ಬೆಂಗಳೂರು ವಸತಿ ಪುರಾಣ ಭಾಗ-2: ರಂಜಾನ್ ದರ್ಗಾ ಸರಣಿ
ಕೊನೆಗೂ ಇಬ್ಬರು ಯುವಕರು ನಂದಿನಿ ಲೇ ಔಟ್ ಫ್ಲ್ಯಾಟ್ಗೆ ಬಾಡಿಗೆಗೆ ಬಂದರು. ಅವರು ಗುಜರಾತ್ ಕಡೆಯವರು. ಬೆಂಗಳೂರಲ್ಲೇ ಬೆಳೆದವರು. ಅವರು ಕೇಬಲ್ ಟಿವಿ ವ್ಯವಹಾರಕ್ಕೆ ಮನೆ ಹಿಡಿಯಬೇಕಾಗಿತ್ತು. ಸ್ವಲ್ಪ ದಿನಗಳನಂತರ ಅಡ್ವಾನ್ಸ್ ಕೊಡುವುದಾಗಿಯೂ ತಿಳಿಸಿದರು. ಅವರಿಗೆ ಬಾಡಿಗೆಗೆ ಕೊಟ್ಟಾಯಿತು. ಆದರೆ ಅವರು ಸುಳ್ಳು ಹೇಳುತ್ತ ಮುಂದೂಡತ್ತ ಬಂದರು. ಕೊನೆಗೆ ಓಡಿ ಹೋದರು. ಬಹುಶಃ ಕೇಬಲ್ ಮಾಫಿಯಾಗೆ ಭಯ ಪಟ್ಟಿರಬಹುದು. ಅಲ್ಲದೆ ಮೋಸ ಮಾಡಿದ ಕಾರಣವೂ ಇರಬಹುದು. ಯಶಸ್ಸು ಸಾಧಿಸದೆ ಇದ್ದಾಗ ಹೀಗಾಗಿರಬಹುದು. ನನ್ನ ಗೋಳು ಮಾತ್ರ ತಪ್ಪಲಿಲ್ಲ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 80ನೇ ಕಂತು ನಿಮ್ಮ ಓದಿಗೆ
