Advertisement

Category: ದಿನದ ಕವಿತೆ

ವಿರೇಶ ನಾಯಕ ಬರೆದ ಎರಡು ಕವಿತೆಗಳು

“ಇರುಳ ಹಾಸಿಗೆಯ ಮೇಲೆ
ನೆತ್ತರ ದಿಂಬ ಕೆಳಗೆ
ಸುರುಳಿ ಸುತ್ತಿ ಕರುಳ ಬಿಟ್ಟ
ಮಗುವೊಂದು ಗೋಗರೆಯುತಿದೆ
ಅವಳ ನೆತ್ತರ ಬಿಸಿ ಮಯ್ಯ ಮೇಲೆ
ಕಂದಿಲ ಬೆಳಕ ಬಿಡುವ
ಸೂರ್ಯನಿಗೊಂದು ಶಾಪವಿದೆ.” -ವಿರೇಶ ನಾಯಕ ಬರೆದ ಎರಡು ಕವಿತೆಗಳು

Read More

ಮಾಲಾ. ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ಮೊದಲಿನಂತ ಚಲ್ಲು ಚಲ್ಲು ಸಲ್ಲ
ಗಂಭೀರವದನೆಯಾಗಿ
ಯಾರಲ್ಲೂ ಸಲುಗೆ ನಿಷಿದ್ಧ ಸಲಹೆ
ಆಗಾಗ ನಡೆಯುವ ಕಂದಮ್ಮಗಳ
ಅತ್ಯಾಚಾರ ಭಯ ಹುಟ್ಟಿಸಿ
ಮಗಳ ಜವಾಬ್ದಾರಿ ನಿದ್ದೆಗೆಡಿಸಿ” -ಮಾಲಾ. ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಕೆ.ಎನ್.ಲಾವಣ್ಯ ಪ್ರಭಾ ಬರೆದ ನಾಲ್ಕು ಕವಿತೆಗಳು

“ಪ್ರೇಮದ ಮತ್ತಿನಲ್ಲಿದ್ದ ಅವಳ ಕಂಗಳ
ಚುಂಬಕ ನೋಟಕ್ಕೆ ಕಂಪಿಸುವ ಮರದ
ಗೊಂಚಲಿಂದ ಒಂದೊಂದೇ 
ಹಳದಿ ಹೂಗಳುದುರಿ
ಅವಳ ನೆತ್ತಿ ಹಣೆ ಗಲ್ಲ ಕೊರಳ
ತಡವಿ ಮುದ್ದಿಸುತ್ತಾ
ಮರದ ನೆರಳಿನ ತೋಳತೆಕ್ಕೆಯಲ್ಲಿ
ಅರಳುತ್ತಿದೆ ಹೀಗೆ… ಹೊಸ ಕವಿತೆ 
ಎಲ್ಲೋ ಹೇಗೋ ತಂಪಾಗಿ ಕುಳಿತೇ
ಬೇಸಿಗೆಯ ಬಿರುಬಿಸಿಲಲೂ 
ಆತ ಬರೆಯುತ್ತಿರಬಹುದೇ
ಅಪರೂಪದ ಪ್ರೇಮ ಕಥೆ?”- ಕೆ.ಎನ್.ಲಾವಣ್ಯ ಪ್ರಭಾ ಬರೆದ ನಾಲ್ಕು ಕವಿತೆಗಳು

Read More

ಸೌಮ್ಯಶ್ರೀ ಎ.ಎಸ್. ಬರೆದ ಈ ದಿನದ ಕವಿತೆ

“ಕತ್ತರಿಸಿ ಹೋದ ಕರುಳಬಳ್ಳಿ
ಅದ್ಯಾರದೋ ತಾಯಿಯ ರಕ್ತ ಕುಡಿದ
ಇಳೆಯು ರುಚಿಯೇರಿ ಮತ್ತದೇ ಬಳ್ಳಿಗಾಗಿ
ಕಾಯ್ದು ಕುಳಿತಂತಿದೆ!
ಒಂದು ಎರಡು ಹೀಗೆ ಅಗಣಿತ
ಆಗಷ್ಟೇ ಚಿಗುರಿದ ನಳನಳಿಸುವ ಚಿಗುರನ್ನು ಚಿವುಟಿ
ಮರದ ಬುಡವೇ ಬಾಡಿ ನೆಲವನ್ನಪ್ಪಿದೆ”-ಸೌಮ್ಯಶ್ರೀ ಎ.ಎಸ್. ಬರೆದ ಈ ದಿನದ ಕವಿತೆ

Read More

ನಾಗರಾಜ್ ಕಾಂಬಳೆ ಬರೆದ ಈ ದಿನದ ಕವಿತೆ

“ಕಚ್ಚದೆಯೇ ವಿಷ ಉಗುಳಿದೆ
ಬುಸುಗುಡುವ ಹಾವೊಂದು
ಗಾಯವಾಗದೇ ವಿಷವೇರಿದೆ
ನೇರವಾಗಿ ಎದೆಗೆ

ಪ್ರೇಮ ಮತ್ತು ವಾತ್ಸಲ್ಯದ ಮರಕ್ಕೆ
ನೇಣು ಹಾಕಿಕೊಳ್ಳುವ ಬಯಕೆಗೆ
ಯಾರು ಹೊಣೆ?
ಈ ಅನಿರೀಕ್ಷಿತ ಸಾವಿಗೆ
ಹೃದಯವಿಲ್ಲ, ಕನಿಕರವಿಲ್ಲ”- ನಾಗರಾಜ್ ಕಾಂಬಳೆ ಬರೆದ ಈ ದಿನದ ಕವಿತೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ