ಎಸ್. ರಾಮಮೂರ್ತಿ ಬರೆದ ಈ ಭಾನುವಾರದ ಕತೆ
ಶಾಮಲಾಳ ಪ್ರತಿ ಮಾತೂ ಹೂವಿನಂತೆ ಮೃದುವಾಗಿ, ಜೇನಿನಂತೆ ಸಿಹಿಯಾಗಿತ್ತು. ಕೂತರೆ ಹೂತುಹೋಗುವಂತಿದ್ದ ಮೆತ್ತೆಯಲ್ಲಿ ಕೂರಿಸಿದಳು. ಮಾನವಳಾಗಿ ಮಹಾನ್ ಕಾರ್ಯವನ್ನೆಸಗುತ್ತಿದ್ದೇನೆಂಬ ಭಾವನೆಯಲ್ಲಿ, ತಲೆ ಒರೆಸಿಕೊಳ್ಳಲು ಟವೆಲ್ ಕೊಟ್ಟಳು. ಅವಳಿಗಂತೂ ಅದೆಲ್ಲ ಕನಸಿನಂತಿದ್ದು ಗೊಂದಲದ ಗೂಡಿನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಳು. ಶಾಮಲಾ ಚೂಡಿದಾರೊಂದನ್ನು ಕೊಡುತ್ತಾ ಇದನ್ನ ಹಾಕ್ಕೋ ಎಂದಳು. ತಲೆ ಬಾಚಿಕೊಳ್ಳು ಬಾಚಣಿಗೆ ಕೊಟ್ಟಳು, ಪೂಸಿಕೊಳ್ಳಲು ಪೌಡರ್ ಕೊಟ್ಟಳು. ಅವಳು ಪೌಡರ್ ಹಾಕಿಕೊಳ್ಳದೇ ‘ನನಗೆ ತುಂಬ ಹೊಟ್ಟೆ ಹಸೀತಾ ಇದೆʼ ಅಂದಳು. ‘ಅಯ್ಯೋ, ಎಂಥ ಕೆಲಸ ಮಾಡಿದೇ, ಇರುʼ ಅಂತ ಹೇಳಿ ಅಡುಗೆ ಮನೆಗೆ ಓಡಿ ತಟ್ಟೆ ತುಂಬ ತಿಂಡಿಗಳನ್ನು ತುಂಬಿಕೊಂಡು ಬಂದು ಅವಳ ಮುಂದಿಟ್ಟಳು.
ಎಸ್. ರಾಮಮೂರ್ತಿ ಬರೆದ ಕತೆ “ಚೆಲುವೆ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

