Advertisement

Category: ದಿನದ ಪುಸ್ತಕ

ನಿತ್ಯ ಜಂಜಡದ ಸಣ್ಣ ಪುಟ್ಟ ಸಂಗತಿಗಳಲ್ಲಿ ಕತೆಗಳ ಹುಡುಕಾಟ: ಎಚ್ ಆರ್ ರಮೇಶ್‌ ಬರಹ

ಇಲ್ಲಿನ ಎಲ್ಲ ಕತೆಗಳ ಹಿಂದಿನ ಕಾಳಜಿ ಮನುಷ್ಯ ಎದುರಿಸುತ್ತಿರುವ ಬಿಕ್ಕಟ್ಟು, ಹಾಗೂ, ಮಾನಸಿಕವಾಗಿ ಉಸಿರುಗಟ್ಟಿಕೊಂಡು ಬಿದ್ದು ಒದ್ದಾಡುತ್ತಿರುವ ಇಕ್ಕಟ್ಟುಗಳಿಂದ ಪಾರಾಗಿ ಹಸನಾದ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿರುವವರ ಚಿತ್ರಣಗಳನ್ನು ಭಾಷೆಯಲ್ಲಿ ರೂಪಕಗಳಾಗಿ ಹಿಡಿದಿಡುವುದಾಗಿದೆ. ತಮ್ಮ ಮೊದಲ ಪ್ರಯತ್ನದಲ್ಲಿಯೇ ಶೃತಿ ಬಿ. ಆರ್ ಅವರು ತಮ್ಮೀ ಕತೆಗಳ ಮುಖೇನ ಹೊಸ ಸಾಧ್ಯತೆಗಳನ್ನು ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತೆ ಮಾಡಿದ್ದಾರೆ.
ಶೃತಿ ಬಿ.ಆರ್. ಕಥಾ ಸಂಕಲನ “ಎಲ್ಲೆಗಳ ದಾಟಿದವಳು” ಕುರಿತು ಎಚ್.ಆರ್.‌ ರಮೇಶ್‌ ಬರಹ

Read More

ಭೂಮಾನುಭೂತಿಯ ಬರಹಗಳು: ನಾರಾಯಣ ಯಾಜಿ ಕೃತಿಯ ಕುರಿತ ಹರೀಶ್‌ ಕೇರ ಮುನ್ನುಡಿ

ಈ ಬರಹಗಳು ಆಕಾಶ ಹಾಗೂ ಭೂಮಿಯ ನಡುವೆ ಸಲೀಸಾಗಿ ಯಾನ ಕೈಗೊಳ್ಳುತ್ತವೆ. ಪುರಾಣೇತಿಹಾಸಗಳ ಕ್ಲಾಸಿಕ್‌ ಸಾಹಿತ್ಯಗಳ ಆಕಾಶ ತತ್ವಗಳ ಜೊತೆಜೊತೆಗೇ ನಮ್ಮಂಥ ಸಾಮಾನ್ಯ ಮಾನವರ ನೆಲಕ್ಕಂಟಿದ ಬದುಕಿನ ಭೂಮಿ ತತ್ವವೂ ಹದವಾಗಿ ಬೆರೆತುಕೊಂಡಿವೆ. ಮಹಾತ್ಮ ಗಾಂಧಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಹಾಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇರುವ ಲೇಖನಗಳು ಈ ಕೃತಿಯ ಪ್ರಮುಖ ಲೇಖನಗಳಲ್ಲಿ ಕೆಲವು. ಇವು ನಮ್ಮ ಐತಿಹಾಸಿಕ ನೆಲೆಗಟ್ಟಿನಲ್ಲಿ ಈ ಅದ್ವಿತೀಯ ಪುರುಷರ ಆದರ್ಶಗಳು ಕಾಣ್ಕೆಗಳು ಹೇಗಿದ್ದವು ಎಂಬುದರ ನಿಡುನೋಟವನ್ನು ನೀಡುತ್ತವೆ.
ನಾರಾಯಣ ಯಾಜಿ ಹೊಸ ಕೃತಿ “ಧವಳ ಧಾರಿಣಿ”ಗೆ ಹರೀಶ್‌ ಕೇರ ಬರಹ

Read More

ಹಸಿರು ಪುಕ್ಕ: ಡಾ. ಅಶ್ವಥ ಕೆ.ಎನ್.‌ ಪುಸ್ತಕದ ಒಂದು ಬರಹ

ಪರದೆಯ ಹಿಂದೆ ಆಲದಮರದಿಂದ ಯಾವುದೋ ಭೂತವೋ! ಪಿಶಾಚಿಯೋ! ಪರ್… ಎನ್ನುತ್ತಾ ಜೋರಾಗಿ ಪಂಚೆಗೆ ಬಡಿಯಿತು. ಆ ಪಂಚೆ ನಮ್ಮಿಬ್ಬರ ಮುಖಕ್ಕೆ ಬಡಿದು, ಪಂಚೆಯ ಮೇಲೆ ಕುಳಿತಿದ್ದ ಪತಂಗ, ಹುಳ-ಹುಪ್ಪಟಗಳೆಲ್ಲ ಮೈಮೇಲೆ ಬಿದ್ದವು. ಅಮಾವಾಸ್ಯೆ ಮಧ್ಯರಾತ್ರಿಯ ಆ ಕಗ್ಗತ್ತಲಲ್ಲಿ ನಮ್ಮನ್ನೇ ಬೀಳಿಸುವಂತೆ ಬಂದ ಆ ಅನಿರೀಕ್ಷಿತ ಜೀವಿಯಿಂದ ಹೆದರಿ ಇನ್ನೇನು ಕಾಲಿಗೆ ಬುದ್ದಿ ಹೇಳಬೇಕು; ಅಷ್ಟರಲ್ಲಿ, ಪಂಚೆಯ ಪಕ್ಕದಲ್ಲೇ ನಮ್ಮಿಬ್ಬರ ನಡುವೆಯೇ ಹಸಿರು ಬಣ್ಣದ ಹಕ್ಕಿಯೊಂದು ಹಾರಿ ಹೋಯಿತು.
ಡಾ. ಅಶ್ವಥ ಕೆ.ಎನ್.‌ ಬರೆದ ಹಕ್ಕಿಲೋಕದ ಕತೆಗಳ ಕೃತಿ “ಜಂಗಾಲ”ದ ಒಂದು ಬರಹ ನಿಮ್ಮ ಓದಿಗೆ

Read More

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು ಕೂಡ ಲ್ಯಾಂಡ್‌ ಬ್ಯಾಂಕ್‌ ಕೆಲಸದಲ್ಲಿ ಎಷ್ಟೇ ಹೊತ್ತು ತಡವಾದರೂ ಒಂದು ಸಲ ಸಂಜೆ ಅಂಗಡಿಗೆ ಹೋಗಿ, ಸಾಮಾನು, ಕ್ಯಾಶ್‌ ಎಲ್ಲ ಲೆಕ್ಕ ನೋಡಿ ತಮ್ಮನಿಗೆ ಸಹಾಯ ಮಾಡುತ್ತಿದ್ದ. ನೋಡಿ, ಈಗಿನ ಕಾಲದಲ್ಲೂ ಇಂತಹ ಗುಣವಂತ, ನೀತಿವಂತ ಹುಡುಗರು ಇರುತ್ತಾರಾ ಅಂತ ಕಿರಂಗೂರಿನ ಸಮಸ್ತ ಪ್ರಜೆಗಳಿಗೆ ಕೊನೇ ಪಕ್ಷ ಮೂರು ನಾಲ್ಕು ಸಲವಾದರೂ ಗೋದಾದೇವಿ ಹರಿಕತೆ ಮಾಡಿ ತಿಳಿಸಿದ್ದಳು.
ಕೆ. ಸತ್ಯನಾರಾಯಣ ಹೊಸ ಕಾದಂಬರಿ “ಅಂಪೈರ್‌ ಮೇಡಂ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಸಾಕುನಾಯಿಗಳೊಂದಿಗಿನ ಅನನ್ಯ ಮೈತ್ರಿ…: ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ ಬರಹ

ಅದೊಂದು ಶನಿವಾರ. ರಾಮು ನಾಯಿ ಉಪವಾಸ ಮಾಡುತ್ತದೆ. ಇಡೀ ದಿನ ಯಾವ ಆಹಾರ ಕೊಟ್ಟರೂ ತಿನ್ನುವುದಿಲ್ಲ. ಮನೆಯ ಸದಸ್ಯರು ವಾರದ ಉಪವಾಸ ಮಾಡುತ್ತಿದ್ದರು. ಅದನ್ನು ಅನುಕರಣೆ ಮಾಡಿ ನಾಯಿಯೂ ಉಪವಾಸ ಮಾಡಿರಬಹುದು. ಬಾಲಕರು ಮನೆಯಿಂದ ಹೊರಗೆ ಹೊರಟರೆ ಅವರಿಗೆ ಬೆಂಗಾವಲಾಗಿ ಹಾಗೂ ಮನೆಗೆ ಮಕ್ಕಳನ್ನು ವಾಪಸ್ಸು ಕರೆತರಲು ನಾಯಿಗಳು ಅವರನ್ನು ಹಿಂಬಾಲಿಸಿ ಹೊರಟುಬಿಡುತ್ತಿದ್ದವು. ಮಕ್ಕಳಿಗೆ ಮನೆಯ ದಾರಿ ತಿಳಿಯದಾದಾಗ ಮುದ್ದುನಾಯಿಗಳು ದಾರಿ ತೋರಿಸುತ್ತಾ ಮನೆಗೆ ಕರೆತಂದ ಸಂದರ್ಭವಿದೆ.
ವೇದವತಿ ಕೋದಂಡರಾಮ್ ತಮ್ಮ ಮನೆಯ ಸಾಕುಪ್ರಾಣಿಗಳ ಕುರಿತು ಬರೆದ “ಯಾವ ಜನ್ಮದ ಮೈತ್ರಿ” ಕೃತಿಯ ಕುರಿತು ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ