Advertisement

Tag: ಚಂದ್ರಮತಿ ಸೋಂದಾ

“ದೋಸೆ”ಯ ವೈಭೋಗ…..

ಮಿಕ್ಸಿ ಇಲ್ಲದ ಕಾಲವಾದರೂ ವಾರದಲ್ಲಿ ನಾಲಕ್ಕೋ ಐದೋ ದಿನ ದೋಸೆಯೇ ಬೆಳಗಿನ ತಿಂಡಿಗೆ. ಅವಲಕ್ಕಿ, ಉಪ್ಪಿಟ್ಟು ಅಂದರೆ ಅದು ಸೋಮಾರಿಗಳ ತಿಂಡಿ ಎನ್ನುವ ಅಭಿಪ್ರಾಯವಿತ್ತು. ಒಮ್ಮೆ ಮನೆಯಲ್ಲಿ ಹೆಂಗಸರಿಲ್ಲದೆ, ಗಂಡಸು ತಿಂಡಿಮಾಡಿಕೊಳ್ಳುವ ಪ್ರಮೇಯ ಬಂದರೆ ಅಕ್ಕಪಕ್ಕದ ಮನೆಯ ಹೆಂಗಸರು `ಮನೇಲ್ಲಿ ಯಾರೂ ಹೆಂಗಸ್ರಿಲ್ಲೆ. ನಮ್ಮನೆಗೆ ತಿಂಡಿಗೆ ಬಾ, ದೋಸೆ ತಿನ್ನಲಕ್ಕು’ ಎಂದು ಕರೆಯುವುದಿತ್ತು.
ಚಂದ್ರಮತಿ ಸೋಂದಾ ಬರೆದ ದೋಸೆ ಕುರಿತ ಪ್ರಬಂಧ ನಿಮ್ಮ ಓದಿಗೆ

Read More

ಬೋನಿಗೆ ಬಂದನಾ ಇಲಿರಾಯನು

ನಮ್ಮೂರಿನಲ್ಲಿದ್ದಂತೆ ಈ ನಗರದಲ್ಲಿ ಗದ್ದೆ ಇದೆಯಾ? ಗೊಣಬೆ ಇದೆಯಾ? ಅಥವಾ ಭತ್ತದ ಕಣಜವೋ, ಅಕ್ಕಿ ಮೂಟೆಯೋ ಅವಕ್ಕೆ ಸಿಗುತ್ತಾ? ಅಂದ್ಮೇಲೆ ಯಾರಾದ್ರೂ ಚೂರುಪಾರು ತರಕಾರಿ ಬೆಳೆಯೋಣ ಅಂತ ಹೊರಟರೆ ಅದರಲ್ಲಿ ಬಿಡೋ ಕಾಯಿಗಳನ್ನುತಿನ್ನದೇ ಮತ್ತೇನು ಮಾಡಲು ಸಾಧ್ಯ. ಅಕ್ಕಿ ಭತ್ತ, ತರಕಾರಿ ಏನಾದರೂ ಸರಿ, ಹೊಟ್ಟೆಪಾಡು ನೋಡಿಕೊಳ್ಳಬೇಕು. ಆದರೂ ಈ ಸುಂಡಿಲಿಗಳು ಚಳ್ಳೇ ಹಣ್ಣು ತಿನ್ನಿಸುವುದರಲ್ಲಿ ಭಾರೀ ಹುಶಾರು.

Read More

ಚಂದ್ರಮತಿ ಸೋಂದಾ ಬರೆದ ಪ್ರಬಂಧ, ‘ಬಹುರೂಪಿ ಮಂಡಕ್ಕಿ’

“ಮನೆಗೆ ಯಾರಾದ್ರೂ ಬರುತ್ತಾರೆ ಎಂದಾಗ ಕಾಫಿ, ಟೀ ಜೊತೆಗೆ ಸಾಥ್ ನೀಡುವ ಮಂಡಕ್ಕಿ ಬಗ್ಗೆ ಮಹಿಳೆಯರಿಗೆ ಅಕ್ಕರೆ ಹೆಚ್ಚು. ಶೇಂಗಾ, ಹುರಿಗಡಲೆ, ಕೊಬ್ಬರಿ, ಬೆಳ್ಳುಳ್ಳಿ, ಮೆಣಸಿನಪುಡಿ ಎಲ್ಲವನ್ನೂ ಹಾಕಿ ಒಗ್ಗರಣೆ ಮಾಡಿ ಇಟ್ಟರೆ ನಾಲ್ಕಾರು ದಿನ ಚಹಾ ಅಥವಾ ಕಾಫಿ ಜೊತೆಗೆ ತಿನ್ನಬಹುದು. ಒಂದಿಷ್ಟು ಸ್ಟಾಕಿದ್ರೆ, ಬೇಕಾದಾಗ ಈರುಳ್ಳಿ ಹೆಚ್ಚಿ ಕ್ಯಾರೆಟ್ ತುರಿದು ಚುರುಮುರಿ ಮಾಡುವುದೇನು ಕಷ್ಟವಲ್ಲ….”

Read More

ಅಜ್ಜಯ್ಯನ ಸವಾರಿ: ಚಂದ್ರಮತಿ ಸೋಂದಾ ಬರೆದ ಪ್ರಬಂಧ

“ಅಜ್ಜಯ್ಯ ನೆಂಟರ ಮನೆಗೆ ಹೋದರೂ ತಮ್ಮ ದಿನಚರಿಯನ್ನು ಬದಲಿಸಿದವರಲ್ಲ. ಸಂಜೆಹೊತ್ತಿಗೆ ಮನೆಯ ಸುತ್ತಮುತ್ತ ಇರುವ ಕೋಲು, ಕಡ್ಡಿ, ತೆಂಗು, ಅಡಿಕೆಮರಗಳ ಒಣಗಿದ ತುಂಡು ಹೀಗೆ ಬಚ್ಚಲೊಲೆಗೆ ಬೇಕಾಗುವ ಎಲ್ಲವನ್ನು ಒಟ್ಟುಗೂಡಿಸುತ್ತಿದ್ದರು. ಅವನ್ನೆಲ್ಲ ಬಚ್ಚಲ ಒಲೆಯ ಹತ್ತಿರ ಜೋಡಿಸಿಡುತ್ತಿದ್ದರು. ಬೆಳಗ್ಗೆ ಐದುಗಂಟೆಗೆ ಎದ್ದು ಒಲೆಗೆ ಉರಿ ಮಾಡುವುದು ಅವರ ರೂಢಿ. ರಾತ್ರೆ ಮಲಗುವಾಗ ತಲೆಯ ಹತ್ತಿರ ತಮ್ಮ ಲಾಟೀನನ್ನು ಸಣ್ಣಗೆ ಉರಿಸುವ ಅವರಿಗೆ ಒಲೆಗೆ ಬೆಂಕಿ ಹಿಡಿಸುವುದು ಸುಲಭವಾಗಿತ್ತು…”

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ