ಒಂದು ಬೊಗಸೆ ನೀರಿಗೆ ಹರಸಾಹಸ
ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ ತೆಂಗಿನಮರಗಳು ರಾತ್ರಿ ಉಚ್ಚೆ ಉಯ್ಯಲು ಹೊರ ಬಂದು ನೋಡಿದಾಗ ದೆವ್ವದಂತೆ ಕಾಣುತ್ತಿದ್ದವು. ಹಾಸ್ಟೆಲ್ ಹುಡುಗರು ಸಂಜೆ ಸ್ಕೂಲಿಂದ ಬಂದರೆಂದರೆ ಗುರಿ ಇಟ್ಟು ಕಲ್ಲು ಬೀಸಿ ತೆಂಗಿನ ಕಾಯಿ ಉದುರಿಸುತ್ತಿದ್ದರು. ಪ್ರತಿನಿತ್ಯ ಒಂದೆರಡು ತೆಂಗಿನ ಕಾಯಿ ಕಿತ್ತು ಚೂಪಾದ ಕಲ್ಲಿನಿಂದ ಮತ್ತು ಹಲ್ಲಿನಿಂದ ಸಿಪ್ಪೆ ಸಿಗಿದು ಕಾಯಿ ಕೆಚ್ಚಿ ಪಚಿಡಿ ಮಾಡಿ ತಿನ್ನುತ್ತಿದ್ದೆವು. ತೋಟದ ಮಾಲೀಕರಿಗೆ ಗೊತ್ತಾದರೆ ದೊಣ್ಣೆಯೊಂದಿಗೆ ಓಡಿಸಿಕೊಂಡು ಬರುತ್ತಿದ್ದರು. ಅವರ ಹತ್ತಿರ ಬಂದೂಕು ಇದೆ, ಅವರು ನಿರ್ದಯಿಗಳು, ಕಳ್ಳತನ ಮಾಡಿದರೆ ಗುಂಡು ಹಾರಿಸಿ ಸುಟ್ಟು ಬಿಡುತ್ತಾರೆಂದು…”
Read More
