಿಕರು ಧರ್ಮ ಕಾರ್ಯ ಎಸಗುತ್ತಿದ್ದುದು… ಅದಕೆಂದೇ ಆ ಗೊಂಡಾರಣ್ಯ ಪ್ರಸಿದ್ಧವಾಗಿತ್ತು ಆ ಕಾಲಕ್ಕೆ. ಈಗದು ಒಂದು ಹೊಂಡವಾಗಿತ್ತು. ಬೇಸಿಗೆಯಲ್ಲಿ ದಾಹಕ್ಕಿಳಿದ ಪ್ರಾಣಿಗಳು ಆ ಸನಾತನ ಜಾರಿನ ಹೂಳಿನಲ್ಲಿ ಸಿಲುಕಿ ಎದ್ದು ಬರಲಾರದೆ ಅಲ್ಲೇ ಸಮಾಧಿ ಆಗಿದ್ದವು. ಬಾಯಾರಿ ಅಲ್ಲಿ ಸಿಲುಕಿದವರ ಪಾಡನ್ನು ಅರ್ಥಮಾಡಿಕೊಳ್ಳಿ! ಧರ್ಮ ಸೂಕ್ಷ್ಮವನ್ನು ನಾಳೆ ಅರ್ಥ ಮಾಡಿಕೊಳ್ಳಿ ಮಕ್ಕಳೇ; ಈಗಲೇ ಹೇಳಬಾರದು!

Read More

ಕಣ್ಣು ಕಾಣದ ಗಾವಿಲರು

ಅಂದು ಚೆಲುವಾಂಬ ಆಸ್ಪತ್ರೆಯ ಹೆರಿಗೆಯ ಕೋಣೆಯಲ್ಲಿ ಸಾಲು ಸಾಲು ಹೆರಿಗೆಗಳಾದವು. ಅಂದು ಇದ್ದದ್ದು ಮೂರು ಜನ ದಾದಿಯರು ಮತ್ತು ತರಬೇತಿ ವೈದ್ಯನಾಗಿ ನಾನು ಮಾತ್ರ. ಹಿರಿಯ ವೈದ್ಯರು ಅಗತ್ಯಬಿದ್ದರೆ ಮಾತ್ರ ಕರೆಸಿಕೊಳ್ಳುವ ಹಾಗೆ ಅಲ್ಲಿಯೇ ಪಕ್ಕದಲ್ಲಿದ್ದ ಕೊಠಡಿಯಲ್ಲಿ ಇದ್ದರು. ಕೋಣೆಯಲ್ಲಿದ್ದ ಆರೂ ಹೆರಿಗೆಯ ಮಂಚಗಳ ಮೇಲೆ ವಿವಿಧ ರೀತಿಯ ಆಕ್ರಂದನಗಳು ನನಗಂತೂ ಹೊಸ ಅನುಭವ. ಆದರೆ, ತನ್ನ ಮಗುವಿನ ಮೊದಲ ಅಳುವನ್ನು ಕೇಳಿದಾಗ ಒಬ್ಬ ತಾಯಿಯರ ಮುಖಾರವಿಂದದಲ್ಲಿ ಮೂಡಿ ಬರುವ ಮಂದಹಾಸವನ್ನು ಮಾತ್ರ…

Read More

ಗಂಟಿಚೋರರ ಸಾಂಪ್ರದಾಯಿಕ ಶಿಕ್ಷಣ

ಈ ಬಗೆಯ ಸವಾಲು ಸೆಟ್ಲಮೆಂಟಿಗೆ ಬಂದ ಮೇಲೆ ಒಂದು ಹಂತದಲ್ಲಿ ಬದಲಾಯಿತು. ಕಾರಣ ಈ ಸೆಟ್ಲಮೆಂಟುಗಳಲ್ಲಿ ಕ್ರಿಮಿನಲ್ ಟ್ರೈಬ್ಸ್ ಎಂದು ಯಾವುದನ್ನು ಕರೆಯುತ್ತಿದ್ದರೋ ಆ ಸಮುದಾಯಗಳು ಒಟ್ಟಿಗೆ ಬಾಳುವುದಕ್ಕೆ ಆರಂಭಿಸಿದವು. ಅಂತೆಯೇ ಬ್ರಿಟಿಷರ ಕಣ್ಗಾವಲು, ಹಾರುವ ಹಕ್ಕಿಯನ್ನು ಪಂಜರದೊಳಿಟ್ಟಂತಹ ಸ್ಥಿತಿ -ಹೀಗೆ ಏನೆಲ್ಲವು ಸೆಟ್ಲಮೆಂಟಿನಲ್ಲಿದ್ದರೂ ಗ್ರಾಮೀಣ ಭಾಗದಲ್ಲಿದ್ದ ಅವಮಾನದ ಸ್ವರೂಪ ಇಲ್ಲದಾಯಿತು. ಸೆಟ್ಲಮೆಂಟಿನ ಪ್ರತ್ಯೇಕ ಶಾಲೆಗಳಲ್ಲಿ ಈ ಸಮುದಾಯವನ್ನು ಮೌಲ್ಯಮಾಪನ…

Read More

ಗೀತಾಂಜಲಿಯ ವಿಶ್ವಕವಿ, ಬಹುಸಂಸ್ಕೃತಿಯ ವಕ್ತಾರ

ಹದಿನೇಳು ವರ್ಷದ ರವೀಂದ್ರನಾಥ, ಮತ್ತೆ ಮತ್ತೆ ಓದಿಸಿ ಬಾಯಿಪಾಠ ಮಾಡಿಸುವ ಇಂಗ್ಲೆಂಡ್ ನ ಶಿಕ್ಷಣದಿಂದ ಭ್ರಮನಿರಸನ ಹೊಂದಿ ಪದವಿ ಸರ್ಟಿಫಿಕೇಟ್ ದೊರೆಯುವ ಮೊದಲೇ ಓದು ನಿಲ್ಲಿಸಿ ಭಾರತಕ್ಕೆ ಮರಳಿದ್ದರು. ೧೯೦೧ರಲ್ಲಿ ಕೊಲ್ಕತ್ತಾದ ಗೌಜು ಗದ್ದಲಗಳಿಂದ ದೂರ, ನದಿ ತೊರೆಗಳ ಜುಳುಜುಳು ಕೇಳಿಸುವ, ನಿಬಿಡ ಮರಗಿಡಗಳ ಹಸಿರು ತುಂಬಿರುವ ನೈಸರ್ಗಿಕ ಮಡಿಲಿನ ಹಳ್ಳಿಯಲ್ಲಿ ಶಾಂತಿನಿಕೇತನ ವಿದ್ಯಾಲಯ ಆರಂಭಿಸಿದರು.
ಯೋಗೀಂದ್ರ ಮರವಂತೆ ಬರೆಯುವ…

Read More

ನಾವೆಲ್ಲರೂ ಜೊತೆಯಾಗಿದ್ದೀವಿ ಎನ್ನುವ ಈ ಹೊತ್ತು

ಕಳೆದ ಭಾನುವಾರ ಬೆಳಗ್ಗೆ ವಾರದ ದಿನಸಿ ಕೊಳ್ಳಲು ಮನೆಯಿಂದ ಹೊರಟ ನಮ್ಮ ಸಂಸಾರ ಅರ್ಧಂಬರ್ಧ ಖಾಲಿಯಾಗಿದ್ದ ಸೂಪರ್ ಮಾರ್ಕೆಟ್ಟಿನಿಂದ ಹಿಂದಿರುಗುವಷ್ಟರಲ್ಲಿ ಅಂದರೆ ಸುಮಾರು ಒಂದೂವರೆ ಗಂಟೆಯಲ್ಲಿ ನಾವು ಹೊರಟಿದ್ದ ರಸ್ತೆಗಳಲ್ಲಿ ಪ್ರವಾಹದ ನೀರು ತುಂಬಿಕೊಂಡು ಮನೆ ಸೇರಿಕೊಳ್ಳಲು ನಾವು ಆ ಇಳಿ ಮಧ್ಯಾಹ್ನ ಕಷ್ಟಪಡಬೇಕಾಯಿತು. ಕೊನೆಗೆ ಗೂಡು ಸೇರಿದಾಗ ಜೀವದ ಮೇಲೆ ಗೌರವವುಂಟಾಗಿತ್ತು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ