Advertisement

Tag: ಕೆಂಡಸಂಪಿಗೆ

ಮಥುರೆಯ ಬೃಂದಾವನವನು ಮಾಡುವ ಕನಸದು: ಡಾ. ಶ್ರೀಪಾದ ಭಟ್‌ ಬರಹ

ಪುರಾಣ ಕತೆಯನ್ನು ವರ್ತಮಾನಕ್ಕೆಳೆಯುವ, ಕಥೆಯ ಮೈ ಕೆಡದಂತೆ ಅದನ್ನು ಹದವಾಗಿ ಬೆಸೆಯುವ ಕುಶಲತೆ ವೆಂಕಟೇಶಮೂರ್ತಿಯವರಿಗಿದೆ. ಅವರ ಪುರಾಣ ಪಾತ್ರಗಳು ವರ್ತಮಾನದ ವ್ಯಕ್ತಿಗಳಂತೆ ಆಡುವರಾದರೂ ಔಚಿತ್ಯದ ವಿವೇಕದಲ್ಲಿಯೇ ಅದನ್ನು ನಿಭಾಯಿಸುವ ಶಕ್ತಿ ಅವರ ಬರಹಕ್ಕಿದೆ. ಹೀಗಾಗಿಯೇ ವಸ್ತು ಜಗತ್ತಿನ ಕುರಿತು ಆಡುವ ಮಾತುಗಳೂ ಶುಷ್ಕವಾಗದೇ, ನಿತ್ಯಜೀವನದ ಕೃಪಣತೆಯ ಸೋಕಿಲ್ಲದಂತೆ ಚಿತ್ತಾಕರ್ಷಕವೂ ಚಿತ್ರವತ್ತಾಗಿಯೂ ಮೂಡುತ್ತದೆ.
ಎಚ್.ಎಸ್. ವೆಂಕಟೇಶಮೂರ್ತಿಯವರೊಂದಿಗಿನ ರಂಗ ಸಂಬಂಧದ ಕುರಿತು ಡಾ. ಶ್ರೀಪಾದ ಭಟ್‌ ಬರಹ

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಉಮಾ ರಾವ್‌ ಬರೆದ ಕತೆ

ಎಂಟುಗಂಟೆಗೆ ಕೆಲಸದವಳು ಬಂದಾಗಲೂ ಬಾಗಿಲು ತೆರೆದ ಕೂಡಲೇ ಅದೇ ದೃಶ್ಯ. ಜೊತೆಗೆ ಅವನ ಮನೆ ಬಾಗಿಲು ತೆಗೆದಾಗ ಹಾಲಿನಲ್ಲಿ ಕಣ್ಣಿಗೆ ಬೀಳುತ್ತಿದ್ದ ನೀರಿನ ಹೂಜಿ, ಹಾಸಿದ ಚಾಪೆ, ಮುಂದೆ ದೇವರಪಟ ಎಲ್ಲಾ ನಾಪತ್ತೆ. ಕೆಲಸದವಳನ್ನು ಮುಂದೆ ಮಾಡಿಕೊಂಡು ಒಂದೆರಡು ಹೆಜ್ಜೆ ಒಳಗೆ ಹೋದಾಗ ಮನೆ ಖಾಲಿಯಾಗಿರುವುದು ಅರಿವಾಯಿತು. ತಕ್ಷಣ ಇವರು ಇಂಟರ್‌ಕಾಮ್‌ನಲ್ಲಿ ಸೆಕ್ಯೂರಿಟಿಯವನಿಗೂ, ರಾಧಾಕೃಷ್ಣನ್‌ಗೂ ಹೇಳಿದರು. ಎಲ್ಲಾ ತಕ್ಷಣ ಓಡಿ ಬಂದರು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಉಮಾ ರಾವ್‌ ಬರೆದ ಕತೆ “ಹಾವಾಡಿಗ”

Read More

ಫೋಟೋದಲ್ಲಿ ಬಂಧಿಯಾದ ಸೆಲ್ವಂ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಶಿಲಾಸ್ಫೋಟವಾದಾಗ ಬಹುಶಃ ನೀರಿನ ಮಟ್ಟ ಒಮ್ಮೆಲೆ ಮೇಲಕ್ಕೆ ಬಂದು ಮತ್ತೆ ಕೆಳಕ್ಕೆ ಹೋದಾಗ ಮೂವರೂ ಕಳ್ಳರನ್ನು ನೀರಿನ ಅಲೆಗಳು ಸುರಂಗಗಳಲ್ಲಿ ಎಲ್ಲೋ ಆಳಕ್ಕೆ ಎಳೆದುಕೊಂಡು ಹೋಗಿರಬೇಕು. ಆಗ ಅವರ ದೇಹಗಳು ಎಲ್ಲೋ ಆಳದ ಸುರಂಗಗಳಲ್ಲಿ ಇಲ್ಲ ಸ್ಟೋಪ್‌ಗಳಲ್ಲಿ ಶಿಲೆಗಳ ಮಧ್ಯೆ ಸಿಕ್ಕಿಕೊಂಡಿರಬೇಕು ಎಂದು ಊಹಿಸಲಾಯಿತು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ

Read More

ಬದುಕಿನ ಪಲಕುಗಳನ್ನು ಹಾಡಾಗಿಸಿದ ಕವಿ: ಶಿವ ಹಿತ್ತಲಮನಿ ಬರಹ

ಸಂಸಾರದ ಏರಳಿತದ ನೋವು ನಲಿವುಗಳ ಗಳಿಗೆಗಳನ್ನು ವಿವರವಾಗಿ ಹೇಳದೆಯೇ ಎಲ್ಲವನ್ನೂ ಅದೆಷ್ಟು ಸೂಕ್ಷ್ಮವಾಗಿ ತೆರೆದಿಟ್ಟರು ಹೆಚ್.ಎಸ್.ವಿ… ಸಮಯ ಹೋದಂತೆ ಸಂಸಾರ ಬೆಳೆದು, ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಗಳಿಟ್ಟು ಮನೆ ತುಂಬಾ ಓಡಾಡಿ ತುಂಟಾಟ ಮಾಡುವಾಗ ಕವನ ಕಟ್ಟಿಕೊಟ್ಟಿದ್ದು ಮತ್ತೆ ಹೆಚ್.ಎಸ್.ವಿ.
ಎಚ್.‌ ಎಸ್.‌ ವೆಂಕಟೇಶಮೂರ್ತಿಯವರ ಕವಿತೆಗಳು ಹೇಗೆ ಬದುಕಿನ ಬೇರೆಬೇರೆ ಘಟ್ಟಗಳ ಕನ್ನಡಿಯಾಗಿದ್ದವು ಎಂಬುದರ ಕುರಿತು ಶಿವ ಹಿತ್ತಲಮನಿ ಬರಹ ನಿಮ್ಮ ಓದಿಗೆ

Read More

ಬರೀ ನಾಲ್ಕು ಗೋಡೆಯ ಮಧ್ಯೆ ಕಲಿಯುವುದೇ ಶಿಕ್ಷಣವಲ್ಲ…!!: ಬಸವನಗೌಡ ಹೆಬ್ಬಳಗೆರೆ ಸರಣಿ

ಒಮ್ಮೆ ಪಟ್ಟಣದ ಮಕ್ಕಳಿಗೆ ಭತ್ತ, ಕುಂಬಳಕಾಯಿ ಇಟ್ಟು ಭತ್ತ ಬೆಳೆಯುವ ಗಿಡ ತೋರಿಸಿ ಕುಂಬಳಕಾಯಿ ಬೆಳೆಯುವ ಗಿಡ ಹೇಗಿರಬಹುದು ಎಂದು ಕೇಳಿದರಂತೆ. ಆಗ ಅವರು ಚಿಕ್ಕ ಭತ್ತವನ್ನು ಬೆಳೆಯುವ ಗಿಡವೇ ಈ ರೀತಿ ಇರಬೇಕಾದರೆ ಇಷ್ಟು ದಪ್ಪನೆಯ ಕುಂಬಳಕಾಯಿಯ ಬೆಳೆಯುವ ಗಿಡದ ಕಾಂಡ ಇನ್ನೂ ದಪ್ಪದಾಗಿರಬೇಕು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ