Advertisement

Category: ಸಂಪಿಗೆ ಸ್ಪೆಷಲ್

‘ಕಾಲ ನದಿಯಲಿ ನಮ್ಮ ಬಾಳ ದೋಣಿ’: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ

ಈ ಮೇಲು ಕೀಳುಗಳ ಕೀಲುಗೊಂಬೆ ಆಟದಲಿ ಜೊತೆಗಿದ್ದು ಬದುಕನ್ನು ಸಹ್ಯ ಮಾಡಿದ್ದಕ್ಕೆ ದಾರಿಯ ಪ್ರಯಾಣದ ಸಂಭ್ರಮವನ್ನು ಹೆಚ್ಚಿಸಿದ್ದಕ್ಕೆ ಯಾರಿಗೋ ಧನ್ಯವಾದ ಹೇಳಬೇಕು. ನನ್ನ ಅಹಂಗಳಲ್ಲಿ ಕುಳಿತು ಯಾರಿಗೋ ಚುಚ್ಚಿ ಮಾತಾಡಿದ್ದ ನೆನಪಾಗಿ ಸಾರಿ ಕೇಳಬೇಕು. ಸುಮ್ಮನೆ ಇಲ್ಲದ ಅವಸರವನ್ನು ಆರೋಪಿಸಿಕೊಂಡು ಬೇರುಗಳನ್ನು ಮರೆತಿದ್ದೇನೆ. ಹತ್ತಿರ ಕೂತು ಆ ಜೀವದ ಹೃದಯದ ಮಾತುಗಳನ್ನು ಕೇಳಿಸಿಕೊಳ್ಳುವುದಿತ್ತು. ಸಂಜೆಗಣ್ಣಿನ ನಿರೀಕ್ಷೆಯ ನೋಟದ ಅಪ್ಪ ಅಮ್ಮ ಇನ್ನೂ ಊರಿನ ಮನೆಯಲ್ಲಿದ್ದಾರೆ. ಹೇಗಾದರೂ ಮಾಡಿ ಈ ಸಲವಾದರೂ ಜೊತೆಗೆ ಕರೆದುಕೊಂಡು ಬರಬೇಕಿತ್ತು…
ಹೊಸ ವರ್ಷದ ಆಚರಣೆಯ ಈ ಹೊತ್ತಿಗೆ ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ಬರಹ ನಿಮ್ಮ ಓದಿಗೆ

Read More

ಕನ್ನಡ ಕಾವ್ಯದಲ್ಲಿ ಸಮಾಧಾನದ ಪ್ರಭು ಯೇಸುವಿನ ಆರಾಧನೆ: ಡಾ. ರಾಜೇಂದ್ರಕುಮಾರ್ ಮುದ್ನಾಳ್ ಬರಹ

ಯಾರು ಏನೇ ಅಂದರೂ ಯಾರು ಏನೇ ತಿಳಿದುಕೊಂಡರು ನಾವು ನಂಬಿರುವ ಪರಿಶುದ್ಧ ಮೌಲ್ಯಗಳೊಂದಿಗೆ ಜೀವಿಸಿದರೆ ಸಕಲವೂ ಸಾಧ್ಯ ಎಂಬುದನ್ನು ಮಹಾತ್ಮರು ತಿಳಿಸಿದ್ದಾರೆ. ಮೌಲ್ಯಗಳು ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಕುಸಿಯುತ್ತಿವೆ. ಅದನ್ನು ಹೇಗೆ ಕಾಪಾಡಿಕೊಳ್ಳಬೇಕು, ಸುಧಾರಿಸಿಕೊಳ್ಳಬೇಕು ಹೇಗೆ ಪುನರ್ ಸ್ಥಾಪಿಸಿಕೊಳ್ಳಬೇಕೆಂಬ ಗೊಂದಲದಲ್ಲಿದ್ದೇವೆ. ಮೌಲ್ಯಗಳು ಇಂದು ಬರಿ ಬಾಯಿ ಮಾತಾಗಿವೆ ಹೊರತು ಪ್ರಾಯೋಗಿಕವಾಗಿ ಮೌನವಾಗಿವೆ ಎಂಬ ಅಳಲು ಕವಿತೆಯದು.
ಕನ್ನಡ ಕಾವ್ಯದಲ್ಲಿ ಯೇಸುವಿನ ಕುರಿತ ಬರೆಯಲ್ಪಟ್ಟ ಕವಿತೆಗಳ ಕುರಿತು ಡಾ. ರಾಜೇಂದ್ರಕುಮಾರ್ ಮುದ್ನಾಳ್ ಬರಹ

Read More

ಭಾವವಿರೇಚನಗೊಳಿಸುವ ದೃಶ್ಯಕಾವ್ಯ ‘ಬಂಧಮುಕ್ತ’: ಡಾ. ಪ್ರಭು ಗಂಜಿಹಾಳ ಬರಹ

`ಬಂಧಮುಕ್ತ’ ಚಿತ್ರ ಇಂದಿನ ಕಾಲಘಟ್ಟದಲ್ಲಿ ಯಾಕೆ ವಿಶೇಷವಾದದ್ದು ಎಂಬುದರ ಕುರಿತು ವಿವರಿಸುವುದಾದರೆ; ಮೊದಲನೇಯದಾಗಿ ಈ ಚಿತ್ರದ ಶೀರ್ಷಿಕೆಯೇ ಒಂದು ಸಕಾರಾತ್ಮಕ ಸಂದೇಶ ನೀಡುವಂತಹದು. ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಯಾವುದಾದರೊಂದು ಹಿಡಿತಕ್ಕೆ ಸಿಲುಕಿ ಅದರಿಂದ ಹೊರ ಬರಲು ಹೆಣಗಾಡುತ್ತಿರುತ್ತಾನೆ. ಸಾವು ಮಾತ್ರ ಮನುಷ್ಯನ ನಿಜವಾದ ಬಿಡುಗಡೆ ಎಂದು ಹೇಳಬಹುದಾದರೂ ಸಾವಿಗೂ ಮುನ್ನವೇ ಬಂಧನಗಳಿಂದ ಮುಕ್ತವಾಗುವ ಮನಸ್ಥಿತಿಯೇ ಬಿಡುಗಡೆಯ ಮಾರ್ಗ ಎಂದು ವಾಖ್ಯಾನಿಸಬಹುದು. ಇದು ಮನೋವಿಜ್ಞಾನ ಮತ್ತು ಆಧ್ಯಾತ್ಮಿಕ ತತ್ವವನ್ನು ತಿಳಿಸುವ ವಿಚಾರ.
ಕುಮಾರ ಬೇಂದ್ರೆ ನಿರ್ದೇಶನದ “ಬಂಧಮುಕ್ತ” ಸಿನಿಮಾದ ಕುರಿತು ಡಾ. ಪ್ರಭು ಗಂಜಿಹಾಳ ಬರಹ

Read More

‘ಡಿಸೆಂಬರ್ ಬಂದಿತು, ಚಳಿಯಾಕೆ ಬಂದಳು’: ಮಹಾಲಕ್ಷ್ಮೀ ಕೆ.ಎನ್.‌ ಬರಹ

ಈ ಬೆಟ್ಟಕ್ಕೆ, ಆ ಮರಕ್ಕೆ, ಹೆಂಚಿನ ಪುಟ್ಟ ಮನೆಗೆ ಹಿಮದ ಹೊದಿಕೆ ಬಂದುಬಿಡುತ್ತೆ. ನಮ್ಮನ್ನೂ ಆ ಹೊದಿಕೆ ಆವರಿಸಿಬಿಡುತ್ತದೆ. ವಿಸ್ಮೃತ ದೃಶ್ಯವನ್ನು ತಂದಿಟ್ಟುಬಿಡುತ್ತದೆ. ಹೆಜ್ಜೆ ಇಟ್ಟಲ್ಲೆಲ್ಲಾ ಹಿಮಮಣಿ ಕಾಲಿಗೆ ಮುತ್ತಿಡುತ್ತದೆ. ಎಳೆಕೂಸಿನ ಕೈ ಕಾಲುಗಳ ಮೆತ್ತಗೆ ಹಿಡಿದು ತೊಳೆಯುವಂತೆ ನಮ್ಮನ್ನು ತಣ್ಣಗೆ ಸೋಕಿ ತೊಳೆಯುತ್ತದೆ ಮಂಜು. ಹಿಮವು ನೆಲದ ಮೇಲೆ ಆವರಿಸಿದಾಗ ಧ್ವನಿ ಹೀರಿಕೊಳ್ಳುವ ಸಾಧನವಾಗಿ ಕಾರ್ಯನಿರ್ವಹಿಸುವುದರಿಂದ ಇಷ್ಟು ದಿನದ ಸದ್ದು ಸಪ್ಪಳ ಸುಮ್ಮನಾಗುತ್ತದೆ.
ಡಿಸೆಂಬರ್‌ ಚಳಿಯ ಕುರಿತು ಮಹಾಲಕ್ಷ್ಮೀ ಕೆ.ಎನ್.‌ ಬರಹ

Read More

ಒಮ್ಮೆ ಹಚ್ಚಿಕೊಂಡರೆ….: ಮಾಲಾ ಮ. ಅಕ್ಕಿಶೆಟ್ಟಿ ಬರಹ

ಎರಡು ದಿನದ ವಸ್ತಿಯ ನಂತರ ಮನೆಗೆ ತಲುಪುವವರೆಗೂ ಮನಸ್ಸು ನಿಯಂತ್ರಣದಲ್ಲಿರಲಿಲ್ಲ. ಯಾವ ಗಿಡಗಳು ಹೋದವು? ಆಕೆಯಂತೂ ಎಲ್ಲವೂ ಅಂದಳು, ಕೆಲವಾದರೂ ಉಳಿಯಬಾರದೇ ಎಂದು ಮನಸ್ಸು ಪ್ರಾರ್ಥಿಸುತ್ತಿತ್ತು. ಅಂದು ಮನೆಯ ತಲುಪುವ ಹಾದಿಗುಂಟ ಬರುವಾಗ ನೋಡಿದರೆ ಎಲ್ಲವೂ ಬಟಾ ಬಯಲು, ಎರಡೂ ಕಡೆ ಎಲ್ಲ ಗಿಡಗಳನ್ನು ಕಿತ್ತಿದ್ದಾರೆ. ಇನ್ನು ನಮ್ಮದೇನು ಎನ್ನುತ್ತಾ ನಮ್ಮ ಮನೆಯ ಮುಂದೆ ಬಂದಾಗ ಎಲ್ಲ ಗಿಡಗಳು ಹೋಗಿ ಕೇವಲ ಎರಡು ಗಿಡ ಉಳಿದಿದ್ದವು.
ಮಾಲಾ ಮ. ಅಕ್ಕಿಶೆಟ್ಟಿ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ