Advertisement

Category: ಸಾಹಿತ್ಯ

ರಾಜು ಹೆಗಡೆ ಬರೆದ ಸಣ್ಣ ಕಥೆ ʼಲಾಕ್‌ ಡೌನ್‌ʼ

“ಗಿರಿಜವ್ವ ಕೆಲಸದಲ್ಲಿ ಹುಷಾರ್ ಇದ್ದಳು. ಯಾವುದಕ್ಕೆ ಹೋದರೂ ಸೈ ಅನಿಸಿಕೊಳ್ಳಬಲ್ಲಳು. ಆರಂಭದಲ್ಲಿ ನಾಲ್ಕಾರು ಮನೆಗಳಿಗೆ ರೊಟ್ಟಿ ಮಾಡಲು ಹೋದಳು. ನಂತರ, ಹತ್ತಿರದ ಖಾನಾವಳಿ ಹಿಡಿದಳು. ಆಮೇಲೆ ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿ ಸಣ್ಣ ತರಕಾರಿ ವ್ಯಾಪಾರ ಶುರು ಮಾಡಿದಳು. ಮೊದಮೊದಲು ಅಲ್ಲಿ ಇಲ್ಲಿ ರಸ್ತೆ ಬದಿಯಲ್ಲಿ ಕುಳಿತು ಮಾರುತ್ತಿದ್ದಳು. ನಂತರ ಯಾರನ್ನೋ ಹಿಡಿದು ಮೇನ್ ಮಾರ್ಕೆಟ್ ಆದ ಬಿಡ್ಕಿ ಬಯಲಿಗೆ ಹೋದಳು. ಹಾಗೆಂದು ತಾನು ರೊಟ್ಟಿ ಮಾಡುವ ಮನೆಗಳನ್ನಾಗಲಿ ಖಾನಾವಳಿಯನ್ನಾಗಲಿ ಬಿಡಲಿಲ್ಲ. ತಾಯಿಯ ಕಳಿಸಿದಳು. “

Read More

ಎನ್.ಸಿ. ಮಹೇಶ್‌ ಬರೆದ ಈ ಭಾನುವಾರದ ಕಥೆ “ಅಥವಾ…”

“ಆಚಾರಿಯ ಜೇಬನ್ನ ಹಣ ಅಷ್ಟೊಂದು ತುಂಬಿಕೊಳ್ಳುತ್ತಿರುವುದು ಹೇಗೆ ಎಂದು ರುದ್ರಯ್ಯ ತನ್ನ ಶರ್ಟ್ ಜೇಬಿನಲ್ಲಿರುವ ಚಿಲ್ಲರೆ ತಡಕುವಾಗ ಕೇಳಿಕೊಂಡ. ಅರಿಶಿನದ ಹಾಲು ವರ್ಕ್ ಆಗದಿದ್ದರೂ ರಮ್ ಬೆಳಗ್ಗೆವರೆಗೂ ಕೈ ಕೊಡುವುದಿಲ್ಲ ಅನಿಸಿ ದುಡ್ಡಿನ ಲೆಕ್ಕಾಚಾರ ಹಾಕುತ್ತಿದ್ದ ವೇಳೆ ಆಚಾರಿಯ ಉಬ್ಬಿದ ಜೇಬು ಮತ್ತೆ ನೆನಪಾಗಿತ್ತು. ಮಗನಿಗೆ ಗೊತ್ತಾಗದಂತೆ ಚೂರುಪಾರು ಉಳಿಸಿ ಬ್ಯಾಂಕಲ್ಲಿ ಇಟ್ಟಿರುವ ಹಣ ತೆಗೆದರೆ ಅದು ಹೇಗೆ…”

Read More

ಸರಿತಾ ನವಲಿ ಬರೆದ ಈ ಭಾನುವಾರದ ಕಥೆ “ಅಂದ-ಛಂದವಿಲ್ಲದ ಗೊಂಬಿ”

“ಜ್ವರದ ತಾಪದಿಂದ ನರಳುತ್ತಿದ್ದ ಅವ್ವಕ್ಕಗ ಹಣಿ ಮ್ಯಾಲೆ ತಣ್ಣೀರಿನ ಪಟ್ಟಿ ಹಾಕಿದ್ರಾತು ಅಂತ ಹಳೇ ಬಟ್ಟಿ ತುಂಡನ್ನು ಹುಡುಕಲು ಕಪಾಟಿನಲ್ಲಿ ತಡಕಾಡಿದ ಗಂಗವ್ವಜ್ಜಿಯ ಕೈಗೆ ಹೋದವರ್ಷ ಪಂಚಮಿಹಬ್ಬಕ್ಕಂತ ಹೊಲಿಸಿದ ಅವ್ವಕ್ಕನ ಲಂಗ ಸಿಕ್ಕಿತು. ಒಂದೆರಡೇ ಸಲ ಹಾಕಿಕೊಂಡಿದ್ದ ಲಂಗದ ಒಂದು ಭಾಗವನ್ನು ಕತ್ತರಿಯಿಂದ ಕತ್ತರಿಸಿದ್ದು ಕಂಡು ಗಂಗವ್ವಜ್ಜಿಯ ಎದಿ ಧಸಕ್ಕೆಂದಿತು. ಎಪ್ಪತ್ತು ವರ್ಷ ವಯಸ್ಸಿನ ಅನುಭವಿ ಮುದುಕಿ ಗಂಗವ್ವಗ ಏನೋ ಅನುಮಾನ ಬಂದು…”

Read More

ಕ್ರಾಂತಿಯಲ್ಲೊಂದು ಪ್ರೀತಿ ಮಾರ್ಗ ತೋರಿಸಿದ ಫೈಜ್: ಮಹಾಂತೇಶ ಹೊದ್ಲೂರ ಬರೆದ ಲೇಖನ

“ಫೈಜ್ ಕ್ರಾಂತಿ ಮಾಡುತ್ತಾ, ಕ್ರಾಂತಿಯೊಳಗೆ ಪ್ರೀತಿಯನ್ನು ತೋರಿಸಿದವರು. ಕ್ರಾಂತಿಗೂ ಪ್ರೀತಿ ಪಾಠ ಹೇಳಿಕೊಟ್ಟವರು ನನ್ನ ಪ್ರೀತಿಯ ಫೈಜ್. ಅವರು ಜೈಲಿಗೆ ಹೋಗಿ, ಬಿಡುಗಡೆಗೊಂಡು, ಮತ್ತೆ ಜೈಲಿಂದ ಜೈಲಿಗೆ ಸ್ಥಳಾಂತರಗೊಂಡು, ಬಜಾರಿನ ಬೀದಿಯಲ್ಲಿ ಅವರನ್ನು ಮೆರವಣಿಗೆ ಮಾಡಿದರೂ ಸಹ ಅವನ ಮುಖದಲ್ಲಿ ಬುದ್ಧನ ನಗು ಕಾಣತ್ತಾ ಇತ್ತು. ಲೆನಿನ್ ಶಾಂತಿ ಪ್ರಶಸ್ತಿ ಬಂದಾಗಲೂ ‘ಇದು ನನಗಲ್ಲ…”

Read More

ನಂದಿನಿ ಹೆದ್ದುರ್ಗ ಬರೆದ ಈ ಭಾನುವಾರದ ಕತೆ “ಅಸ್ತು”

“ತುರ್ತು ಕೆಲಸದ ನೆಪವೊಡ್ಡಿದವನನ್ನು ಮುದ್ದು ಪ್ರೇಮದಲಿ ಗದ್ದರಿಸಿ ನಾಳೆ ಬರುವಾಗ ನಮ್ಮ ಮೊದಲು ಭೇಟಿಯಲ್ಲಿ ನೀನು ತೊಟ್ಟ ‘ಬಾದಾಮಿ ಬಣ್ಣದ ಅದೇ ಶರ್ಟು’ ತೊಟ್ಟು ಬರಲು ಅಪ್ಪಣೆ ಮಾಡಿ ಈ ಬದಿಯಿಂದ. ಮುತ್ತು ತೂರಿದವಳ ಪ್ರೇಮಕ್ಕೆ ಸೋತು ಆರು ನಿಮಿಷ ಮಾತಾಡಿ ಯಾವುದೋ ಅರ್ಜೆಂಟ್ ಕರೆ ಬರುತ್ತಿದೆ ಎನ್ನುತ್ತಾ ಫೋನಿಟ್ಟ. ಮತ್ತೆ ಮೊದಲಿನ ದಿನದ ಕಳೆಯಲ್ಲಿ ಸುಹಾ..!! ʼಅರೆ.. ನಾನಷ್ಟೇ ಅವನಿಗೆ ಅಂಗಿಯ ಬಣ್ಣ ಹೇಳಿದೆ.. ನಾನೇನು ತೊಡಬೇಕು’.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ