Advertisement

Category: ದಿನದ ಕವಿತೆ

ಭರತ್‌ ಎಂ. ವೆಂಕಟಸ್ವಾಮಿ ಬರೆದ ಗಝಲ್

“ಮುರಿದ ಬಾಗಿಲ ಗುಡಿಸಲಿನೊಳಗೂ, ಬೆಂದ ಅಂಬಲಿ ಏನು ರುಚಿ!
ಬೆಚ್ಚಗೆ ಹೀರುತ ಒಲೆಯೆದುರಲ್ಲಿ, ಕಣ್ಣು ಕಣ್ಣಲಿ ಬೆರೆತಿರಲು

ಸಾತ್ವಿಕವಾಗಿ ಉಳಿದು ತನ್ನ ನೆಲೆಯನು ಕಂಡುಕೊಳ್ಳುವ ಬಣ್ಣ
ರೂಪಾಂತರಗೊಳ್ಳುವುದೇನೀ ಪರಿ ಬಣ್ಣದ ನೀರಲಿ ಬೆರೆತಿರಲು”-‌ ಭರತ್‌ ಎಂ. ವೆಂಕಟಸ್ವಾಮಿ ಬರೆದ ಗಝಲ್

Read More

ಆರ್. ವಿಜಯರಾಘವನ್‌ ಅನುವಾದಿಸಿದ ಮಾರ್ಗರೇಟ್ ಬರೋಸ್ ಬರೆದ ಕವಿತೆ

“ನಮಗೆ ನಮ್ಮ ಎಣ್ಣೆಗಪ್ಪು ಚರ್ಮ ಅಸಹ್ಯ,
ನಮ್ಮ ದಪ್ಪ ತುಟಿಗಳು ಅಸಹ್ಯ,
ನಮ್ಮ ನಡುರಾತ್ರಿಯ ಕಣ್ಣುಗಳು ಅಸಹ್ಯ,
ನಮ್ಮ ಗುಂಗುರು ಕೂದಲು ಅಸಹ್ಯ
ಹೀಗೆ ನಾವು ನಮ್ಮ ಚಿತ್ರವನ್ನು ನಿರಾಕರಿಸಿದ್ದೇವೆ ಅಸಹ್ಯಿಸಿ”- ಆರ್. ವಿಜಯರಾಘವನ್‌ ಅನುವಾದಿಸಿದ ಮಾರ್ಗರೇಟ್ ಬರೋಸ್ ಬರೆದ ಕವಿತೆ

Read More

ಡಾ.ಬೇಲೂರು ರಘುನಂದನ್ ಅನುವಾದಿಸಿದ ಸೌಮ್ಯ ರಾಜ್ ಬರೆದ ಇಂಗ್ಲಿಷ್‌ ಕವಿತೆ

“ಅರುಚಲೇ ಬಾರದು ಹಡೆದ ಮಕ್ಕಳೆದುರು
ಪ್ರಕಟಿಸಬಾರದು ಅಹಂ
ಲೋಕದೆದುರು ಎಂದಿಗೂ
ಸಭ್ಯವಾಗಿರಲೇಬೇಕು ಸಹುದ್ಯೋಗಿಗಳೊಂದಿಗೆ
ಮನೆಗೆ ಬರುವ ಅತಿಥಿಗಳಿಗೆ
ಬೇಡ ಎನ್ನುವಂತಿಲ್ಲ”- ಡಾ.ಬೇಲೂರು ರಘುನಂದನ್ ಅನುವಾದಿಸಿದ ಸೌಮ್ಯ ರಾಜ್ ಬರೆದ ಇಂಗ್ಲಿಷ್‌ ಕವಿತೆ

Read More

ವಿನಯ್‌ ಮಾಧವ್‌ ಬರೆದ ‘ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು’ ಪುಸ್ತಕದಿಂದ ಒಂದು ಅಧ್ಯಾಯ

“ಆನೆಗಳು ನಮ್ಮ ಊರಿಗೆ ಬಂದಿದ್ದು ನನಗಾಗಲೀ, ನಮ್ಮ ಊರಿನವರಿಗಾಗಲೀ ನೆನಪಿಲ್ಲ. ಆದರೆ, ಕಟ್ಟೆಪುರದಿಂದ ಭದ್ರಾ ಅಭಯಾರಣ್ಯಕ್ಕೆ ಹೋಗುವ ಆನೆಗಳು, ನಮ್ಮ ಮನೆಯಿಂದ ಹನ್ನೆರಡು ಕಿಲೋಮೀಟರ್ ದೂರವಿರುವ ಗೆಂಡೇಹಳ್ಳಿ ಮಾರ್ಗವಾಗಿ ಹೋಗುವುದು ಮುಂಚಿನಿಂದಲೂ ನಡೆದು ಬಂದಿದೆ. ಇನ್ನು ದೇವರ ಮನೆ, ಕುಂದೂರು ಕಡೆ ಆನೆಗಳು ಮೊದಲಿಂದಲೂ ಇವೆ.”

Read More

ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

“ಎಲೆ ಉದುರುವ
ಚಳಿಗಾಲದ ರಾತ್ರಿಗಳು
ಭೂಮಿಗೆ
ಹೊದಿಕೆ ಹೊದ್ದಿಸಿ
ಪಾಪದ ಕಟಕಟೆಯಲ್ಲಿ
ಎಚ್ಚರವಾಗಿವೆ;
ದೂರದ ಮಳೆಗಾಲಕ್ಕೆ
ಕಾತರಿಸುವ
ಕಪ್ಪೆಗಳ ಬಾಯಿ
ಯಾರೋ ಮುಚ್ಚಿ
ಮೌನ ಸಮಾಧಿಯ
ಚೊಕ್ಕಟಗೊಳಿಸಿದ್ದಾರೆ;”- ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ