ಅರಾಸೇ ಮತ್ತು ಆರ್‌ಕೆಶ್ರೀ ಜೊತೆಗಿನ ಪ್ರಸಂಗಗಳು: ಎಚ್. ಗೋಪಾಲಕೃಷ್ಣ ಸರಣಿ
ರೂಮಿನ ತುಂಬಾ ಪುಸ್ತಕಗಳು, ಟೇಬಲ್ಲಿನ ಮೇಲೆ ಅರ್ಧ ಓದಿದ್ದ ಆರೆಂಟು ಅರೆ ತೆರೆದ ಪುಸ್ತಕ, ಅರ್ಧ ತೆರೆದುಕೊಂಡಿದ್ದ ಪೇಪರು, ರಟ್ಟಿನ ಪ್ಯಾಡ್ ಮೇಲೆ ಬರೆಯುತ್ತಿದ್ದ ಜೋಡಿಸಿದ್ದ ಹಾಳೆಗಳು, ಕ್ಯಾಪ್ ತೆಗೆದಿರಿಸಿದ ಎರಡು ಪೆನ್ನು, ಪಕ್ಕದಲ್ಲಿ ಕನ್ನಡ ಇಂಗ್ಲಿಷ್ ಡಿಕ್ಷನರಿ….. ಇದ್ದಕ್ಕಿದ್ದ ಹಾಗೆ ನನ್ನ ರೂಮಿನಲ್ಲಿ ಕೂತಿದ್ದೀನಿ, ಹರಡಿರುವ ಪುಸ್ತಕಗಳು ನಾನೇ ಹರಡಿದ್ದು, ಕ್ಯಾಪ್ ತೆಗೆದಿಟ್ಟವನು ನಾನೇ…. ಅನಿಸಿಬಿಟ್ಟಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತಾರನೆಯ ಕಂತು ನಿಮ್ಮ ಓದಿಗೆ