Advertisement

Category: ಸಂಪಿಗೆ ಸ್ಪೆಷಲ್

ಹಿಮಾಲಯದಲ್ಲಿ ಹಕ್ಕಿಗಳ ಚಿಲಿಪಿಲಿ: ಡಾ. ಖಂಡಿಗೆ ಮಹಾಲಿಂಗ ಭಟ್ ಅನುವಾದಿತ ರಸ್ಕಿನ್‌ ಬಾಂಡ್‌ ಬರಹ

ಈ ಹಾಡು ನನ್ನನ್ನು ಯಾವಾಗಲೂ ಮರುಳುಗೊಳಿಸುತ್ತದೆ. ಈ ಪಕ್ಷಿಯು ಅನುಮಾನದಿಂದ ಕೂಗಿ, ಸರಿಯಾದ ರಾಗವನ್ನು ಪ್ರಯತ್ನಿಸುವಂತೆ, ಅನಂತರ ಆತ್ಮವಿಶ್ವಾಸದಿಂದ ಇಂಪಾಗಿ ಪೂರಾ ಹಾಡನ್ನು ಲಯ ಬದ್ಧವಾಗಿ ಬೆಟ್ಟದ ಸುತ್ತಲೂ ಕೇಳುವಂತೆ ಹಾಡಿತು. ಇದ್ದಕ್ಕಿದ್ದಹಾಗೇ ಸಂಗೀತವು ನಿಲ್ಲುವುದು, ಸ್ವರ ಆರೋಹಣದ ಮಧ್ಯೆ; ಮತ್ತು ನಾನು ಆಶ್ಚರ್ಯದಿಂದ ಹಕ್ಕಿ ಹಾಡುವುದನ್ನು ನಿಲ್ಲಿಸುವುದಕ್ಕೆ ಏನಾಗಿರಬಹುದು ಎಂಬುದಾಗಿ ಚಿಂತಿಸಿದೆ.
ಡಾ. ಖಂಡಿಗೆ ಮಹಾಲಿಂಗ ಭಟ್ ಅನುವಾದಿಸಿದ ರಸ್ಕಿನ್‌ ಬಾಂಡ್‌ ಅವರ “ರೇನ್‌ ಇನ್‌ ದ ಮೌಂಟೇನ್ಸ್‌” ಕೃತಿಯ ಒಂದು ಬರಹ ನಿಮ್ಮ ಓದಿಗೆ

Read More

‘ದಿ ಫೈಯರ್’….: ಡಾ. ಶ್ರೀಪಾದ ಭಟ್‌ ಬರಹ

ವಸಾಹತುಶಾಹಿಯ ದೌರ್ಜನ್ಯಕ್ಕೆ ತೀವ್ರ ಬಲಿಯಾಗಿ ಅದರಿಂದ ಹೊರಬಂದು ಸ್ವತಂತ್ರ ವ್ಯಕ್ತಿತ್ವಕ್ಕಾಗಿ ನಡೆಸಿದ ಪ್ರಯತ್ನದ ಭಾಗವಾಗಿ ಇಂತಹ ಬರಹಗಳನ್ನು ನಾವು ಮುಖಾಮುಖಿಯಾಗುವುದು ಸಾಂಸ್ಕೃತಿಕ ಸ್ವರೂಪದಲ್ಲಿ ವಸಾಹತುಶಾಹಿಗೆ ಎದುರಾಗುವ ಒಂದು ಬಗೆ ಎಂದೇ ಈ ಪ್ರಯತ್ನವನ್ನು ನೋಡಬಹುದಾಗಿದೆ. ನಮ್ಮ ಸಂಸ್ಕೃತಿ, ಜೀವನ ವಿಧಾನಗಳನ್ನು ಸಂರಕ್ಷಿಸಿಕೊಳ್ಳುವ ಹೋರಾಟದ ನೆಲೆ ಭಾರತಕ್ಕೂ, ಲ್ಯಾಟಿನ್ ಅಮೇರಿಕಕ್ಕೂ ಒಂದೇ ಆಗಿದೆ ಎಂಬುದನ್ನು ತಜ್ಞರು ಈಗಾಗಲೇ ತಿಳಿಸಿಯಾಗಿದೆ.
ಸಂತೋಷ ಪಟ್ಲ ನಿರ್ದೇಶನದ ‘ದಿ ಫೈಯರ್’ ರಂಗ ಪ್ರಯೋಗದ ಕುರಿತು ಡಾ. ಶ್ರೀಪಾದ ಭಟ್‌ ಬರಹ

Read More

ಶಾಲೆ ಕಳ್ಳ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ

ಎಷ್ಟೋ ಸಲ‌ ಗೇಟ್ ಹತ್ತಿರ ಹೋಗುವಾಗಲೇ ಶಾಲೆಯ ಪ್ರಾರ್ಥನೆ ಶುರುವಾಗುತ್ತಿತ್ತು. ಪ್ರಾರ್ಥನೆ ಹೇಳುವ ಮಕ್ಕಳ ಸಮೂಹ ಗಾಯನದಲ್ಲಿ, “ಮಂಗಳವನು ಕರೆಯುತಿರುವ ದೇವ ಶುಭವ ನೀಡಲಿ…” ಅಂತ ಕೇಳುವಾಗಲೇ ಅಳು ಉಕ್ಕಿ ಉಕ್ಕಿ ಬರುತ್ತಿತ್ತು. ತಡ ಆಯ್ತು, ಇನ್ನು ಟೀಚರ್ ಹೊಡಿತಾರೆ, ಅಮ್ಮ ಬಿಟ್ಟು ಹೋದ್ರು ಅನ್ನೋದು ಮಾತ್ರವಲ್ಲದೇ ಎದೆಯಲ್ಲಿ ಯಾವುದೋ ಏಕಾಂಗಿ ಭಾವ ಉಕ್ಕಿ ದುಃಖ ಉಮ್ಮಳಿಸಿ ಬರುತ್ತಿತ್ತು. ಅದು ಆ ಪ್ರಾರ್ಥನೆಯ ರಾಗದಿಂದ ಹಾಗಾಗುತ್ತಿತ್ತೋ ಅಥವಾ ಬೇರಾವುದರಿಂದಲೋ ಗೊತ್ತಾಗುತ್ತಿರಲಿಲ್ಲ. ನಿಂತಲ್ಲಿಯೇ ಜೋರಾಗಿ ಅತ್ತು ಬಿಡುತ್ತಿದ್ದೆ.
ಶಾಲೆಗೆ ಹೋಗುವುದನ್ನು ತಪ್ಪಿಸಲು ನೋಡುವ ಶಾಲೆ ಕಳ್ಳರ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ

Read More

ನಮ್ಮ ಭೂಮಿಗೆ ಈ ಪುಟ್ಟ ಕಾಣಿಕೆಯನ್ನಾದರೂ ಕೊಡೋಣ..: ಬಿ.ಸಂ.ಸುವರ್ಚಲಾ ಬರಹ

ಹೆಚ್ಚಿನವರ ಕೈಯಲ್ಲಿ ಇಂದು ದುಡ್ಡು ಸುಲಭವಾಗಿ ಓಡಾಡುತ್ತಿದೆ. ಅದಕ್ಕೆ ತಕ್ಕನಾಗಿ ಆಸ್ತಿ, ಅಂತಸ್ತುಗಳು, ಬಳಸುವ ವಸ್ತುಗಳು ಇರಬೇಕೆಂದು ಬಯಸುವವರೇ ಹೆಚ್ಚು. ಪಟ್ಟಣಗಳು, ಮಾಲ್ ಸಂಸ್ಕೃತಿಗಳು ಜನರ ಕೊಳ್ಳುಬಾಕತನವನ್ನು ಇನ್ನಷ್ಟು ಉತ್ತೇಜಿಸುತ್ತಿವೆ. ಇತರರಿಂದ ಪ್ರಭಾವಕ್ಕೊಳಗಾಗುವ ಅನೇಕರು ಇತರರಂತೆ ನಾವೂ ಇರಬೇಕೆನ್ನುತ್ತಾ ತಮ್ಮ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಕೊಳ್ಳುತ್ತಾ ಜೀವನ ಸವೆಸುತ್ತಿದ್ದಾರೆ. ಹೊಸವರ್ಷದ ಹೊಸ್ತಿಲಲ್ಲಿ ನಾವೀಗ ಇದ್ದೇವೆ. ಇನ್ನಾದರೂ ನಾವು ಎಚ್ಚೆತ್ತುಕೊಂಡರೆ, ಒಂದಷ್ಟು ನಮ್ಮ ಅಗತ್ಯತೆ, ಅನಗತ್ಯತೆಗಳನ್ನು ಅರ್ಥ ಮಾಡಿಕೊಂಡರೆ, ಸಹಜ-ಸರಳವಾಗಿ, ಪರಿಸರಕ್ಕೆ ಪೂರಕವಾಗಿ, ಸುಸ್ಥಿರ ಜೀವನ ನಡೆಸಲು ಖಂಡಿತಾ ಸಾಧ್ಯವಿದೆ.
ಪರಿಸರ ಕಾಳಜಿಯ ಕುರಿತು ಬಿ.ಸಂ.ಸುವರ್ಚಲಾ ಬರಹ

Read More

ವ್ಯಕ್ತಮಧ್ಯದ ಬಿಂದುವೊಂದರಲ್ಲಿ ನಿಂತು…: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಮೇ ತಿಂಗಳ ಹದಿನೇಳನೇ ತಾರೀಖು ನನ್ನ ಬಹುಕಾಲದ ಕನಸು ನನಸಾದ ದಿನ. ಪಿಎಚ್.ಡಿ. ವಿದ್ಯಾರ್ಥಿ ಎಂದೆನಿಸಿಕೊಂಡು ಅದಾಗಲೇ ಏಳು ವರ್ಷ ಕಳೆದಿತ್ತು. ಮಹಾಪ್ರಬಂಧ ಸಿದ್ಧಪಡಿಸಿ, ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ವರ್ಷ ಒಂದಾಗಿತ್ತು. ನನ್ನ ಸಂಶೋಧನೆಗೆ ಅರ್ಥಪೂರ್ಣ ಮುಕ್ತಾಯವೊಂದು ದೊರಕುವುದಿಲ್ಲವೋ ಏನೋ ಎಂಬ ಆತಂಕ ಹೃದಯವನ್ನೊತ್ತಿ ನಿಂತಿತ್ತು. ಆ ಕ್ಷಣದಲ್ಲಿಯೇ ಮುಕ್ತ ಮೌಖಿಕ ಪರೀಕ್ಷೆಗೆ ಕರೆಬಂದದ್ದು. ಮೇ ಹದಿನೇಳರಂದು ನಾನು ಮೌಖಿಕ ಪರೀಕ್ಷೆಯನ್ನು ಎದುರಿಸಬೇಕಿತ್ತು. ಅದಕ್ಕೂ ಎರಡು ದಿನ ಮೊದಲು ಅಮ್ಮನ ಆರೋಗ್ಯ ಹದಗೆಟ್ಟು ಬೆಳ್ಳಂಬೆಳಗ್ಗೆಯೇ ಆಸ್ಪತ್ರೆ ಸೇರಿಕೊಳ್ಳುವಂತಾಯಿತು. ಒಂದು ವಾರ ಆಸ್ಪತ್ರೆಯಲ್ಲಿಯೇ ಇರದೆ ಬೇರೆ ದಾರಿಯಿರಲಿಲ್ಲ.
ಹೊಸ ವರ್ಷಕ್ಕೆ ಹಳೆಯ ನೆನಕೆಗಳೊಂದಿಗೆ ಡಾ. ವಿಶ್ವನಾಥ ನೇರಳಕಟ್ಟೆ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ