Advertisement

Category: ಸಂಪಿಗೆ ಸ್ಪೆಷಲ್

“ಹಳದಿ ಕೊಡೆ”: ಡಾ. ಖಂಡಿಗೆ ಮಹಾಲಿಂಗ ಭಟ್ ಅನುವಾದಿಸಿದ ರಸ್ಕಿನ್‌ ಬಾಂಡ್‌ ಬರಹ

ಅವನು ಸಾಮಾನ್ಯವಾಗಿ ನನ್ನನ್ನು ನನ್ನ ಆಫೀಸ್‌ನಲ್ಲಿ ಕಾಣುತ್ತಿದ್ದನು. ಇಲ್ಲವಾದರೆ ಕಿರಿದಾದ ಹೂವಿನ ತೋಟದಲ್ಲಿ ಸ್ನ್ಯಾಪ್ ಡ್ರ್ಯಾಗನ್ ಮತ್ತು ಪೆಟೋನಿಯಾಗಳನ್ನು ಬೆಳೆಸಲೆತ್ನಿಸುವಾಗ ಕಾಣುವನು. ಬಿಸಿಲಿನ ದಿನಗಳಲ್ಲಿ ಬಾಯಾರಿಕೆ ಆರಿಸಲು ನೀರನ್ನು ಕುಡಿದು ಬಾಯಾರಿಕೆ ನಿವಾರಿಸಿಕೊಂಡ ಮೇಲೆ ಅವನು ತಗ್ಗಿದ ತೋಟದ ಗೋಡೆಯ ಮೇಲೆ ಐದರಿಂದ ಹತ್ತುನಿಮಿಷ ಕುಳಿತು ಪೇಟೆಯಲ್ಲಿನ ಹೊಸಹೊಸ ಸುದ್ದಿಗಳನ್ನೆಲ್ಲ ನನಗೆ ತಿಳಿಸುತ್ತಿದ್ದನು.
ರಸ್ಕಿನ್‌ ಬಾಂಡ್‌ ಬರೆದ “ಯೆಲ್ಲೋ ಅಂಬ್ರೆಲ್ಲಾ” ಬರಹವನ್ನು ಡಾ. ಖಂಡಿಗೆ ಮಹಾಲಿಂಗ ಭಟ್ ಕನ್ನಡಕ್ಕೆ ಅನುವಾದಿಸಿದ್ದು, ನಿಮ್ಮ ಓದಿಗೆ ಇಲ್ಲಿದೆ

Read More

ಮನೆಯವರ ಮನಗಳಲ್ಲಿ ಸಾಯುವವರ ಕತೆ: ರೂಪಶ್ರೀ ಕಲ್ಲಿಗನೂರ್‌ ಬರಹ

ಜೊತೆಯಲ್ಲಿ ಯಾರೂ ಇಲ್ಲದ್ದರಿಂದ, ಅವರ ಜೋಬಿನಲ್ಲಿದ್ದ ಮೊಬೈಲ್‌ ತೆಗೆದುಕೊಂಡು ಅದಕ್ಕೆ ಬಂದ-ಹೋದ ಒಂದಷ್ಟು ನಂಬರ್‌ಗಳಿಗೆ ಕಾಲ್‌ ಮಾಡಿ ವಿಷಯ ತಿಳಿಸಿದ್ದರು. ನಂತರ ಮೃತದೇಹವನ್ನು ಊರಿಗೆ ತರಿಸಿಕೊಂಡು ಎಲ್ಲ ಕಾರ್ಯಗಳನ್ನು ಮಾಡಿ ಮನೆಗೆ ಹೋಗುವಾಗ ಯಾರ ಕಣ್ಣಲ್ಲೂ ಹನಿ ನೀರುಕಾಣಲಿಲ್ಲ… ಅವರರ್ಯಾರ ಮುಖದಲ್ಲಿ ಅಯ್ಯೋ ತಮ್ಮ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡೆವಲ್ಲ ಎನ್ನುವ ನೋವು ಕಾಣಿಸುತ್ತಿರಲಿಲ್ಲ.. ಬದಲಾಗಿ ಅಕ್ಕ-ತಂಗಿಯರಾಗಿ ಎಲ್ಲರೂ ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡಿ-ಮುಗಿಸಿದೆವಲ್ಲ… ದೇವರಿಗೆ ನಮ್ಮ ಮೇಲೆ ಸ್ವಲ್ಪವಾದರೂ ಕರುಣೆ ಇದೆಯಪ್ಪ.. ಎನ್ನಿಸಿತ್ತು. ಅಷ್ಟೇ.
ರೂಪಶ್ರೀ ಕಲ್ಲಿಗನೂರ್ ಬರಹ ನಿಮ್ಮ ಓದಿಗೆ

Read More

ಪೆಟ್ಟುಮಾಡಿಕೊಂಡ ಕಿಟ್ಟಪ್ಪನಿಗೆ ಸಂದ ಪೂಜೆ…: ಎಚ್. ಗೋಪಾಲಕೃಷ್ಣ ಸರಣಿ

ಇಲ್ಲಿ ನನ್ನ ಸಂಪೂರ್ಣ ತಲಾಶ್ ನಡೆಯಿತು. ಎಡಗೈ ಇನ್ನೂ ನೇತಾಡುತ್ತಾ ಇತ್ತಲ್ಲ. ಅದನ್ನ ಹೇಗೋ ಮಡಿಸಿ ಒಂದು ಪಂಚೆಯನ್ನ ಸ್ವಿಂಗ್ ತರಹ ಮಾಡಿ ಕೊರಳಿಗೆ ನೇತು ಹಾಕಿದ್ದಳು. ಇಷ್ಟು ಹೊತ್ತಿಗೆ ಮೈಮೇಲೆ ಬಂದಿದ್ದ ಚಾಮುಂಡಿ ದೇವತೆ ಕೊಂಚ ಶಾಂತವಾಗಿತ್ತು. ತಟ್ಟೆಯಲ್ಲಿ ಅನ್ನ, ದಂಟಿನ ಸೊಪ್ಪಿನ ಹುಳಿ ಕಲಸಿ ಕೊಟ್ಟಳು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೆರಡನೆಯ ಕಂತು

Read More

ಬದುಕಿನ ಪಲಕುಗಳನ್ನು ಹಾಡಾಗಿಸಿದ ಕವಿ: ಶಿವ ಹಿತ್ತಲಮನಿ ಬರಹ

ಸಂಸಾರದ ಏರಳಿತದ ನೋವು ನಲಿವುಗಳ ಗಳಿಗೆಗಳನ್ನು ವಿವರವಾಗಿ ಹೇಳದೆಯೇ ಎಲ್ಲವನ್ನೂ ಅದೆಷ್ಟು ಸೂಕ್ಷ್ಮವಾಗಿ ತೆರೆದಿಟ್ಟರು ಹೆಚ್.ಎಸ್.ವಿ… ಸಮಯ ಹೋದಂತೆ ಸಂಸಾರ ಬೆಳೆದು, ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಗಳಿಟ್ಟು ಮನೆ ತುಂಬಾ ಓಡಾಡಿ ತುಂಟಾಟ ಮಾಡುವಾಗ ಕವನ ಕಟ್ಟಿಕೊಟ್ಟಿದ್ದು ಮತ್ತೆ ಹೆಚ್.ಎಸ್.ವಿ.
ಎಚ್.‌ ಎಸ್.‌ ವೆಂಕಟೇಶಮೂರ್ತಿಯವರ ಕವಿತೆಗಳು ಹೇಗೆ ಬದುಕಿನ ಬೇರೆಬೇರೆ ಘಟ್ಟಗಳ ಕನ್ನಡಿಯಾಗಿದ್ದವು ಎಂಬುದರ ಕುರಿತು ಶಿವ ಹಿತ್ತಲಮನಿ ಬರಹ ನಿಮ್ಮ ಓದಿಗೆ

Read More

ನನ್ನಜ್ಜಿ ಬದುಕಿರುವುದು ಅವಳ ಹಾಡುಗಳಲ್ಲಿ: ಅನನ್ಯ ತುಷಿರಾ ಬರಹ

ಎಷ್ಟೋ ಬಾರಿ ಸಣ್ಣ ಪುಟ್ಟ ಸಂಗತಿಗಳಿಗೆ ಸೋತು ಹೋದಂತಾಗುತ್ತದೆ. ಏರಿ ನಿಂತ ಎತ್ತರ ಸುಲಭಕ್ಕೆ ದಕ್ಕಿಲ್ಲವಾದರೂ ನಿಭಾಯಿಸುವಲ್ಲಿ ಅಲುಗಾಡಿದಂತಾಗುತ್ತದೆ. ಅಂಥ ಸಂದರ್ಭದಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಉತ್ತರವಾಗಿ ಒಂದು ಬೆಳಕು ಕಾಣುವುದು ನನ್ನಜ್ಜಿಯ ಬದುಕಿನಿಂದ. ಅವಳ ಹಾಡುಗಳಿಂದ. ಬದುಕು ಕಟ್ಟುವ ಹೊತ್ತಿಗೆ ಸಂಗಾತಿಯ ಸಾವು ಕಂಡೂ ಕೂಡ ಬದುಕ ಹಾಡು ಕಟ್ಟಿದವಳು ನನ್ನಜ್ಜಿ. ‘ನನ್ನಜ್ಜಿಯ ಜೀವನವನ್ನೂ, ಜನಪದ ಹಾಡುಗಳನ್ನೂ ಬಿಡಿಸಿ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ನನ್ನಿಂದ’ ಎನ್ನುವಷ್ಟು ಆ ಪದಗಳು ಅವಳ ಹಾದಿಯಲ್ಲಿ ಬೆರೆತು ಹೋಗಿವೆ.
ಅನನ್ಯ ತುಷಿರಾ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ