Advertisement

Category: ಸರಣಿ

ಮಕ್ಕಳನ್ನು ಮಕ್ಕಳಂತಿರಲು ಬಿಡಿ ಪಾಪ!: ಬಸವನಗೌಡ ಹೆಬ್ಬಳಗೆರೆ ಸರಣಿ

ನಾನು ತುಂಬಾ ಸ್ವಾಭಿಮಾನಿಯಾದ್ದರಿಂದ ನನ್ ಮಾಮ ‘ಖರ್ಚಿಗೆಂದು ದುಡ್ಡು ಕೇಳಲು ನಾಚಿಕೆಪಟ್ಟುಕೊಳ್ಳಬೇಡ’ ಎಂದರೂ ನಾನು ಮಾತ್ರ ಹಾಗೆ ಕೇಳುತ್ತಿರಲಿಲ್ಲ. ಮನೆಯವರಿಂದಲೂ ಅಷ್ಟೇನೂ ಆರ್ಥಿಕ ಸಹಕಾರ ಇರಲಿಲ್ಲ. ಮೊದಲೇ ಬೆಂಗಳೂರಿಗೆ ಹೊಸಬ. ಮೊದಲು ಒಂದೆರಡು ದಿನ ನನ್ನ ಮಾಮನೇ ನನ್ನನ್ನು ಕಾಲೇಜಿಗೆ ಡ್ರಾಪ್ ಕೊಟ್ಟ. ಮೂರನೇ ದಿನದಿಂದ ನನಗೇ ಬರಲು ತಿಳಿಸಿದ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಭಾವೈಕ್ಯದ ಜಗದ್ಗುರು: ರಂಜಾನ್ ದರ್ಗಾ ಸರಣಿ

ಅವರು ಬಹಳ ಕಷ್ಟಪಟ್ಟು ಮಠವನ್ನು ಬೆಳೆಸಿದರು. ಅವರು ಶ್ರಮಜೀವಿಗಳಂತೆ ಕಾರ್ಯ ಮಾಡಿದರು. ಯಾವುದೇ ಆರ್ಥಿಕ ಸೌಲಭ್ಯಗಳಿಲ್ಲದ ವೇಳೆ ಡಂಬಳದಿಂದ ಗದಗಿಗೆ ಮತ್ತು ಗದಗದಿಂದ ಡಂಬಳದ ವರೆಗೆ ಕಾಲ್ನಡಿಗೆಯಲ್ಲಿ ಸುತ್ತುತ್ತ, ಬಾವಿ ತೋಡುವಂಥ ಕಠಿಣ ಕಾಯಕ ಮಾಡಿದರು. ಜೊತೆಗಿದ್ದ ಭಕ್ತರ ಮತ್ತು ಆಳುಗಳು ಬಾವಿ ತೋಡಿ, ರಾತ್ರಿ ಸುಸ್ತಾಗಿ ಮಲಗಿದ್ದಾಗ ಅವರ ಅರವಿಗೆ ಬಾರದಂತೆ ಪಾದಗಳಿಗೆ ಔಷಧಿ ಹಚ್ಚುವುದನ್ನೂ ಮಾಡಿದರು!
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಕೋಟಿಗೊಬ್ಬರು “ಎಂ.ಎಸ್.ರಾಮಯ್ಯ”‌: ಎಚ್. ಗೋಪಾಲಕೃಷ್ಣ ಸರಣಿ

ಮತ್ತಿಕೆರೆ ಎನ್ನುವ ಬೆಂಗಳೂರಿನ ಹೊರ ಮೂಲೆಯಲ್ಲಿದ್ದ ಒಂದು ಪುಟ್ಟ ಹಳ್ಳಿ ಇವತ್ತು ಜಗತ್ತಿನ ಒಂದು ಪ್ರಮುಖ ಸ್ಥಳವಾಗಿ ಮಾರ್ಪಾಟು ಆಗಿರುವಲ್ಲಿ ಎಂ ಎಸ್ ರಾಮಯ್ಯ ಅವರ ಕಾರ್ಯಕ್ಷೇತ್ರ ಎದ್ದು ಕಾಣುತ್ತದೆ. ಮತ್ತಿ ಕೆರೆ ಸಂಪಂಗಪ್ಪ ರಾಮಯ್ಯ ಹೀಗೆ ಜಗತ್ತಿನ ಭೂಪಟದಲ್ಲಿ ಬೆಂಗಳೂರು ಮತ್ತು ಮತ್ತಿ ಕೆರೆಗೆ ಒಂದು ವಿಶಿಷ್ಠ ಸ್ಥಾನ ದೊರಕಿಸಿ ಕೊಟ್ಟಿದ್ದಾರೆ. ಬಹುಶಃ ಜಗತ್ತಿನಲ್ಲಿ ಇಂತಹ ಉನ್ನತ ಮಟ್ಟಕ್ಕೆ ಏರಿದ ವ್ಯಕ್ತಿ ಅಪರೂಪದಲ್ಲಿ ಅಪರೂಪವೇ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಕಾಡುವ ಪ್ರಶ್ನೆಗಳ ಕಾಡಿನಲ್ಲಿ ನೀಲಿ: ಸುಧಾ ಆಡುಕಳ ಅಂಕಣ

ಸೀತಜ್ಜಿ, ಗೌರಜ್ಜಿ, ಅಮ್ಮಣ್ಣೆಜ್ಜಿ ಇವರ ಕತೆಗಳೂ ಇದಕ್ಕಿಂತ ಬೇರೆಯೇನಿರಲಿಲ್ಲ. ಅವರೆಲ್ಲರೂ ತಮ್ಮ ಮದುವೆಯ ಕತೆಯನ್ನು ಯಾವುದೇ ವಿಷಾದಗಳಿಲ್ಲದೇ ಹೇಳಿಕೊಳ್ಳುತ್ತಿದ್ದರು. ಆದರೆ ಇವರ ನಂತರದ ತರುವಾಯದವರಾದ ಕೆಂಪಿ, ಗಣಪಿ, ನಾಗವೇಣಿಯರು ತಮ್ಮ ಮದುವೆಯ ಕತೆಯನ್ನು ಇಷ್ಟು ತಣ್ಣಗೆ ಹೇಳುತ್ತಿರಲಿಲ್ಲ. ಅವರ ಮಾತುಗಳಲ್ಲಿ ಕಹಿ, ಸಿಟ್ಟು, ಹತಾಶೆ ಎಲ್ಲವೂ ಮಡುಗಟ್ಟಿದ್ದವು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನೆಂಟನೆಯ ಕಂತು ನಿಮ್ಮ ಓದಿಗೆ

Read More

ಬೇರು – ಬಿಳಲು: ಸುಮಾ ಸತೀಶ್ ಸರಣಿ

ಹೊಸ್ದಾಗಿ ಮದ್ವೆ ಆಗಿದ್ದ ಅಳಿಯ ಅತ್ತೆ ಮನೇಗೆ ಬಂದ್ನಂತೆ. ಅತ್ತೆ ಕಡುಬು ಮಾಡಿದ್ರು. ತೆಳ್ಳಗೆ, ಸಣ್ಣವು. ಹೊಸ ಅಳಿಯನಿಗೇಂತ ಕಷ್ಟ ಪಟ್ಟು ಸಣ್ಣ ಸಣ್ಣಕೆ ಮಾಡಿದ್ರು. ಅಳಿಯನ ತಟ್ಟೇಗೆ ಬಡಿಸಿದ್ರು. ಅವ್ನು ಒನೊಂದು ಸತೀಗೆ ಒಂದು ಗುಳುಂ ಮಾಡ್ತಿದ್ದ. ಅಳಿಯನ ಅಪ್ಪ ಥೋ ನಮ್ ಮರ್ವಾದೆ ತೆಗೀತಾವ್ನೆ ಅಂತ ಮೆಲ್ಲಕೆ ಮೂಗ್ಸನ್ನೆ ಮಾಡೀರು. ಒಂದು ಮುರಿದು ಎರ್ಡು ಭಾಗ ಮಾಡಿ ತಿನ್ನಾಕೆ ಸೈಗು (ಸನ್ನೆ) ಮಾಡಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಮಾಲೂರಿನ ಅಜ್ಜ-ಅಜ್ಜಿಯರ ಕುರಿತ ಬರಹ ಇಲ್ಲಿದೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ