Advertisement

Tag: ಆಲೂರು ದೊಡ್ಡನಿಂಗಪ್ಪ

ನೀರಿಗೊಡ್ಡಿದ ಗಾಳಿ-ಬೆಳಕು: ಆಲೂರು ದೊಡ್ಡನಿಂಗಪ್ಪ ಕಾದಂಬರಿಗೆ ರಘುನಾಥ ಚ.ಹ. ಮುನ್ನುಡಿ

ಮಹಾನ್ ಬಲಶಾಲಿ ಹಾಗೂ ಅಪ್ರತಿಮ ಸುಂದರಿಯ ಪ್ರೇಮ ಊರ ಕಣ್ಣಿಗೆ ದೈವಿಕವಾಗಿ ಕಾಣಿಸುತ್ತದೆ. ವಿವಾಹಬಾಹಿರ ಸಂಬಂಧ ಊರಕಣ್ಣಿಗೆ ಸ್ವೀಕಾರಾರ್ಹ ಅಚ್ಚರಿಯಾಗಿ ಕಾಣಿಸಲಿಕ್ಕೆ, ಪ್ರೇಮಿಗಳ ವ್ಯಕ್ತಿತ್ವವಷ್ಟೇ ಕಾರಣವಲ್ಲ; ಮಲ್ಲನ ಕೇಡಿಗತನದ ಬಗ್ಗೆ ಊರಿಗಿರುವ ಅಸಹನೆಯೂ ಕಾರಣ. ಆ ಅಸಹನೆ ಅಸಹಾಯಕತೆಯಾಗಿರುವಾಗ, ತಮ್ಮ ಸಿಟ್ಟನ್ನು ಕೊಂಚವಾದರೂ ಸಮಾಧಾನಗೊಳಿಸುವ ರೂಪದಲ್ಲಿ ಪ್ರೇಮಪ್ರಕರಣ ಅವರಿಗೆ ಒದಗಿಬಂದಿದೆ. ಈ ಪ್ರೇಮಪ್ರಕರಣ ಜಾತೀಯತೆಯನ್ನು ವಿರೋಧಿಸುವ ಪ್ರತಿಭಟನೆಯ ರೂಪದಂತೆಯೂ ಕಾದಂಬರಿ ಚಿತ್ರಿಸುತ್ತದೆ.
ಆಲೂರು ದೊಡ್ಡನಿಂಗಪ್ಪ ಕಾದಂಬರಿ “ಚಂದ್ರನ ಚೂರು” ಗೆ ರಘುನಾಥ ಚ.ಹ. ಮುನ್ನುಡಿ

Read More

ಗಿಣಿಬಿಸ್ಕತ್ತು ಕಾದಂಬರಿಯ ಒಂದೆಸಳು

ನಾವು ಮಕ್ಕಳು ಒಂದು ಕಡೆ ಆಡುತ್ತಿದ್ದೆವು. ಮೋಡ ಕಪ್ಪಾಯಿತು. ಮೀನು ಸಾರಿನ ಸಂಭ್ರಮದ ಮಧ್ಯ ಮಳೆ ಬರುವುದು ಚಿಂತೆಗೀಡು ಮಾಡಿತ್ತು. ಸಂದಿಗೊಂದಿಗಳಲ್ಲಿ, ಮೂಲೆಮುಡುಕುಗಳಲ್ಲಿ ಇದ್ದ ಪುಳ್ಳೆ ಸೌದೆಗಳನ್ನು ಅಜ್ಜಿ ಅದೇನೇನೋ ಗೊಣಗುತ್ತಾ ಎತ್ತಿ ತಂದು ಒಳಗೆ ಹಾಕುತ್ತಿದ್ದಳು. ಅಜ್ಜ ರಾತ್ರಿ ಕತ್ತಲಾದಾಗ ಬೆಳಕು ಮಾಡಲು ಸೀಮೆ ಎಣ್ಣೆ ದೀಪದ ಬತ್ತಿಗಳನ್ನು ಹಿಚುಕಿ ಸರಿಪಡಿಸುತ್ತಿದ್ದ. ಚಿಕ್ಕಪ್ಪ, ಅಪ್ಪ ಎಲ್ಲಿ ಮನೆ ಸೋರುತ್ತದೆಯೋ ಅಲ್ಲಿಗೆ ಕಾತಾಳೆ ಪಟ್ಟೆ, ಅಡಿಕೆ ಪಟ್ಟೆಗಳನ್ನು ತೂರಿಸುತ್ತ ಸೂರನ್ನು ಸರಿಪಡಿಸುತ್ತಿದ್ದರು. ಅಜ್ಜ ಮಾತ್ರ ‘ಈ ಹಾಳಾದ್ದು ಎಲ್ಲೋಯ್ತೋ ಕಾಣೆ… ಹೊತ್ನಂತೆ ಮನೆಗೆ ಬರಬ್ಯಾಡ್ವ’ ಅಂತ ಕೆಂಪಿಯನ್ನು ನೆನಪು ಮಾಡಿಕೊಳ್ಳುತ್ತಿದ್ದನು.
ಆಲೂರು ದೊಡ್ಡನಿಂಗಪ್ಪ ಬರೆದ ‘ಗಿಣಿ ಬಿಸ್ಕತ್ತು’ ಹೊಸ ಕಾದಂಬರಿಯ ಕೆಲ ಪುಟಗಳು ನಿಮ್ಮ ಓದಿಗೆ

Read More

ಮನಃಶಾಸ್ತ್ರೀಯ ಗುಣದ ಕಾದಂಬರಿ!

“ಮಗನೂ ಕೂಡ ಅಪ್ಪನಂತೆ ಮಿಲ್ಟ್ರಿಗೆ ಸೇರಿಬಿಡುತ್ತಾನೋ, ದಾರಿ ತಪ್ಪುತ್ತಾನೋ ಎಂಬ ಆತಂಕದಲ್ಲಿ ತಾಯಿ ಶಾಂತಕ್ಕನ ಜೀವನ ತೊಳಲಾಡುತ್ತಾ ಕಾಯುತ್ತಿರುತ್ತದೆ. ಶಾಂತಕ್ಕ ತನಗೆ ತಾನೇ ಸಮಾಧಾನಪಡಿಸಿಕೊಳ್ಳುವ “ಕಣ್ಣಲ್ಲಿ ಎರಡುಹನಿ ನೀರ್ ಇರುವತನಕ ಮಗನನ್ನು ಕಟ್ಟಿ ಹಾಕುತ್ತೇನೆ.” ಎಂಬ ಸಮಾಧಾನದ ಮಾತು ಅಂತಃಕರಣ ಕಲಕುತ್ತದೆ. ಪಿತೃ ಪ್ರಧಾನ ಕುಟುಂಬಗಳು ಸಾಮಾನ್ಯವಾಗಿರುವ ಈ ಹೊತ್ತಿನಲ್ಲಿ ಮಾತೃ ಸಂಸ್ಕೃತಿಯನ್ನು ಇದು ಬಿಂಬಿಸುತ್ತದೆ.”
ನಟರಾಜ್‌ ಹುಳಿಯಾರ್‌ ಬರೆದ ‘ಕಾಮನ ಹುಣ್ಣಿಮೆ’ ಕಾದಂಬರಿ ಕುರಿತು ಆಲೂರು ದೊಡ್ಡನಿಂಗಪ್ಪ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ