ಆಸ್ಟ್ರೇಲಿಯನ್ ಕ್ಯಾಂಪಿಂಗ್ ಕಥಾನಕಗಳು – ಭಾಗ ಎರಡು
ಹಾಗೆಂದು ನಮ್ಮೆಲ್ಲಾ ಅನುಭವಗಳು ಆನಂದತುಲಿತಮಯ, ಅದ್ಭುತರಮ್ಯ, ಲೋಕಾತೀತವಾದವೇನಲ್ಲ. ಹೆಚ್ಚಿನ ಬಾರಿ ಖುಷಿಖುಷಿಯಿಂದ ಕೂಡಿದ್ದರೂ, ಒಮ್ಮೊಮ್ಮೆ ಗೊಳೋ ಎಂದು ಅತ್ತಿರುವುದೂ ನಿಜ. ಇಂತಹ ಕ್ಯಾಂಪಿಂಗ್ ಸಾಹಸಗಳಲ್ಲಿ ಕೆಲವು ಬಾರಿ ಅಪರಿಚಿತ ದೇಶಗಳಲ್ಲಿ, ಸ್ಥಳಗಳಲ್ಲಿ ಪರಿಸ್ಥಿತಿ ಕೈಕೊಟ್ಟು ಕ್ಯಾಂಪಿಂಗ್ ಪಟು ಜೀಬೀ ಪೇಚಿಗೆ ಸಿಲುಕಿ, ನಾನು ನಮ್ಮ ಮಕ್ಕಳ ಮೈದಡವುತ್ತಾ ಕಂಗಾಲಾಗಿ ಕಣ್ಣೀರಿಟ್ಟಿದ್ದೂ ನಿಜ. ಆದರೂವೆ… ಧೈರ್ಯಗೆಡದೆ ಜರ್ಮನ್ ಪೊಲೀಸರಿಗೆ ಇಂಗ್ಲೀಷಿನಲ್ಲಿ ಉತ್ತರಿಸಿದ್ದಿದೆ.
ಡಾ. ವಿನತೆ ಶರ್ಮ ಬರೆಯವ “ಆಸ್ಟ್ರೇಲಿಯಾ ಪತ್ರ”