ನಮ್ಮಮ್ಮ ನಾಗಮ್ಮ: ಸುಮಾ ಸತೀಶ್ ಸರಣಿ
ಒಟ್ನಾಗೆ ಅಮ್ಮ ದೋಡ್ಡ ಸಂಸಾರದಾಗೆ ಸೈ ಅನ್ನುಸ್ಕಂಡಿದ್ದು ಸಣ್ದೇನಲ್ಲ. ಅಪ್ಪ ರಾಜಕೀಯದಾಗಿತ್ತು. ಮನೇನಾಗೆ ಇರ್ತಾ ಇರ್ಲಿಲ್ಲ. ಮಾತುಕತೆಗೆ ಸಿಗುತ್ಲೇ ಇರ್ಲಿಲ್ಲ. ಮನ್ ತುಂಬಾ ಜನ. ಕೆಲ್ಸ. ಮದಮದಲು ಅತ್ತೆದೀರ್ಗೆ ಬಿಗುಮಾನ ಇತ್ತು. ನಮ್ಮ ದೊಡ್ಡತ್ತೆ ಮಾತೂ ಅಂದ್ರೆ ಮನ್ಯಾಗೆ ವೇದವಾಕ್ಯ. ಅವ್ರೂ ಒಂದಿನ ನಾವು ಎಂಟು ಜನ ಯಾವತ್ತಿದ್ರೂ ಒಂದೇನೇಯಾ ಅಂತ ಯೋಳ್ದಾಗ ಅಮ್ಮುಂಗೆ ನಾನೊಬ್ಳೇ ಅಲ್ವಾ ಅಂಗಾರೆ ಹೊರುಗ್ನೋಳು ಅಂತ ಸಂಕಟ ಆಗಿ ಮರೇನಾಗೆ ಕಣ್ಣಾಗೆ ನೀರು ಹಾಕ್ಕಂಡಿದ್ದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ತಾಯಿಯ ಕುರಿತ  ಬರಹ ನಿಮ್ಮ ಓದಿಗೆ
						