Advertisement

Category: ಸರಣಿ

ಯಕ್ಷಗಾನದ ವಿಮರ್ಶೆಯಲ್ಲಿ ‘ಔಚಿತ್ಯ’ದ ಪ್ರಯೋಗಗಳು…

ಯಕ್ಷಗಾನದಲ್ಲಿ ಈ ಪೂರ್ಣತೆಯ ಅರ್ಥವನ್ನೇ ಔಚಿತ್ಯ ಪಡೆದುಕೊಳ್ಳುವುದಾದರೂ, ಇಲ್ಲಿ ನಿತ್ಯದ ಸಮಾಜದೊಂದಿಗೆ ವ್ಯವಹರಿಸುವ ಯಕ್ಷಗಾನವು ಬದಲಾಗುತ್ತಿರುವ ತನ್ನ ಸುತ್ತಮುತ್ತಲಿನ ಸಮಾಜದ ಕ್ರಮಗಳ ಜೊತೆಗೆ ಚೌಕಾಶಿ ಮಾಡುತ್ತಾ ವ್ಯವಹರಿಸಬೇಕಾಗುತ್ತದೆ. ಅಂದರೆ ಹಿಂದಿನ ಜೀವನ ಕ್ರಮದ ನಡಾವಳಿಗೂ ಮತ್ತು ಈಗಿನ ಸಮಾಜದ ಕ್ರಮಗಳಿಗೂ ಕಲಾಪ್ರಕಾರಗಳು ಒಂದು ಸೇತುವೆಯನ್ನು ಕಟ್ಟಿಕೊಳ್ಳುತ್ತಾ ಹೋಗಬೇಕಾಗುತ್ತದೆ. ಯಕ್ಷಗಾನದ ‘ಮೂಲ ಉದ್ದೇಶ’ ಪುರಾಣದ ಪ್ರಸರಣವಾಗಿರಲಿ, ಅಥವಾ ಪ್ರಸಂಗ ಪಠ್ಯವನ್ನು ಗಾನ, ನೃತ್ಯ ಮಾತಿನಲ್ಲಿ ಪ್ರೇಕ್ಷಕರಿಗೆ ತೋರಿಸುವುದಷ್ಟೇ ಆಗಿರಲಿ, ಅದು ಈಗಿನ ಕಾಲಕ್ಕೆ ಸಂವಹನವಾಗಬಹುದಾದ….

Read More

ಕಣ್ರೆಪ್ಪೆ ಬಡಿದೇ ಹೇಳಿದ ಕತೆಯಿದು, ಅಲ್ಲಲ್ಲ.. ಜೀವನಚರಿತ್ರೆಯ ದೃಶ್ಯಗಳಿವು

ತಮ್ಮ ಆಸ್ಪತ್ರೆಯಲ್ಲಿರುವ ರೋಗಿಯೊಬ್ಬ ಪುಸ್ತಕವನ್ನು ಬರೆಯಬೇಕೆಂದ ಅಪೇಕ್ಷೆಯನ್ನು ಕೇಳಿ ಉಳಿದವರಿಗೆ ಆಶ್ಚರ್ಯವಾಗುತ್ತದೆ. ಡೊಮಿನಿಕ್ ಗೆ ಇದು ಅಸಾಧ್ಯವೆನಿಸುವುದಿಲ್ಲ. ಸ್ಪೀಚ್ ಥೆರಪಿಸ್ಟ್ ಹೇಳಿಕೊಟ್ಟ ಪ್ರಕಾರ ಸೂಚನೆಗಳನ್ನು ಅನುಸರಿಸಿ ಅಕ್ಷರಗಳನ್ನು ಹೆಣೆದು ಪದಗಳನ್ನು ಹೊಂದಿಸಿ ಬರೆಯುವವರು ಬೇಕೆಂದು ಬಯಸುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಜೀನ್ ಡೊಮಿನಿಕ್ ಬಾಬಿ ಜೀವನಚರಿತ್ರೆಯನ್ನಾಧರಿಸಿದ ಫ್ರಾನ್ಸ್‌ನ ʻದ ಡೈವಿಂಗ್‌ ಬೆಲ್‌ ಅಂಡ್‌ ದ ಬಟರ್‌ಫ್ಲೈ ʼ ಸಿನಿಮಾ ಕುರಿತ ವಿಶ್ಲೇಷಣೆ

Read More

ಅಪರಾಧಕ್ಕೆ ತಕ್ಕ ಶಿಕ್ಷೆ ಮತ್ತು…. ಮುಂದಿನ ಹಾದಿ

ಅಪರಾಧಿಯು ತಪ್ಪೊಪ್ಪಿಕೊಂಡ ಐದು ತಿಂಗಳ ನಂತರ ತೀರ್ಪು ಹೊರಬಂದಿತು. ರಝುಮಿಖಿನ್ ಸಾಧ್ಯವಾದಾಗಲೆಲ್ಲ ಸೆರೆಮನೆಗೆ ಹೋಗಿ ಅವನ ಭೇಟಿ ಮಾಡುತ್ತಿದ್ದ. ಸೋನ್ಯಾಳೂ ಅಷ್ಟೇ. ದೂರವಾಗುವ ದಿನ ಬಂದಿತು. ಶಾಶ್ವತವಾಗಿ ದೂರವಾಗುತ್ತಿಲ್ಲ ನಾವು ಎಂದು ದುನ್ಯಾ ಆಣೆ ಮಾಡಿ ಹೇಳಿದಳು ಅಣ್ಣನಿಗೆ. ರಝುಮಿಖಿನ್ ಕೂಡ ಅದನ್ನೇ ಹೇಳಿದ. ಕನಿಷ್ಠಪಕ್ಷ ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಏನು ಮಾಡಬೇಕೆಂಬ ಬಗ್ಗೆ ಅವನ ಸ್ನೇಹಪೂರ್ಣ ಮನಸಿನಲ್ಲಿ ಆಗಲೇ ಒಂದು ಯೋಜನೆ ದೃಢವಾಗಿ ರೂಪುತಳೆದಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಕೊನೆಯ ನುಡಿಗಳು.

Read More

ಮುಂದಿನ ಬಿಡಾರಕ್ಕೆ ನಡೆಯುವ ಹಾದಿಯೇ ವಿಶ್ವವಿದ್ಯಾಲಯ

ಆಟ ಆಗುವಲ್ಲಿಗೆ ಮೇಳ ಹೋಗಿ ಆಟ ಆಡಿಸಲು ವೀಳ್ಯ ಕೊಡುವವರ ಮನೆಯಲ್ಲಿ “ತಾಳಮದ್ದಳೆ” ಹಾಕುವ ಕ್ರಮ ಹಿಂದೆ ಇತ್ತು.  ಆಟ ಆಡಿಸುವವರ ಮನೆಯಲ್ಲಿ ದೀಪ ಸ್ಥಾಪನೆ ಮಾಡಿ ಭಾಗವತರು ಮತ್ತು ಮದ್ದಳೆಗಾರರು ಕುಳಿತು ಭಾಗವತರು ಒಂದೆರಡು ದೇವರ ಸ್ತುತಿಯನ್ನು ಹಾಡುತ್ತಿದ್ದರು. ಹೀಗೆ ತಾಳಮದ್ದಳೆ ಹಾಕುವ ಮೂಲಕ, ಅಂದಿನ ಆಟ ಆಡಿಸಬೇಕೆಂದು ಸೇವಾಕರ್ತರಲ್ಲಿ  ಮನವಿ ಮಾಡುವುದು,  ಭಾಗವತರ ಸಾಮರ್ಥ್ಯ ಮತ್ತು ನೈಪುಣ್ಯ ನೋಡಿ ಆ  ಮನೆಯವರು ವೀಳ್ಯವನ್ನು ನಿರ್ಧರಿಸುವುದು ಇದೇ ಸಂದರ್ಭದಲ್ಲಿ. ಕೃಷ್ಣಪ್ರಕಾಶ್ ಉಳಿತ್ತಾಯ ಬರೆಯುವ ‘ಬಲಿಪ ಮಾರ್ಗ’ ಸರಣಿಯ ಬರಹ.

Read More

ಸತ್ತವನು ಎದ್ದು ಬಂದಾಗ…

ಈಗ ಕಂಪ್ಯೂಟರ್ ಯುಗ ಬಂದು, ಎಲ್ಲಾ ದಾಖಲು ಡಿಜಿಟಲೀಕರಣ ಆಗಿ, ಪ್ರತಿ ರೋಗಿಗೆ ಒಂದು ನಿರ್ದಿಷ್ಟ ಸಂಖ್ಯೆಯನ್ನು ಕೊಡುವುದರಿಂದ, ಹಿಂದಿನ ದಿನಗಳಂತೆ ಸರ್ಟಿಫಿಕೇಟ್ ಕೊಡುವುದು ಸ್ಪಲ್ಪ ಕಷ್ಟ. ಹಾಗೆಯೇ ಈಗ, ಕೆ. ಪಿ. ಎಂ. ಇ. ಕಾನೂನಿನಲ್ಲಿ ಪ್ರತಿ ವೈದ್ಯರೂ, ತಾವು ಚಿಕಿತ್ಸೆ ನೀಡುವ ಎಲ್ಲಾ ರೋಗಿಗಳ ವಿವರಗಳನ್ನು ಒಂದು ಪುಸ್ತಕದಲ್ಲಿ ಬರೆದು ಇಡಬೇಕು ಎಂದಿದೆ. ಹಾಗಾಗಿ ಈ ಮೊದಲಿನಂತೆ ಸರ್ಟಿಫಿಕೇಟ್ ಕೊಡಲು, ಈಗ ಈಗ ಬಹಳ ಪ್ರಯಾಸ ಪಡಬೇಕು.
ಡಾ. ಕೆ.ಬಿ. ಸೂರ್ಯಕುಮಾರ್‌ ಬರೆಯುವ ನೆನಪುಗಳ ಮೆರವಣಿಗೆ ಸರಣಿಯ ಕಂತು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ