ಚಂದ್ರಮತಿ ಸೋಂದಾ ಬರೆದ ಈ ಭಾನುವಾರದ ಕತೆ “ಸಾಂಗತ್ಯ”
ಯಶೋದಳಿಗೆ ಮುಂದೆ ಮಾತನಾಡಲು ಆಗಲಿಲ್ಲ. ಅವಳು ಬಿಕ್ಕಿದಳು. ಅವಳ ಕಣ್ಣಿನಿಂದ ಒಂದೇಸಮನೆ ನೀರು ಇಳಿಯುತ್ತಿತ್ತು. ಅಷ್ಟರಲ್ಲಿ ಮಗುವನ್ನು ಕರೆದುಕೊಂಡು ಮಾದೇವಿ ಬಂದಳು. ಮಗುವನ್ನು ಎತ್ತಿಕೊಂಡ ಯಶೋದ ಮಗುವನ್ನು ಹೆಗಲಿಗೆ ಹಾಕಿಕೊಂಡು ಎದ್ದು ನಿಂತಳು. ಅವಳನ್ನು ಒಳಗೆ ಕರೆದುಕೊಂಡು ಹೋಗುವಂತೆ ಪ್ರಕಾಶ ಮಾದೇವಿಗೆ ಸೂಚಿಸಿದ. ಕೀಕೊಟ್ಟ ಬೊಂಬೆಯಂತೆ ಯಶೋದ ಮಾದೇವಿಯನ್ನು ಅನುಸರಿಸಿದಳು. ಅವಳಿಗೆ ಯಾವುದೋ ಆಘಾತವಾಗಿರಬೇಕು ಎಂದು ಪ್ರಕಾಶ ತರ್ಕಿಸಿದ. ನಿಧಾನವಾಗಿ ಅದನ್ನು ಹೊರತೆಗೆಯಬೇಕು. ಒಂದೆರಡು ದಿನದವರೆಗ ಕಾಯಬೇಕು.
ಚಂದ್ರಮತಿ ಸೋಂದಾ ಬರೆದ ಕತೆ “ಸಾಂಗತ್ಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
