Advertisement

Category: ವಾರದ ಕಥೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅಲಕಾ ಕಟ್ಟೆಮನೆ ಬರೆದ ಕಥೆ

“ಇದೇ ವಿಷಯವಾಗಿ ಆವತ್ತು ಅಜ್ಜಿ ಮತ್ತು ಶಣ್ಕೂಸಿನ ನಡುವೆ ಘನಘೋರ ಚರ್ಚೆ ನಡೆಯುತ್ತಿತ್ತು. ಹಾಗೆ ನೋಡಿದರೆ ಅಜ್ಜಿಯಷ್ಟು ಬಿಡುವು ಶಣ್ಕೂಸಿಗೆ ಇರುವುದಿಲ್ಲ. ಅವಳ ದೊಡ್ಡ ಮಗ, ಅಲ್ಲೇ ಸನಿಹದಲ್ಲಿ ಮಡದಿ-ಮಕ್ಕಳೊಂದಿಗೆ ಬೇರೆ ಸಂಸಾರ ಹೂಡಿದ್ದ. ಮಗಳನ್ನು ಘಟ್ಟದ ಕೆಳಗಿನ ಅಣ್ಣನ ಮಗನಿಗೆ ಮದುವೆ ಮಾಡಿಕೊಟ್ಟಿದ್ದಳು. ಈಗ ಅವಳೊಂದಿಗಿರುವ ಕಡೆಯ ಮಗ ಸಂಕನಿಗೆ ತಲೆಗೂದಲು..”

Read More

‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ಎರಡನೆಯ ಅಧ್ಯಾಯ

“ರಝುಮಿಖಿನ್ ಸರಿಯಾಗಿ ಒಂಬತ್ತು ಗಂಟೆಗೆ ಬಕಲೇವ್ ವಸತಿಗೃಹಕ್ಕೆ ಬಂದ. ಇಬ್ಬರು ಹೆಂಗಸರೂ ಬಹಳ ಹೊತ್ತಿನಿಂದ ಅವನು ಬರುವುದನ್ನೇ ಕಾಯುತ್ತಾ ತಾಳ್ಮೆ ತಪ್ಪಿ ಹಿಸ್ಟೀರಿಯ ಬಂದವರ ಥರ ಆಗಿದ್ದರು. ಏಳು ಗಂಟೆಗೋ, ಅದಕ್ಕೂ ಮೊದಲೋ ಎದ್ದಿದ್ದರು. ಗುಡುಗು ಹೊತ್ತ ಮೋಡ ಕವಿದಂಥ ಮುಖ ಹೊತ್ತು ಬಂದಿದ್ದವನು ಅಡ್ಡಾದಿಡ್ಡಿಯಾಗಿ ತಲೆ ಬಾಗಿಸಿ ವಂದನೆ ಸಲ್ಲಿಸಿದ.”

Read More

ರೋಹಿತ್ ರಾಮಚಂದ್ರಯ್ಯ ಅನುವಾದಿಸಿದ ಪ್ರಣವ್ ಸಖದೇವ್ ಬರೆದ ಮರಾಠಿ ಕತೆ

“ಆಮೇಲೆ ನನಗೆ ಏನಾಯಿತೋ ಯಾರಿಗೆ ಗೊತ್ತು; ನಾನು ಪಟಕ್ಕನೆ ಟೇಬಲ್ ಮೇಲೆ ಇಟ್ಟಿದ್ದ ನನ್ನ ಮೊಬೈಲ್ ಫೋನ್ ತೆಗೆದುಕೊಂಡು ಅವನ ಐದಾರು ಫೋಟೋ ತೆಗೆದೆ. ರಿಯಾನನು ನನ್ನ ಕಡೆ ನೋಡಿದ. ಅವನ ಉದ್ದನ್ನ ಮುಖ ಶಾಂತವಾಗಿತ್ತು. ನೇರ ಮೂಗಿನ ತುದಿ ನೆನೆದು ಕೆಂಪಾಗಿ ಹೋಗಿತ್ತು. ಆತನ ಕಪ್ಪು ಕಣ್ಣುಗಳಲ್ಲಿ ಅಂಜಿಕೆಯಿರಲಿಲ್ಲ.”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅಬ್ದುಲ್‌ ರಶೀದ್ ಬರೆದ ಕಥೆ

“ಈ ರೋಸಿ ಸಿಸ್ಟರ್ ಮತ್ತು ಸುಶೀಲಾ ಟೀಚರ್ ಬಾಡಿಗೆಗಿದ್ದ ಕೋಣೆಗಳ ನಡುವಲ್ಲಿ ಈರಪ್ಪ ಟೈಲರ ಅಂಗಡಿಯಿತ್ತು. ಈರಪ್ಪ ಟೈಲರು ತಮ್ಮ ಸಂಸಾರ ಸಮೇತವಾಗಿ ಒಳಕೋಣೆಯಲ್ಲಿ ವಾಸಿಸುತ್ತಿದ್ದು ಹೊರಗಿನ ಕೋಣೆಯನ್ನು ಟೈಲರ್ ಅಂಗಡಿಯನ್ನಾಗಿ ಮಾಡಿಕೊಂಡಿದ್ದರು. ಈ ಈರಪ್ಪ ಟೈಲರ್ ಮಾತು ತುಂಬ ಕಡಿಮೆ ಆಡುತ್ತಿದ್ದರು….”

Read More

ಡಾ. ಜ್ಯೋತಿ ಬರೆದ ಈ ಭಾನುವಾರದ ಕಥೆ

“ಯಾರೋ ಹೇಳಿದರು, ಕಾಶಿಯ ರಾಜನಲ್ಲಿ ಬಿಳಿ ಕುದುರೆಗಳಿವೆಯೆಂದು. ಹಾಗಾಗಿ, ಗಾಲವ ನನ್ನ ಕಾಶಿಗೆ ಕರೆತಂದ. ಅಲ್ಲಿನ ರಾಜ ದಿವೋದಾಸನಲ್ಲಿ ೨೦೦ ಬಿಳಿ ಕುದುರೆಗಳಿದ್ದವು. ಅವನಿಗೂ ಗಂಡು ಮಗು ಬೇಕಿತ್ತು. ಗಾಲವ ಪುನಃ ಒಪ್ಪಂದ ಮಾಡಿಕೊಂಡ. ನನಗೆ ಈ ಬಾರಿ ಏನು ಅನ್ನಿಸಲಿಲ್ಲ. ಮನಸ್ಸು ಮತ್ತು ಹೃದಯಗಳೆರಡೂ ಹೆಪ್ಪುಗಟ್ಟಿದ್ದವು. ವರ್ಷ ಕಳೆಯೋದರಲ್ಲಿ ಮಗ ಪ್ರತಾರ್ಧನ ಹುಟ್ಟಿದ. ಆದರೆ, ಈ ಬಾರಿ ಮಗುವಿನೊಂದಿಗೆ ಯಾವುದೇ ವ್ಯಾಮೋಹ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ