ದುಪಡಿ; ಬಂಧುತ್ವದ ಹೆಣಿಗೆ: ಡಾ. ಗೀತಾ ವಸಂತ ಮುನ್ನುಡಿ
ಅಚ್ಚಿಯ ಬನವಾಸಿ ಅಕ್ಕಯ್ಯ ನಾಗವೇಣಿಯ ಬದುಕು ಬಂಜೆಯೆಂಬ ಕಾರಣಕ್ಕೆ ಭಗ್ನವಾದ ರೀತಿ ಹೆಣ್ಣಿನ ಅಸ್ತಿತ್ವದ ಕುರಿತು ಹಲವು ಪ್ರಶ್ನೆಗಳನ್ನೆಬ್ಬಿಸುತ್ತದೆ. ಹೆಣ್ಣು ಅಂದರೆ ತಾಯಿ. ಅದೇ ಅಸ್ತಿತ್ವ. ತಾಯಿಯಾಗದ ನಾಗವೇಣಿ ತನ್ನೊಳಗೇ ತಾನು ಖಾಲಿಯಾಗುತ್ತ ಹೋಗುವುದು, ಹಾಗೆಯೇ ಇಡೀ ಕುಟುಂಬ ಅವಳನ್ನು ಕಡೆಗಣಿಸುವುದು, ಅವಳ ಖಿನ್ನತೆ ಉನ್ಮಾದಕ್ಕೆ ತಿರುಗುವುದು ಇದೆಲ್ಲ ಅವಳ ಮನೋಲೋಕಕಕ್ಕೆ ಪಾತಾಳಗರಡಿ ಹಾಕಿದಂತಿದೆ.
ಡಾ. ಚಂದ್ರಮತಿ ಸೋಂದಾ ಕಾದಂಬರಿ “ದುಪಡಿ”ಗೆ ಡಾ. ಗೀತಾ ವಸಂತ ಬರೆದ ಮುನ್ನುಡಿ