Advertisement

Tag: ಕನ್ನಡ

ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ ಪ್ರವಾಸ ಸರಣಿ “ಸಾಗುತ ದೂರ ದೂರ…” ಇಂದಿನಿಂದ

ನಡುನಡುವೆ ನಗುವಿನ ಅಲೆಗಳ ವಿನಿಮಯವಾಗಿದ್ದಷ್ಟೇ ನನಗೆ ಗೊತ್ತು. ಹತ್ತಾರು ಸಿಗಡಿಗಳು, ಸ್ವಲ್ಪ ಸ್ವಲ್ಪವೇ ಪುಡಿ ಮೀನುಗಳೊಂದಿಗೆ ಮರಳುವ ಧಾವಂತದಲ್ಲಿದ್ದರು. ಆದರೂ ನಾಲ್ಕಾರು ಮೀನುಗಳನ್ನೂ ನಮಗೂ ಕಟ್ಟಿಕೊಡಲು ಬಂದರು! ನಾವು ಬೇಡವೆಂದಿದ್ದಕ್ಕೆ ಬೇಸರಿಸಿಕೊಂಡರು. ನಾಲ್ಕಾರು ಸಿಗಡಿಗಳ ತೋರಿಸಿ ಕುಶಿ ಪಟ್ಟ. ಕಡಲ ಕಿನಾರೆಗೆ ಬಡಿದು ಬಡಿದೂ ಸವೆದ ಚಪ್ಪಲಿ ಹಾಕಿ ಹೊರಟಾಗ ಮನದ ಕರಳು ಚುರುಕ್‌ ಎಂದಿತು. ಭೈರವಿ ರಾಗದ ಆಲಾಪದಂತೆ ಭಾಸವಾದ ಅಲೆಗಳು ಅವಳ ಕಾಲಂದುಗೆಗೆ ಮತ್ತೆ ಮತ್ತೆ ಮುತ್ತಿಕ್ಕುತಾ ಖುಷಿಯಲ್ಲಿ ಮರಳುತ್ತಲಿದ್ದವು.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ ಪ್ರವಾಸ ಸರಣಿ “ಸಾಗುತ ದೂರ ದೂರ…”

Read More

ಕುವೆಂಪು – ಕನ್ನಡದ ಭಾವಸೆಲೆ ಹಾಗೂ ವೈಚಾರಿಕ ದಿಕ್ಸೂಚಿ: ಎಲ್.ಜಿ.ಮೀರಾ ಅಂಕಣ

ಕವಿಯಲ್ಲದವರ ಮಟ್ಟಿಗೆ ಸಾಧಾರಣ ಬೆಟ್ಟಗುಡ್ಡ ಅನ್ನಿಸಿಬಿಡಬಹುದಿದ್ದ ಕುಪ್ಪಳ್ಳಿಯ ಒಂದು ಸ್ಥಳವು ಈ ರಸಋಷಿಯ ಕಣ್ಣಲ್ಲಿ ಅತ್ಯಂತ ಪ್ರೀತಿಯ `ಕವಿಶೈಲ’ವಾದದ್ದು ಅವರಿಗಿದ್ದ ಅಮಿತ ಪ್ರಕೃತಿಪ್ರೇಮಕ್ಕೆ ಸಾಕ್ಷಿ. ಅವರೆಲ್ಲೇ ಇದ್ದರೂ ಅವರ ಮನಸ್ಸು ಸದಾ ಕಾಲ ತಮ್ಮ ಪ್ರೀತಿಯ ಮಲೆನಾಡನ್ನು ಧ್ಯಾನಿಸುತ್ತಿತ್ತು. “ನಾನು ಭೌತಿಕವಾಗಿ ಮೈಸೂರಿನಲ್ಲಿದ್ದರೂ ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮಲೆನಾಡಿನಲ್ಲಿರುತ್ತೇನೆ. ಪ್ರತಿ ನಿತ್ಯ ಹಲವು ಸಾರಿ ನವಿಲುಕಲ್ಲಿಗೆ ಹೋಗಿ ಬರ್ತೀನಿ, ಕವಿಶೈಲದಲ್ಲಿ ಕುಳಿತು ಧ್ಯಾನ ಮಾಡ್ತೀನಿ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ಮೂರನೆಯ ಬರಹ

Read More

ಕನ್ನಡವೆಂಬ ಮರೆಗುಳಿ ಮನಸು!: ದರ್ಶನ್‌ ಜಯಣ್ಣ ಬರಹ

ಮಧ್ಯ ಪ್ರದೇಶದಲ್ಲಿನ ಕೆಲವು ಬುಡಕಟ್ಟುಗಳು ಕನ್ನಡಕ್ಕೆ ಬಲು ಹತ್ತಿರದ ಭಾಷೆಗಳನ್ನು ಮಾತನಾಡುತ್ತಾರೆ. ಇತ್ತೀಚೆಗೆ ಅದರ ಮೂಲ ಕರ್ನಾಟಕ ಮತ್ತು ಅವರೆಲ್ಲಾ ಎಲ್ಲೆಡೆ ಹಬ್ಬಿದ್ದ ನಮ್ಮ ಸಾಮ್ರಾಜ್ಯಗಳ ಜೀವಂತ ಮನುಷ್ಯ ಉಳಿಕೆಗಳು ಎಂಬುದು ಕಂಡು ಬಂದಿದೆ. ಮಹಾರಾಷ್ಟ್ರದ ಮರಾಠಿಯ ಕೊಂಕಣಿಯ ಬೆಳವಣಿಗೆಯಲ್ಲಿ ಕನ್ನಡದ ಭಾಷೆಗಳ ಕೊಡುಗೆಯಿದೆ, ತೆಲುಗಿಗೆ ತಮಿಳಿಗೆ ಎಷ್ಟೋ ಕೊಡು-ಕೊಳ್ಳುವ ಪ್ರಕ್ರಿಯೆಗಳಾಗಿವೆ. ಅದು ನಾವು ಉಪಯೋಗಿಸುವ ಎಷ್ಟೋ ಪದಗಳಲ್ಲಿ, ಅಕ್ಷರಗಳಲ್ಲಿ ತೋರುತ್ತದೆ.
ಕನ್ನಡ ಭಾಷೆ ಮತ್ತು ಅದರ ಬಳಕೆಯ ಕುರಿತು ದರ್ಶನ್‌ ಜಯಣ್ಣ ಬರಹ

Read More

ಅಲ್ಲೊಂದು ವೇಲ್ ಸಾವು, ಇಲ್ಲೊಂದು ಪಟಾಕಿ ಸಿಡಿತ: ಡಾ. ವಿನತೆ ಶರ್ಮ ಅಂಕಣ

ಈ ವಾರದ ಕೊನೆಯಲ್ಲಿ – ಶುಕ್ರವಾರ – ಬೇರೊಂದು ಹೊಸ ಕಥೆ ಶುರುವಾಗಿದೆ. ಇದು ಮನುಷ್ಯರಿಗಿರುವ ‘ತಾನೇ ಮೇಲು’ ಅನ್ನೋ ಅಹಂಭಾವ ಸೂಚಕ ಕಥೆ. ಚೈನಾ ದೇಶಕ್ಕೆ ಸೇರಿದ ಮೂರು ಯುದ್ಧ ನೌಕೆಗಳು ಆಸ್ಟ್ರೇಲಿಯಾದ ಟಾಸ್ಮನ್ ಸಮುದ್ರಪ್ರದೇಶದಲ್ಲಿ ‘ಲೈವ್-ಫೈರ್’ ಕಸರತ್ತು ನಡೆಸಿವೆ. ಅಂದರೆ ತಮ್ಮ ನೌಕೆಗಳಿಂದ ಆಕಾಶದಲ್ಲಿ ಸುಮಾರು ಐವತ್ತು ಸಾವಿರ ಅಡಿ ಎತ್ತರಕ್ಕೆ ಯುದ್ಧಾಯುಧಗಳನ್ನು ಚಿಮ್ಮಿಸಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮೆಲ್ಲಗೆ ಗದರುವ ನನ್ನ ಅಪರ್ಣೇ…: ನಾಗರಾಜ ವಸ್ತಾರೆ ಬರಹ

ಸಮಾರಂಭದ ಬಳಿಕ ಇವಳ ಬದಿಯಲ್ಲಿ ನಾನು ಕಾರಿನತ್ತ ಸರಿಯುತ್ತಿರುವಾಗ ಮುಖ್ಯಮಂತ್ರಿಗಳ ಕಾರು ನಮ್ಮನ್ನು ಬಳಸಿತು. ಇವಳನ್ನು ನೋಡಿದ್ದೇ ಅವರು ಕಾರು ನಿಲ್ಲಿಸಲು ಹೇಳಿ, ಇಳಿದು ಅವತ್ತಿನ ನಿರೂಪಣೆಯನ್ನು ಹೊಗಳಿದರು. ಸುಮಾರು ಹತ್ತು ನಿಮಿಷ. ಸುಮ್ಮನೆ ಶ್ರೋತೃವಾದೆ. ಬೀಳ್ಕೊಡುವಾಗ- ಸರ್, ಇವರು ನನ್ನ ಹಸ್ಬೆಂಡ್ ಅಂತ ಪರಿಚಯಿಸಿದಳು.
ನೆನ್ನೆ ರಾತ್ರಿ ತೀರಿಕೊಂಡ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಕುರಿತು ಅವರ ಪತಿ, ಕತೆಗಾರ ನಾಗರಾಜ ವಸ್ತಾರೆ ಬರೆದಿದ್ದ ಬರಹವೊಂದು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ