ಓದು ಮುಗಿದ ನಂತರದ ಪ್ರಾರಂಭದ ದಿನಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ
ಆಗ ಜಿಲ್ಲಾವಾರು ನೇಮಕವಿದ್ದ ಕಾರಣ ನನಗೆ 2 ಜಿಲ್ಲೆಗಳಿಗೆ ಅರ್ಜಿ ಹಾಕಲು ಹಣ ಇಲ್ಲದ ಕಾರಣ ಬರೀ ಒಂದೇ ಜಿಲ್ಲೆಯಲ್ಲಿಯೇ ಅರ್ಜಿ ಸಲ್ಲಿಸಿದೆ, ಅದೂ ಮೈಸೂರಿನಲ್ಲಿ. ಕೆಲಸವನ್ನು ಗಿಟ್ಟಿಸಲೇ ಬೇಕೆಂಬ ಹಠವಿಡಿದು ಓದಿದೆ. ನಾನು ಮೈಸೂರಿನಲ್ಲಿಯೇ ಅರ್ಜಿ ಹಾಕಲು ಕಾರಣ ಅಲ್ಲಿ ನನ್ನ ಗೆಳೆಯನ ಅಣ್ಣನೊಬ್ಬನು ಓದುತ್ತಿದ್ದ. ಪರೀಕ್ಷೆ ಬರೆಯುವ ದಿನ ಅವನ ರೂಮಿನಲ್ಲಿ ಉಳಿಯಬಹುದು. ಬೇರೆ ಕಡೆ ಉಳಿದು ಖರ್ಚು ಮಾಡಲು ಹಣದ ತೊಂದರೆ ಇದ್ದುದರಿಂದ ನಾನು ಮೈಸೂರು ಒಂದಕ್ಕೇ ಅರ್ಜಿ ಹಾಕಲು ತೀರ್ಮಾನಿಸಿದ್ದೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೊಂದನೆಯ ಕಂತು ನಿಮ್ಮ ಓದಿಗೆ
