Advertisement

Category: ವಾರದ ಕಥೆ

ಡಾ. ವಿಶ್ವನಾಥ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಲೈಟ್ಸ್…ಕ್ಯಾಮರಾ…ಆ್ಯಕ್ಷನ್ ಎಂದು ನಿರ್ದೇಶಕರು ಹೇಳಿದಾಗ ನಿರ್ಮಲಾಳ ಎದೆ ಧಸಕ್ಕೆಂದಿತು. ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತಾ ಬಂದ ಕೃಷ್ಣ ಕೈಯ್ಯನ್ನು ಚಾಚಿ ಬೆಣ್ಣೆ ಗಡಿಗೆ ತೆಗೆದುಕೊಂಡವನು ಪುಟುಪುಟು ಓಡಿದ. ಹೆಜ್ಜೆಯಿಡುತ್ತಾ ಬಂದದ್ದು… ಕೈಚಾಚಿದ್ದು… ಓಡಿದ್ದು… ಇದು ನಿರ್ಮಲಾಳ ಮನಸ್ಸಿನಲ್ಲಿ ಗಿರಕಿ ಹೊಡೆಯತೊಡಗಿತ್ತು. ಅವಳು ಈಗ ಬಾಗಿಲ ಮರೆಯಿಂದ ಬೆಣ್ಣೆ ಗಡಿಗೆಯಿದ್ದ ಕಂಬದಾಚೆಗೆ ಹೋಗಬೇಕಿತ್ತು. ಆದರೆ ಅವಳು ಚಲನೆಯಿಲ್ಲದೆ ನಿಂತಿದ್ದಳು.
ಡಾ. ವಿಶ್ವನಾಥ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಲೈಟ್ಸ್… ಕ್ಯಾಮರಾ… ಆ್ಯಕ್ಷನ್” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ವಾಸುದೇವ ನಾಡಿಗ್ ಕತೆ

ಸುನಂದಕ್ಕಗೆ ಮದುವೆಯಾಗಿ ಒಂದು ವಾರವೂ ಆಗಿರಲಿಕ್ಕಿಲ್ಲ. ದಿವಾಕರ ಭಾವ ಅವಳಿಗೆ ಉದ್ದದ ಹೆರಳನ್ನು ಕತ್ತರಿಸಲು ಆಜ್ಞೆಮಾಡಿದ್ದು! ನಗುವನ್ನೆ ಕಳೆದುಕೊಂಡಂತಿದ್ದ ಸುನಂದಕ್ಕ ತನ್ನ ಹೆರಳನ್ನು ಮೋಟು ಜಡೆ ಮಾಡಿಸಿಕೊಂಡು ‘ಅನೂ ಪುಟ್ಟಾ’ ಎಂದು ಯಾವತ್ತೂ ಕರೆವಂತೆ ‘ಅಮ್ಮಗೆ ಹೇಳು ಇನ್ನು ಮುಂದೆ ನನಗೆ ಜಡೆಹಾಕುವಾಗ ಯಾವತ್ತೂ ಕೈ ಸೋಲು ಬರುವುದಿಲ್ಲ’ ಅಂದಿದ್ದಳು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ವಾಸುದೇವ ನಾಡಿಗ್ ಕತೆ “ಅರ್ಥವಾಗುತ್ತಿದೆ ಎಲ್ಲ ಮೆಲ್ಲ ಮೆಲ್ಲನೆ”

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಒಮ್ಮೆ ಹೀಗೆ ಬಿಡುವಿದ್ದಾಗ, ಐತಾಳರು ನನ್ನ ಹಿನ್ನೆಲೆ ಬಗ್ಗೆ ವಿಚಾರಿಸಿದಾಗ ಸುಳ್ಳು ಹೇಳಲು ಮನಸ್ಸಾಗದೆ ಎಲ್ಲ ಹೇಳಿಬಿಟ್ಟೆ. ಮನಸ್ಸು ಹಗುರಾಯಿತು. ಈವರೆಗೂ ಸಂಪೂರ್ಣ ಸತ್ಯ ಯಾರಿಗೂ ಹೇಳಿರಲಿಲ್ಲ. ಐತಾಳರು ಸ್ವಲ್ಪ ಹೊತ್ತು ನನ್ನ ಮುಖವನ್ನೇ ನೋಡಿದರು. ಕೆಲಸದ ವಿಷಯದಲ್ಲಿ ಅವರು ತುಂಬಾ ಸ್ಟ್ರಿಕ್ಟ್; ಆದರೆ ಹೆಂಗರಳು. ಕೆಲಸಗಾರರನ್ನು ಮಕ್ಕಳ ಹಾಗೆ ನೋಡಿಕೊಳ್ಳುವ ಸ್ವಭಾವ. “ಆದ್ರೂ ನೀ ಊರು ಬಿಟ್ಟು ಬರಬಾರದಿತ್ತು ಮಾರಾಯ, ನೀ ಎಣಿಸಿದ ಹಾಗೆ ಅಲ್ಲೇನು ಆಗಿರಲಿಕ್ಕಿಲ್ಲ. ಈ ಕಾಲದ ಜನ ಕಥೆ ಸಿನಿಮಾ ಧಾರಾವಾಹಿ ನೋಡಿ ಎಂತೆಲ್ಲಾ ಗ್ರಹಿಸಿ ಹೀಗೆ ಮಾಡಿಬಿಡೋದು ಹೌದಲ್ಲವನ!”
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಅನಿಕೇತನ” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಉದ್ಯಾವರ ಮಾಧವ ಆಚಾರ್ಯ ಕತೆ

ಹಳ್ಳಿಕೊಂಪೆಯ ಮೂಲಮನೆಯ ಕಾಲ ಗರ್ಭದ ಹಿಂದಿನ ದಿನಗಳಲ್ಲಿ ಯಾರ‍್ಯಾರೋ ಹಿರಿಯರು ಕಾಲವಾದಾಗ ಹೇಳಿಸುತ್ತಿದ್ದ ಗರುಡಪುರಾಣದ ವಿವರಗಳೆಲ್ಲ ಇಲ್ಲಿ ಈಗ ಜೀವನದಲ್ಲಿ ಮೊದಲ ಅನುಭವವಾಗಿ ಬಾಲ್ಕನಿಯಲ್ಲಿ ನಿಂತು ಹೊಸ ಬದುಕಿನ ಹುಡುಕಾಟವನ್ನು ನಡೆಸುತ್ತಿದ್ದ ಗಂಗಮತ್ತೆಯ ನೆನಪಿಗೆ ಬಂದು ನಿಜವೆನಿಸತೊಡಗುತ್ತಿದ್ದಂತೆ ಒಂದು ದಿನ ಪಕ್ಕದ ಫ್ಲಾಟಿನ ವಿರಸ ದಾಂಪತ್ಯದ ಸಾಫ್ಟ್ವೇರ್ ಉದ್ಯೋಗದ ಎಳೆಯ ತರುಣಿ ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿ ಅಂತ್ಯವನ್ನು ಕಂಡಾಗ….
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಉದ್ಯಾವರ ಮಾಧವ ಆಚಾರ್ಯ ಕತೆ “ಮಹಾಪ್ರಸ್ಥಾನ”

Read More

ಆನಂದ ಭೋವಿ ಬರೆದ ಈ ಭಾನುವಾರದ ಕತೆ

ಅದ್ಯಾವ ಪುಣ್ಯಾತಗಿತ್ತಿ ಅಬ್ಬರಿಸಿದಳೋ ಗೊತ್ತಿಲ್ಲ “ಯಲ್ಲವ್ವ ಬಂಗಾರದ ಮಳೆ ಹರಸಾಕತ್ತಾಳ ಯಾರಿಗೆ ಸಿಗತೈತಿ ಅವರ ಬಾಳು ಬಂಗಾರ ಆಗತೈತಿ” ಇದೊಂದು ಮಾತು ಬರಸಿಡಿಲು ಬಡಿದಂಗ ಆತು. ಸೀಟಿನ ಚಿಂತ್ಯಾಗ ಮುಕರಿಬಿದ್ದಿದ್ದ ಮಂದಿ ಹುಯ್ಯಂತ ಮ್ಯಾಲಕ್ಕೆತ್ತು. ಅವಳು ಇವಳು ಯಾರಿಗೂ ಯಾರು ಕಾಣಲಿಲ್ಲ. ಹಾರಾಡಿ ಬೀಳುತ್ತಿದ್ದ ಸರದ ಗುಂಡು ಆರಿಸಲಿಕ್ಕ ಮುಗಿಬಿದ್ದರು. ಅವರ ಮ್ಯಾಲ ಇವರು ಇವರ ಮ್ಯಾಲ ಅವರು ನೋಡ ನೋಡುವದ್ರೊಳಗ ಕಾಲ್ತುಳಿದ ಗದ್ದಲ ಬಸ್ಸನ್ನು ನುಂಗಿಕೊಂಡಿತು. ಬಿಸಲಿನ ಜಳದೊಳಗ ರಕ್ತದ ವಾಸನೆ ಬಡಿಯತೊಡಗಿತು.
ಆನಂದ ಭೋವಿ ಬರೆದ ಈ ಭಾನುವಾರದ ಕತೆ “ದೇವರಿಗೂ ಒಂದು ಟಿಕಿಟು”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ