Advertisement

Category: ಅಂಕಣ

ತೊಂಡೆ ಚಪ್ಪರ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಅಮ್ಮನ ಈ ಸ್ವಾಭಾವ ಗೊತ್ತಿದ್ದ ನನಗೆ ತೊಂಡೆ ಚಪ್ಪರ ಗಾಳಿಗೆ ಹೀಗೆ ಮೂರು ಕಾಲಲ್ಲಿ ನಿಂತದ್ದು ನೋಡಿ ದಿಗಿಲಾಯಿತು. ನಾನು ಕೃಷಿ ಕೆಲಸವನ್ನು ಬಿಟ್ಟು ಬಹಳ ವರ್ಷಗಳೇ ಆಗಿಹೋಗಿವೆ. ಹಾಗಾಗಿ ಅಷ್ಟು ದೊಡ್ಡ ಚಪ್ಪರವನ್ನು ಅಪ್ಪನ ಹಾಗೆ ಹಿಡಿದು ನಿಲ್ಲಿಸಿ ಸರಿ ಮಾಡುವ ವಿಶ್ವಾಸ ನನಗೆ ಇರಲಿಲ್ಲ. ಅಮ್ಮನ ಮುಖ ನೋಡಿದೆ. ಬದುಕಿನ ಆಧಾರವೇ ಕಳೆದುಕೊಂಡ ಹಾಗೆ ಕೂತಿದ್ದು ನೋಡಿ ಬೇಸರ ಆಯ್ತು. ಸಮಾಧಾನದ ಮಾತು ಹೇಳುವ ಅಂತ ಅನ್ನಿಸಿದರೂ ಮಾತು ಹೊರಡದೆ ಅಮ್ಮನ ಹತ್ತಿರ ಸುಮ್ಮನೆ ಕುಳಿತೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಎರಡನೆಯ ಬರಹ

Read More

ಗುರುವಿನ ಎದುರಲ್ಲಿ: ಸುಕನ್ಯಾ ಕನಾರಳ್ಳಿ ಅಂಕಣ

ಏನೇ ಆದರೂ ಇದು ತುಂಬ ಅಸಹಜ ಅಂತನ್ನಿಸಿತ್ತು. ತನ್ನ ವಯಸ್ಸಿನ ಸ್ನೇಹಿತರೇ ಇಲ್ಲದ, ಹೆಚ್ಚು ಹೆಚ್ಚು ಮಾನವೀಯಗೊಳಿಸುವ ಕಲೆಗಳ ಪರಿಚಯವಿಲ್ಲದ, ವಯಸ್ಸಿಗೆ ತಕ್ಕ ಜೀವನೋತ್ಸಾಹ ಇಲ್ಲದ, ಮುದುಕಿಯರ ಜೊತೆ ತೀರ್ಥಯಾತ್ರೆಗೆ ಹೋಗುವ, ಉಳಿದಂತೆ ಜನಸಂಪರ್ಕ ತೀರಾ ಕಮ್ಮಿಯಿರುವ ಬದುಕಿನ ಶೈಲಿಯ ಪರಿಣಾಮವೇ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂರನೆಯ ಬರಹ

Read More

ಕನ್ನಡ ಪ್ರಜ್ಞೆ: ಸುಕನ್ಯಾ ಕನಾರಳ್ಳಿ ಅಂಕಣ

ನನ್ನ ಮನೆಗೆ ಯಾವ ಮಕ್ಕಳು ಬಂದರೂ ಕನ್ನಡದಲ್ಲಿ ಮಾತಾಡೋದಾದ್ರೆ ಮಾತ್ರ ಒಳಗೆ ಬನ್ನಿ ಅಂತ ಯಾವ ಮುಲಾಜಿಲ್ಲದೆ ಹೇಳಿಬಿಡ್ತೀನಿ. ಮೊನ್ನೆ ಮಹಾ ತರಾತುರಿಯಲ್ಲಿ ನಾಲ್ಕು ಮಕ್ಕಳು ಬಾಗಿಲು ಬಡಿದ್ರು. ಎಲ್ರೂ ಇಂಗ್ಲೀಶಲ್ಲಿ ಒಟ್ಟಿಗೆ ಮಾತಾಡ್ತಾ ಇದ್ರು. ಅವರನ್ನ ತಡೆದು ನಿಲ್ಲಿಸಿ ‘ಕನ್ನಡದಲ್ಲಿ ಹೇಳಿ’ ಅಂದೆ. ತಟ್ಟನೆ ಮೌನ. ಅರೆ ಗಳಿಗೆಯ ನಂತರ ಒಂದು ಮಗು ಧೈರ್ಯ ಮಾಡಿ ‘ನಾವು ಪ್ಲೇ ಮಾಡ್ತಾ ಇದೀವಿ. ಅಲ್ಲಿ ಅಭಿ ಕೌಂಟ್ ಮಾಡ್ತಾ ಇದಾನೆ. ಅದಕ್ಕೆ ನಾವೆಲ್ಲ ರನ್ ಮಾಡಿಕೊಂಡು ಬಂದ್ವಿ. ನಿಮ್ಮನೇಲಿ ಹೈಡ್ ಮಾಡಿಕೊಬಹುದಾ?ʼನಾನು ಕೇಳಿದ್ದು ಕನ್ನಡದಲ್ಲಿ ಹೇಳಿ ಅಂತ, ಕಿಚಡಿಯಲ್ಲಿ ಅಲ್ಲ ಎಂದಿದ್ದು ಪಾಪ ಮಕ್ಕಳಿಗೆ ಅರ್ಥ ಆಗಲಿಲ್ಲ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಎರಡನೆಯ ಬರಹ

Read More

ಅವಳ ಹೆಸರು ಗೀತ…: ವಿನಾಯಕ ಅರಳಸುರಳಿ ಅಂಕಣ

ಇದೊಂದು ಚಿಕ್ಕ ಕಾಳಜಿ, ಉಳಿದವರೆಲ್ಲರ ಉಪೇಕ್ಷೆಯ ನಡುವೆ ಆಕೆ ಮೆರೆದ ಸಣ್ಣ ಸಮಯ ಪ್ರಜ್ಞೆ ಎಂದು ಅನಿಸಬಹುದೇನೋ? ಆದರೆ ನೂರಾರು ಕೆಲಸಗಳ ನಡುವೆ ಮುಳುಗಿದಾಕೆ ತನ್ನದಲ್ಲದ ಧಾವಂತಕ್ಕಾಗಿ ಅವನ್ನೆಲ್ಲ ಬದಿಗಿಟ್ಟು ಸ್ವತಃ ಆಕ್ಸಿಜನ್ ಅಳವಡಿಸಿದ ಬೆಡ್ಡನ್ನು ದೂಡಿಕೊಂಡು ಬರುವುದು ಎಷ್ಟು ವಿರಳ ಹಾಗೂ ದೊಡ್ಡ ಮಾನವೀಯತೆಯೆನ್ನುವುದು ತಿಂಗಳಾನುಗಟ್ಟಲೆ ಆಸ್ಪತ್ರೆಯಲ್ಲಿ ಕಳೆದ ಬಳಿಕವಷ್ಟೇ ಅರ್ಥವಾಗುವ ಸೂಕ್ಷ್ಮ ಸತ್ಯ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಬೇಸಿಗೆ ತರಲಿರುವ ಅಸಹನೆ, ಆಕಾಂಕ್ಷೆ: ಡಾ. ವಿನತೆ ಶರ್ಮಾ ಅಂಕಣ

ಕ್ರಿಸ್ಮಸ್ ಲಂಚ್ ಮುಗಿಸಿಕೊಂಡು ವಾಪಸ್ ಬರುವಾಗ ನಾವು ‘ಕಂಟ್ರಿ ಸೈಡ್’ ದಾರಿ ಹಿಡಿದಿದ್ದೆವು. ನನಗೆ ಅದಾವುದರ ತಲೆಬುಡ ಗೊತ್ತಿರಲಿಲ್ಲ. ಕರೆದುಕೊಂಡು ಹೋದವರು ವಾಪಸ್ ಮನೆ ಸೇರಿಸುತ್ತಾರೆ ಎಂದು ನಿಶ್ಚಿಂತೆಯಿಂದ ಕಿಟಕಿಯಿಂದ ಕಾಣುತ್ತಿದ್ದ ಆಸ್ಟ್ರೇಲಿಯನ್ ಪೊದೆಕಾಡನ್ನು ನೋಡುತ್ತಾ ಕಳೆದುಹೋಗಿದ್ದೆ. ಇದ್ದಕ್ಕಿದ್ದಂತೆ ಕಾರಿನಲ್ಲಿ ತಾಪಮಾನ ಏರಿದಂತಾಯ್ತು. ಮುಖ ತಿರುಗಿಸಿದಾಗ ಆ ಕಡೆ ಕಂಡಿದ್ದು ಉದ್ದಾನುದ್ದಕ್ಕೆ ಹರಡಿಕೊಂಡು ಉರಿಯುತ್ತಿದ್ದ ಬೆಂಕಿಜ್ವಾಲೆ. ನಾನಿದ್ದ ಕಾರಿನಿಂದ ಸ್ಪಷ್ಟವಾಗಿ ಕಾಣುತ್ತಿದ್ದು, ಶಾಖದ ಅನುಭವವೂ ಚೆನ್ನಾಗಾಗುತ್ತಿತ್ತು. ಅಂದರೆ ಅಷ್ಟು ಹತ್ತಿರದಲ್ಲಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ