‘ನಂದು ಹ್ಯೂಮನಿಸಂ… ನಾನು ಎಲ್ರಿಗೂ ಕಾಫಿ ಕೊಡ್ಸಿ, ಕುಡೀರಿ ಅಂತೀನಿ…’
“ಒಮ್ಮೆ ಹೀಗೇ ಧುತ್ತನೆ ಎದುರಾದಿರಿ. ನಿಮ್ಮ ಕಣ್ಣುಗಳಲ್ಲಿ ಒಂದಿಷ್ಟು ಮುಜುಗರ ಇರುತ್ತದೆ ಎಂದು ನಿಮ್ಮ ಕಣ್ಣುಗಳನ್ನೇ ನೋಡಿದ್ದೆ. ನಿಮ್ಮನ್ನ ಕಾಣುವಾಗ ನಾನು ಕೊಂಚ ಅಳುಕಿದ್ದೆ ಅಷ್ಟೇ. ನೀವು ಆರಾಮಾಗೇ ಇದ್ದಿರಿ. ನನ್ನನ್ನ ಕಂಡಿದ್ದೇ ‘ಹೋ ಮಹೇಶ್ ಅವ್ರು.. ಬನ್ನಿ ಕಾಫಿ ಕುಡಿಯೋಣ..’ ಅಂತ ಕರೆದುಕೊಂಡು ಕಲಾಕ್ಷೇತ್ರದ ಹಿಂಬದಿಯ ಕ್ಯಾಂಟಿನ್ ಗೆ ನಡೆದಿರಿ. ನಗುನಗುತ್ತ ಮಾತಾಡಿದಿರಿ. ನನ್ನ ವಿಮರ್ಶೆ ಮಲಗಿತ್ತು ಎನ್ನುವುದು ನನಗೆ ಅವತ್ತೇ ಗೊತ್ತಾಗಿದ್ದು.
ಎನ್.ಸಿ. ಮಹೇಶ್ ಬರೆದ ‘ರಂಗ ವಠಾರ’ ಅಂಕಣ