ಭಜನೆಯ ಮಂಗಗಳು ಹಾಗೂ ಸಂಗೀತದ ಮಾಮಿಯ ಮಕ್ಕಳು
“ಶನಿವಾರಗಳಲ್ಲಿ ಶ್ರದ್ಧೆಯಿಂದ ಭಜನೆ ಮಾಡುತ್ತಿದ್ದ ಯಾವ ಗಂಡುಮಗನೂ ಶ್ರೀಮಾತಾ ಭಜನಾ ಮಂಡಳಿಯ ಹೆಣ್ಣುಮಕ್ಕಳಿಗೆ ಎಂದೂ ಅವರ ಭಜನೆಯಲ್ಲಿ ಸಹಾಯ ಮಾಡಿದ್ದಿಲ್ಲ. ಹೆಂಗಳೆಯರೆಲ್ಲಾ ಭಜನೆಗೆ ಸೇರಿದರೆ ಗಂಡಸರು ಮನೆಯಲ್ಲಿ ಬೇಕಾದ ಚಾನೆಲ್ ತಿರುಗಿಸುತ್ತಾ ಟಿವಿ ನೋಡುವುದು ಮಠದ ಪ್ರಾಂಗಣದಲ್ಲಿ ಹರಟೆ ಕೊಚ್ಚುವುದೂ, ಸಾಬರ ಬೀದಿಯಲ್ಲಿ ಕೂತು ಸ್ನೇಹಿತರೊಟ್ಟಿಗೆ ಬೀಡಿ ಸೇದುವುದು ಮಾಡುತ್ತಿದ್ದರು.”
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ
