Advertisement

Tag: ಕೆಂಡಸಂಪಿಗೆ

“ಡೆಸರ್ಟ್ಸ್‌” ಮಾತ್ರ ಬೇಡಪ್ಪ….: ದರ್ಶನ್‌ ಜಯಣ್ಣ ಸರಣಿ

ಈ ಪ್ರಯಾಣದ ನಡುವೆಲ್ಲಾ ನನ್ನನ್ನು ಕಾಡಿದ ವಿಷಯ ಮಧ್ಯದಲ್ಲೆಲ್ಲೋ ಗಾಡಿ ಪಂಕ್ಚರ್ ಆದರೆ ಏನು ಮಾಡುವುದು? ಎಸಿ ಕೈಕೊಟ್ಟರೆ ಹೇಗೆ ಸಂಭಾಳಿಸುವುದು? ಮರಳ ಮಳೆ ಬಂದು ದಾರಿ ಕಾಣದಾದರೆ ಏನು ಗತಿ, ಇತ್ಯಾದಿ. ಹಾಗೇನೂ ಆಗದಿದ್ದರೂ ರಿಯಾದ್ ತಲುಪುವವರೆಗೂ ಮತ್ತು ಎರಡು ದಿನದ ನಂತರ ವಾಪಾಸು ಬರುವಾಗಲೂ ನನ್ನನ್ನು ಬಿಟ್ಟು ಬಿಡದೆ ಕಾಡಿದ ಪ್ರಶ್ನೆಗಳು ಇವು. ದಾರಿ ಅತ್ಯಂತ ಬ್ಯುಸಿಯಾಗಿದ್ದರೂ, ಅಲ್ಲಲ್ಲಿ ಹತ್ತಾರು ಕಿಲೋಮೀಟರ್‌ಗಳ ನಂತರವೇ ಪೆಟ್ರೋಲ್, ತಿಂಡಿ ತಿನಿಸು, ಪಂಕ್ಚರ್ ಅಂಗಡಿ ಮತ್ತು ಇನ್ನಿತರೆ ಅಂಗಡಿಗಳು ನಿಗದಿತ ಜಾಗದಲ್ಲಿ ಮಾತ್ರವೇ ಇರುವುದು ಪರಿಸ್ಥಿತಿಯನ್ನ ಇನ್ನಷ್ಟು ಬಿಗಡಾಯಿಸಿತ್ತು.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿ

Read More

ಮನಸ್ಸರಳಿಸುವ ಮೋಹಕ ರಂಗೋಲಿ: ಸುಮಾವೀಣಾ ಸರಣಿ

ಭಾರತೀಯ ರಂಗೋಲಿಗಳಲ್ಲಿ ಪರ್ವತ ಪ್ರಾಂತ್ಯ, ಕರಾವಳಿ ಮತ್ತು ಮೈದಾನ ಪ್ರಾಂತ್ಯಗಳಲ್ಲಿ ವಿಭಿನ್ನವಾಗಿ ಮೂಡಿಬರುತ್ತವೆ. ಪರ್ವತ ಪ್ರಾಂತ್ಯ ಅಂದರೆ ರಾಜಸ್ಥಾನ, ಉತ್ತರಪ್ರದೇಶ, ಹಿಮಾಚಲ ಪ್ರದೇಶ ಇಲ್ಲಿ ಬಿಡಿಸುವ ರಂಗೋಲಿ ರೇಖೆಗಳನ್ನು ಕೂಡಿಕೊಂಡಿದ್ದು ಅಗಲದ್ದಾಗಿರುತ್ತದೆ. ಚಿಕ್ಕಚಿಕ್ಕ ರೇಖೆಗಳನ್ನು ಬಳಸಿ ಬಂಗಾಳ ಮತ್ತು ಬಿಹಾರ ಪ್ರಾಂತ್ಯದವರು ಬಿಡಿಸುತ್ತಾರೆ. ಇವೆರಡರ ಜೊತೆಗೆ ಬಳ್ಳಿಗಳ ರಂಗೋಲಿ ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿದೆ. ಕೇರಳದವರ ಪುಷ್ಪರಂಗೋಲಿಯಂತೂ ವಿಶ್ವವಿಖ್ಯಾತ. ಓಣಂ ಆಚರಣೆಯ ಅವಿಭ್ಯಾಜ್ಯ ಅಂಗ ಎಂದರೆ ಈ ಪುಷ್ಪರಂಗೋಲಿ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನೆಂಟನೆಯ ಬರಹ ನಿಮ್ಮ ಓದಿಗೆ

Read More

ಎಕೆಲೋಫ಼್ ಎಂಬ “ಸರ್ರಿಯಲಿಸ್ಟ್‌” ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಎಕೆಲೋಫ಼್ ಅವರ ವೃತ್ತಿಜೀವನದ ಪ್ರತಿಯೊಂದು ತಿರುವಿನಲ್ಲೂ ಇದೇ ಕಥೆ ಪುನರಾವರ್ತನೆಯಾಗುತ್ತಿತು. ಮೂವತ್ತರ ದಶಕದ ಉತ್ತರಾರ್ಧದಲ್ಲಿ ಎಕೆಲೋಫ಼್ ಮಾನವ ವ್ಯಕ್ತಿನಿಷ್ಠೆಗೆ ಆಮೂಲಾಗ್ರ ಮತ್ತು ಹೆಚ್ಚು ಅಮೂರ್ತವಾದ ದೃಷ್ಟಿಕೋನದೆಡೆಗೆ ತಮ್ಮ ಕಾವ್ಯಪ್ರಯೋಗ ನಡೆಸುತ್ತಿದ್ದರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ಗುನ್ನಾರ್ ಎಕೆಲೋಫ಼್-ರವರ (Gunnar Ekelof, 1907-1968) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು

Read More

ಹೆಣ್ಣು ಜೀವದ ಎಂದೂ ಮಾಯದ ಗಾಯಗಳು: ಡಾ. ಎಲ್.ಜಿ.ಮೀರಾ ಅಂಕಣ

ನಮ್ಮ ಪಿತೃಪ್ರಧಾನ ವ್ಯವಸ್ಥೆಯು `ಗಂಡನನ್ನು ಹಂಚಿಕೊಳ್ಳಬೇಕಾದ’ ಪರಿಸ್ಥಿತಿಯಲ್ಲಿರುವ ಹೆಣ್ಣಿನ ದುಃಖ ದುಮ್ಮಾನಗಳ ಬಗ್ಗೆ, ಅವಳ `ಅವಮಾನದ’ ಬದುಕಿನ ಬಗ್ಗೆ ಗಂಭೀರವಾಗಿ ಯೋಚಿಸಿಲ್ಲ. ರಾಜಕುಮಾರಿಯರಿಗೆ ಮದುವೆಯಾದಾಗ `ಸವತಿಯರೊಂದಿಗೆ ಜಗಳ ಮಾಡಬೇಡ, ಅವರನ್ನು ಅಕ್ಕ ತಂಗಿಯರಂತೆ ನೋಡಿಕೊ’ ಎಂಬ ಉಪದೇಶವನ್ನು ತವರುಮನೆಯವರು, ಹಿರಿಯರು ಆಕೆಗೆ ನೀಡುತ್ತಿದ್ದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹತ್ತೊಂಭತ್ತನೆಯ ಬರಹ

Read More

ರೋಸಿ ಮೇಡಂ ಕಂಡ ಕತ್ತಲ ಸಾಮ್ರಾಜ್ಯ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಶಿಲೆಗಳಲ್ಲಿ ಈ ರೀತಿಯಾಗಿ ಚಿನ್ನ ನೋಡಿದ ರೋಸೀ ಸ್ವಲ್ಪ ಹೊತ್ತು ಮಾತು ಬರದೇಹೋದಳು. ನಂತರ ಚೇತರಿಸಿಕೊಂಡು ಬ್ಯಾಟರಿಗಳನ್ನು ಆಫ್ ಮಾಡುವಂತೆ ತಿಳಿಸಿ ಕತ್ತಲಲ್ಲಿ ಕಣ್ಣುಗಳನ್ನು ಹಿಗ್ಗಿಸಿಕೊಂಡು, ಕುಗ್ಗಿಸಿಕೊಂಡು ಗೋಡೆಗಳಲ್ಲಿದ್ದ ಚಿನ್ನವನ್ನು ನೋಡಲು ಪ್ರಯತ್ನಿಸಿದಳು. ಸುಮಾರು ಹೊತ್ತು ರೋಸೀ ಅದೇ ರೀತಿಯಾಗಿ ನೋಡಿದಳು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ