ಹಾಗಾದರೆ ನಾನು ನಿಮಗೆ ಬೇಡವಾ.. ಮಳೆಯದ್ದೊಂದು ಪ್ರಶ್ನೆ
ಈ ಮಳೆಯೋ ಜೀವ ಸಂಕುಲವನ್ನು ಉಳಿಸಲೆಂದೇ ದೇವರು ಬಂದಂತೆ ಪ್ರತೀ ವರ್ಷ ನಮ್ಮ ಮೇಲೆ ನಂಬಿಕೆಯಿಟ್ಟು ಬರುತ್ತದೆ. ಅದು ಕೊಡುವ ಖುಷಿಯಿಂದ ಕವನವೊಂದು ಮೊಳಕೆಯೊಡೆದರೆ ಆ ಸಾಲುಗಳನ್ನು ಯಾರೊಡನೆ ಹಂಚಿಕೊಳ್ಳಬೇಕು ಎಂದು ತಿಳಿಯದೇ ಮನಸ್ಸು ತಬ್ಬಿಬ್ಬಾಗುತ್ತದೆ. ಎಲ್ಲಿಯೂ ಹರಿದು ಹೋಗಲು ಒಂದಿಷ್ಟು ಜಾಗವಿಲ್ಲದೇ, ಬಂಧಿಯಾದಂತೆ ಚಡಪಡಿಸುವ ಮಳೆನೀರಿಗೆ ‘ಪ್ರವಾಹ’ವೆಂಬ ನಾಮಕರಣವಾಗಿದೆ. ಆದರೂ ಈ ಮಳೆಯೋ ನಿಸ್ವಾರ್ಥಿ ಪ್ರೇಮಿಯಂತೆ ನಮ್ಮನ್ನು ಹಚ್ಚಿಕೊಂಡು, ಮುದ್ದಿಸುತ್ತ ಸುಮ್ಮನೇ ಸುರಿಯುತ್ತಿದೆ. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ನಿಮ್ಮ ಇಂದಿನ ಓದಿಗಾಗಿ.
Read More