Advertisement

Category: ಸರಣಿ

ಗೋ ಮಾಂಡೋ…. ಗೋ…!!: ಕಾರ್ತಿಕ್‌ ಕೃಷ್ಣ ಸರಣಿ

ಮೊದಲ ಪ್ರಯತ್ನ…. ಕೋಲನ್ನು ಹಿಡಿದು ಅಷ್ಟು ದೂರದಿಂದ ಓಡುತ್ತಾ ಬಂದ ಡೂಪ್ಲ್ಯಾಂಟೀಸ್‌ನನ್ನು ಎರಡನೇ ಸ್ಥಾನದಲ್ಲಿದ್ದ ಅಮೆರಿಕಾದ ಕೆಂಡ್ರಿಕ್ಸ್ ಹುರಿದುಂಬಿಸುತ್ತಿದ್ದ… ಪ್ರೋತ್ಸಾಹಿಸುತ್ತಿದ್ದ… ಎಲ್ಲರದ್ದೂ ಒಂದೇ ಚೀತ್ಕಾರ… “ಗೋ ಮಾಂಡೋ… ಗೋ..” ಮಾಂಡೋ… ಕೋಲನ್ನು ಬಾಕ್ಸ್‌ಗೆ ನೆಟ್ಟು ಗಾಳಿಯಲ್ಲಿ ಗಿರಕಿ ಹೊಡೆದು, ಅಡ್ಡ ಕೋಲನ್ನು ದಾಟಿ, ಇನ್ನೇನು ಕೈಯನ್ನು ಮೇಲೆತ್ತಬೇಕು.. ಮಾಂಡೋನೊಡನೆ ಅಡ್ಡ ಕೋಲೂ ಕೆಳಗುರುಳಿತ್ತು… ನಿಶ್ಯಬ್ದ… ಲಯಬದ್ಧವಾಗಿ ಚೀರುತ್ತಿದ್ದವರೆಲ್ಲಾ ‘ಓ….’ ಎಂದು ನಿಟ್ಟುಸಿರುಬಿಟ್ಟಿದ್ದರು.
ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ

Read More

ಕಿಶೋರ್‌ ಕುಮಾರ್‌ ಎಲ್ಲಿ ಹೋದ್ರು?: ಎಚ್. ಗೋಪಾಲಕೃಷ್ಣ ಸರಣಿ

ಆಗತಾನೇ ಅಡಿಗರ ಕವನಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಶುರು ಮಾಡಿದ್ದೆ. ಅವರ ಮತ್ತು ಇತರ ಕವಿಗಳ ಹಲವು ಪದ್ಯಗಳ ಆರಂಭಿಕ ಸಾಲು ನೆನಪಿನಲ್ಲಿ ಇತ್ತು. ಕಟ್ಟುವೆವು ನಾವು ಹೊಸ ನಾಡೊಂದನು…., ನಾನು ಮಾಯವಾದಿಯಾಗಿ ಬಂದೆ, ಇದು ನಮ್ಮ ಮನೆಯ ಕಥೆ, ಕಾಲವ ನಾನು ನಿಂತೆ, ಮರಳಿನಿಂದ ಎಣ್ಣೆ ಹಿಂಡುವ ಗಾಣ ಮೊದಲಾದ ಸಾಲುಗಳು ತಲೆಯಲ್ಲಿ ಆಳವಾಗಿ ಹುದುಗಿತ್ತು…… ಇವು ಅಲ್ಪ ಸಲ್ಪ ಬದಲಾವಣೆ ಒಂದಿಗೆ ಪೇಪರಿನ ಮೇಲೆ ಮೂಡಿದವು..
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಗಡಗಡ ನಡುಗಿಸಿದ ಪಾವಗಡದ ತೋಳ: ಸುಮಾ ಸತೀಶ್ ಸರಣಿ

ಒಂದೇ ಉಸಿರ್ನಾಗೆ ಅಂಗೇ ವಾಪಸ್ ತಿರುಗ್ದೆ. ಒಂದು ಕಿತ, ಅಲ್ಲಾ ಕಾಲು ನೋಡ್ಬೇಕಿತ್ತು.‌ ತಿರುಗ್ಸಿದ್ರೆ ಮಾತ್ರ ದೆವ್ವ ಅಲ್ವಾ ಅಂತ ಅನ್ನುಸ್ತು. ಇನ್ನೊಂದು ಕಿತ ಬ್ಯಾಡ್ವೇ ಬ್ಯಾಡ, ತೋಳ ‍ದೆವ್ವ ಅಲ್ಲ. ಒಂದ್ಕಿತ ಹಿಂದುಕ್ ತಿರ್ಗಿ ನೋಡ್ತಿವ್ನಿ, ಅನುಮಕ್ಕ ಕೈ ತೋರ್ಸಿ ನಿಲ್ಲು ಅಂತಾವ್ಳೆ. ಹಿಂದಿಂದೇನೆ ಬರ್ತಾವ್ಳೆ. ದ್ಯಾವ್ರೆ ಏನ್ ಮಾಡ್ಲಿ. ಈಗೇನಾರಾ ಈ ತೋಳುದ್ ಕೈಯಾಗೆ ಸಿಕ್ಕಿ ಸತ್ತು ನರಕುಕ್ಕೇನಾರೂ ಹೋದ್ರೆ, ದರದರನೆ ಎಳ್ಕೋ ಹೋಗಿ ಬಿಸಿ ಬಿಸಿ ಎಣ್ಣೆ‌ ಕುದಿಯೋ ಬಾಂಡ್ಲೀಗೆ ಹಾಕಿ ಬೋಂಡಾ ಬಜ್ಜಿ ತರ ತೇಲುಸ್ತಾರೆ ಅನ್ನೋದು ನೆಪ್ಪಾತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯ

Read More

ಕೂರಾಪುರಾಣ ೪: ಸೂಜಿಗಳೆಂದರೆ ಸಂಕಷ್ಟವೇ…

ಎರಡು ನಿಮಿಷಗಳ ಕಾಲ ಕೂರಾ ಅವಳನ್ನು ನಮ್ಮೊಡನೆ ಮಾತನಾಡಲು ಬಿಡಲೇ ಇಲ್ಲ. ಅವಳ ಮೇಲೆ ಹತ್ತುವುದು, ಅವಳ ಸುತ್ತ ಸುತ್ತುವುದು, ಅವಳ ಕೆನ್ನೆಯನ್ನು ನೆಕ್ಕುವುದು.. ಎಲ್ಲ ಮಾಡುತ್ತಿದ್ದ. ಒಳಗೆ ಬಂದಾಗ ಆಕೆ ಅವನಿಗೆ ಒಂದೆರಡು ಟ್ರೀಟಿನ ತುಂಡುಗಳನ್ನು ಕೊಟ್ಟಿದ್ದಳು. ಇದೆಲ್ಲ ಅವಳನ್ನು ಒಲಿಸಲಿಕ್ಕೆ ಮತ್ತು ಇನ್ನೆರಡು ತುಂಡುಗಳನ್ನು ಪಡೆಯಲಿಕ್ಕೆ ಎಂದು ನಮಗೆ ಗೊತ್ತಿತ್ತು. ನಿಧಾನವಾಗಿ ಆಕೆ ನಮ್ಮೊಡನೆ ಮಾತನಾಡುತ್ತ ನಾಯಿಗಳ ಆರೋಗ್ಯದ ಬಗ್ಗೆ ವಿವರಿಸತೊಡಗಿದಳು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ನಾಲ್ಕನೆಯ ಕಂತು

Read More

ಸಿಂಗಾಪುರವೆಂಬ ಶಿಸ್ತಿನ ಸಿಪಾಯಿ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ಸಿಂಗಾಪುರ ಶಿಸ್ತಿನ ದೇಶ ಎನ್ನುವುದನ್ನು ಸಮರ್ಥಿಸಬಲ್ಲಂತಹ ಅನೇಕ ವಿಚಾರಗಳಿವೆ. ಅತ್ಯಂತ ಸಣ್ಣ ಸಂಗತಿಗಳನ್ನೂ ನಿಯಮಗಳಿಗೆ ಒಳಪಡಿಸುವುದು ಸಿಂಗಾಪುರದ ಮೂಲಭೂತ ಗುಣ. ಇದಕ್ಕೆ ನಿದರ್ಶನವಾಗಿ ಕೆಲವು ಅಂಶಗಳನ್ನು ಗಮನಿಸಿಕೊಳ್ಳಬಹುದು. ಚ್ಯೂಯಿಂಗ್ ಗಮ್ ಅನ್ನು ಸಂಪೂರ್ಣವಾಗಿ ನಿಷೇಧಿಸಿರುವ ರಾಷ್ಟ್ರ ಸಿಂಗಾಪುರ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಸಿಂಗಾಪುರ ದೇಶದ ಕುರಿತ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ