Advertisement

Category: ದಿನದ ಪುಸ್ತಕ

ಶಿಶಿರ ಮಾಸದಲ್ಲಿ ಕವಿತೆಯ ಓದು

ನೆರೂಡನ ಪ್ರಸಿದ್ಧ ಮಾತುಗಳು ಇಲ್ಲಿ ನೆನಪಾಗುತ್ತಿವೆ ‘ವಾಸ್ತವವಾದಿಯಲ್ಲದ ಕವಿ ಸತ್ತಿರುತ್ತಾನೆ. ಕೇವಲ ವಾಸ್ತವವಾದಿಯಾದ ಕವಿಯೂ ಸತ್ತಿರುತ್ತಾನೆ. ಕೇವಲ ವಿಚಾರ ಮಾತ್ರವೇ ಆಗಿರುವ ಕವಿಯನ್ನು ಮೂರ್ಖರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ! ಇದೂ ಕೂಡ ವಿಷಾದದ ಸಂಗತಿ’. ಡಾ. ಅರುಂಧತಿ ಅವರ ಕವಿತೆಗಳೂ ಇಂತಹ ತೊಡಕುಗಳನ್ನು ದಾಟಿ, ಜಟಿಲತೆ, ಆರ್ಭಟ, ರೊಚ್ಚು ಹಾಗೂ ಪ್ರತೀಕಾರದ ಸೋಂಕಿಲ್ಲದೆ, ಸರಳತೆಯಲ್ಲಿ ಅರಳಿವೆ. ಇಲ್ಲಿ ‘ಸರಳತೆ’ ಎಂದರೆ ಸರಳೀಕರಿಸಿದ್ದು ಎನ್ನುವ ಅರ್ಥದಲ್ಲಿ ಅಲ್ಲ! ಅನುಕಂಪ-ಕ್ರೌರ್ಯ, ನಂಬಿಕೆ-ದ್ರೋಹ ಇವುಗಳೆಲ್ಲದರ ಸಂಘರ್ಷ.
ಡಾ. ಅರುಂಧತಿಯವರ ಚೊಚ್ಚಲ ಕವನ ಸಂಕಲನ ‘ಜೀವ ಜಾಲದ ಸಗ್ಗ’ಕ್ಕೆ ಜಿ ವಿ ಆನಂದಮೂರ್ತಿ ಬರೆದ ಮುನ್ನುಡಿನೆರೂಡನ ಪ್ರಸಿದ್ಧ ಮಾತುಗಳು ಇಲ್ಲಿ ನೆನಪಾಗುತ್ತಿವೆ ‘ವಾಸ್ತವವಾದಿಯಲ್ಲದ ಕವಿ ಸತ್ತಿರುತ್ತಾನೆ. ಕೇವಲ ವಾಸ್ತವವಾದಿಯಾದ ಕವಿಯೂ ಸತ್ತಿರುತ್ತಾನೆ. ಕೇವಲ ವಿಚಾರ ಮಾತ್ರವೇ ಆಗಿರುವ ಕವಿಯನ್ನು ಮೂರ್ಖರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ! ಇದೂ ಕೂಡ ವಿಷಾದದ ಸಂಗತಿ’. ಡಾ. ಅರುಂಧತಿ ಅವರ ಕವಿತೆಗಳೂ ಇಂತಹ ತೊಡಕುಗಳನ್ನು ದಾಟಿ, ಜಟಿಲತೆ, ಆರ್ಭಟ, ರೊಚ್ಚು ಹಾಗೂ ಪ್ರತೀಕಾರದ ಸೋಂಕಿಲ್ಲದೆ, ಸರಳತೆಯಲ್ಲಿ ಅರಳಿವೆ. ಇಲ್ಲಿ ‘ಸರಳತೆ’ ಎಂದರೆ ಸರಳೀಕರಿಸಿದ್ದು ಎನ್ನುವ ಅರ್ಥದಲ್ಲಿ ಅಲ್ಲ! ಅನುಕಂಪ-ಕ್ರೌರ್ಯ, ನಂಬಿಕೆ-ದ್ರೋಹ ಇವುಗಳೆಲ್ಲದರ ಸಂಘರ್ಷ.
ಡಾ. ಅರುಂಧತಿಯವರ ಚೊಚ್ಚಲ ಕವನ ಸಂಕಲನ ‘ಜೀವಜಾಲದ ಸಗ್ಗ’ಕ್ಕೆ ಜಿ ವಿ ಆನಂದಮೂರ್ತಿ ಬರೆದ ಮುನ್ನುಡಿ

Read More

ಸಂಕಟ, ಸಂಘರ್ಷದ ಕಥೆ ಹೆಣೆಯುವ ಗೈರಸಮಜೂತಿ

 ಒಂದು ಕಾಲದ ನಮ್ಮ ಹಿಂದಿ ಕವಿಗಳಾದ ಬಚ್ಚನ್, ನಿರಾಲಾ, ಸುಮಿತ್ರಾನಂದನ್ ಪಂತರಂತಹ ಲೇಖಕರು ರೂಪಿಸಿಕೊಂಡಿದ್ದ ಆಜ್ಞೆಯತಾವಾದದ ಇನ್ನೊಂದು ಉದಾರೀಕೃತ ತಾತ್ವಿಕ ಸುಕುಮಾರ ರೂಪವೇ ಈ ಕಾದಂಬರಿಯ ಅಡಿಪಾಯದಲ್ಲೂ ಇದೆ ಎನ್ನಿಸುತ್ತದೆ. ಹಾಗೆಂದ ಮಾತ್ರಕ್ಕೆ ಈ ಬಗೆಯಲ್ಲಿ ರಸರಮ್ಯಲೋಕವೊಂದನ್ನು ಕಟ್ಟಿಕೊಡುವ ಕಥನಗಳು ಇಲ್ಲಿವೆ.  ರಾಘವೇಂದ್ರ ಪಾಟೀಲರ “ಗೈರ ಸಮಜೂತಿ” ಕಾದಂಬರಿಯ ಕುರಿತು ಮಾಲಿನಿ ಗುರುಪ್ರಸನ್ನ ಬರಹ

Read More

ಮಧ್ಯಮಾವತಿಯ ಅಂತರಂಗದಲ್ಲಿ ‘ಅವನು’

ಈ ಕವನಸಂಕಲನದಲ್ಲಿ , ಪೂರ್ಣಿಮಾ ಸುರೇಶ್ ಕಟ್ಟಿಕೊಡುವ ಅಂತರಂಗದ ಈ “ಅವನು” ಅನ್ನುವ ಪಾತ್ರ ಬಹಳ ಕಾಡುತ್ತದೆ. ಅದು ‘ಅವಳು’ ಎಂಬುದಾಗಿ ಬದಲಾಗಲೂ ಆಗಬಹುದು. ಅಂತರಂಗದ ‘ಅವನು’  ಬಹಳಷ್ಟು ಪ್ರಶ್ನೆ ಕೇಳುತ್ತಾನೆ. ಯಾವುದೋ ನಮ್ಮ ಸಮಸ್ಯೆಗಳಿಗೆ ಪರಿಹಾರವಾಗುತ್ತಾನೆ. ಎಷ್ಟೋ ಸಲ ಅರ್ಥವಾಗದೇ ಸತಾಯಿಸುತ್ತಾನೆ. ಯಾವುದೋ ಅರ್ಥವಾಗದ ಅಚ್ಚರಿಯನ್ನು ನಮ್ಮಲ್ಲಿ ಉಳಿಸುತ್ತಾನೆ. ಅಕಾಲದ ಮಳೆಯ ಹಾಗೆ. ಹಾಗೆಂದು ಇಲ್ಲಿ ರೂಪಕಗಳ ಮೂಲಕ ಮಾತನಾಡುವ ಕವಿತೆಗಳು ಎಲ್ಲವನ್ನೂ ಬಿಟ್ಟುಕೊಡಲೂ ತಯಾರಿಲ್ಲ.   ಪೂರ್ಣಿಮಾ ಸುರೇಶ್‍ ಹೊಸಕವನ ಸಂಕಲನ ‘ಮಧ್ಯಮಾವತಿ’ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಅನಿಸಿಕೆ.

Read More

ದೊಡ್ಡವರಿಗೆ ಬುದ್ಧಿ ಹೇಳಬಲ್ಲ ಹಾರುವ ಕುದುರೆ

ಮಕ್ಕಳ ಮನೋಭಾವವನ್ನು ಗ್ರಹಿಸಿ ರಚಿಸಿರುವ ಈ ಸಂಕಲನದಲ್ಲಿ  ಸಾಮಾನ್ಯ ಕಥೆಗಳೂ ಇವೆ. ಜೊತೆಗೆ ಅಸಾಮಾನ್ಯ ಫ್ಯಾಂಟಸಿ ಕಥೆಗಳೂ ಇವೆ. ಕಲ್ಪನೆಯನ್ನು ಇಷ್ಟಪಡುವ ಮಕ್ಕಳಿಗೆ ಫ್ಯಾಂಟಸಿ ಇಷ್ಟವಾಗುತ್ತದೆ. ಅವರ  ಇಷ್ಟವನ್ನು ಗ್ರಹಿಸಿ , ಅವರು ಕಥೆಗಳನ್ನು ಪೋಣಿಸಿದ್ದಾರೆ. ಫ್ಯಾಂಟಸಿ ಕಥೆಗಳನ್ನು ಹೇಳಲು ಕಾಲ್ಪನಿಕ ಅಜ್ಜನೊಬ್ಬನನ್ನು ಸೃಷ್ಟಿಸಿಕೊಂಡಿದ್ದಾರೆ.   ನಾಗರಾಜ್ ಎಂ ಹುಡೇದ  ಬರೆದ ‘ಅವತಾರ್ ಮತ್ತು ಹಾರುವ ಕುದುರೆ’ ಕಥಾಸಂಕಲನದ ಕುರಿತು ಪ.ನಾ.ಹಳ್ಳಿ ಹರೀಶ್‍ ಕುಮಾರ್ ಅವರ ಅಭಿಪ್ರಾಯ  ಇಲ್ಲಿದೆ.

Read More

ಚಂದಿರನ ಕುವರಿಯರು ಕತೆಯೋದುವ ಮೊದಲು..

ಜಗತ್ತಿನ ಎಲ್ಲ ಭಾಷೆಗಳ ಉತ್ಕೃಷ್ಟ ಕೃತಿಗಳೂ ಪರಸ್ಪರ ಅನುವಾದಗೊಂಡಿವೆ. ಸ್ವತಂತ್ರಕೃತಿಗಳಿಗೆ ಇರುವಷ್ಟೇ ಮರ್ಯಾದೆ ಅನುವಾದ ಕೃತಿಗಳಿಗೂ ಇದೆ. ವಿಶ್ವಸಂಸ್ಕೃತಿಯ ವಿಕಾಸದಲ್ಲಿ ಭಾಷಾಂತರವೂ ನಿರ್ಮಾತೃಶಕ್ತಿ ಆಗಿರುವುದರಿಂದ ಅದರ ಅಗತ್ಯ ನಮ್ಮೆಲ್ಲ ಭಾಷೆಗಳಿಗೂ ಇದೆ. ಈ ದಿಸೆಯಲ್ಲಿ ಆರ್ ವಿಜಯರಾಘವನ್ ಅವರ ‘ಚಂದಿರನ ಕುವರಿಯರು’ ಕಥಾಸಂಕಲನದ ಕಥೆಗಳು ಕನ್ನಡದ ಸಂದರ್ಭದಲ್ಲಿ ಬಹಳ ಮುಖ್ಯವೆನಿಸುತ್ತವೆ. ಭಾಷೆ ಮತ್ತು ಸಂಸ್ಕೃತಿಗಳು ನಾಗರಿಕತೆಯ ಹೆಸರಿನಲ್ಲಿ ಜಾಗತೀಕರಣಕ್ಕೆ ಒಳಗಾಗಿರುವ ಈ ಸನ್ನಿವೇಶದಲ್ಲಿ ಅನುವಾದಗಳಿಗೆ ಮಡಿ-ಮೈಲಿಗೆಯ ಸೋಂಕು ಹತ್ತಿಸಬೇಕಿಲ್ಲ.
ಆರ್ ವಿಜಯರಾಘವನ್ ಅನುವಾದಿತ ಕತೆಗಳ ಸಂಕಲನ ‘ಚಂದಿರನ ಕುವರಿಯರು’ ಪುಸ್ತಕಕ್ಕೆ ಎನ್. ನರಹರಿ ಬರೆದ ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ