Advertisement

Tag: ಡಾ.ವಿನತೆ ಶರ್ಮಾ

ನಾವೆಲ್ಲರೂ ಜೊತೆಯಾಗಿದ್ದೀವಿ ಎನ್ನುವ ಈ ಹೊತ್ತು

ಕಳೆದ ಭಾನುವಾರ ಬೆಳಗ್ಗೆ ವಾರದ ದಿನಸಿ ಕೊಳ್ಳಲು ಮನೆಯಿಂದ ಹೊರಟ ನಮ್ಮ ಸಂಸಾರ ಅರ್ಧಂಬರ್ಧ ಖಾಲಿಯಾಗಿದ್ದ ಸೂಪರ್ ಮಾರ್ಕೆಟ್ಟಿನಿಂದ ಹಿಂದಿರುಗುವಷ್ಟರಲ್ಲಿ ಅಂದರೆ ಸುಮಾರು ಒಂದೂವರೆ ಗಂಟೆಯಲ್ಲಿ ನಾವು ಹೊರಟಿದ್ದ ರಸ್ತೆಗಳಲ್ಲಿ ಪ್ರವಾಹದ ನೀರು ತುಂಬಿಕೊಂಡು ಮನೆ ಸೇರಿಕೊಳ್ಳಲು ನಾವು ಆ ಇಳಿ ಮಧ್ಯಾಹ್ನ ಕಷ್ಟಪಡಬೇಕಾಯಿತು. ಕೊನೆಗೆ ಗೂಡು ಸೇರಿದಾಗ ಜೀವದ ಮೇಲೆ ಗೌರವವುಂಟಾಗಿತ್ತು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಆಸ್ಟ್ರೇಲಿಯ-ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಡುಪಾಡು

ಕೋವಿಡ್-೧೯ ವರ್ಷದಲ್ಲಿ ಓದುತ್ತಿದ್ದ ಕೆಲ ವಿದ್ಯಾರ್ಥಿಗಳು ರಜೆಗೆಂದು ತಮ್ಮೂರಿಗೆ (ದೇಶಕ್ಕೆ) ಹಿಂದಿರುಗಿ, ಇತ್ತ ವೈರಸ್ ಹಾವಳಿ ಹೆಚ್ಚಾಗಿ, ಅವರು ವಾಪಸ್ ಬರಲು ಆಗದೆ ತಮ್ಮ ಓದನ್ನು ಆನ್ಲೈನ್ ಮುಖಾಂತರ ಮುಂದುವರೆಸುವ ಫಜೀತಿಯಾಗಿತ್ತು. ಕೆಲವರು ಆಸ್ಟ್ರೇಲಿಯಾದಲ್ಲಿ ಇನ್ನೂ ಮನೆ ಬಾಡಿಗೆ ಕಟ್ಟುತ್ತಿದ್ದರು; ಸಾಮಾನು, ಸರಂಜಾಮುಗಳನ್ನು ಇಲ್ಲೇ ಇಟ್ಟಿದ್ದರು. ಪಾರ್ಟ್‌ ಟೈಮ್ ಕೆಲಸವಿದ್ದವರಿಗೆ ಕೆಲಸ ಹೋಯ್ತು. ವೀಸಾ ಮುಂದುವರೆಸಲು ಸರಕಾರ ಕೊಕ್ಕೆ ಹಾಕಿತು. ಡಿಗ್ರಿ ಮುಗಿಸಲೇ ಬೇಕು ಎನ್ನುವುದು ವಿದ್ಯಾರ್ಥಿ ವೀಸಾದ ಷರತ್ತು. ಡಾ.ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

Read More

ಮತ್ತೊಂದು ಜನಪದವನ್ನು ಗೌರವಿಸುವ ವಿನಯಶೀಲತೆಗೆ ಕಾಯುತ್ತಾ..

ಒಂದು ಕರಕುಶಲ ಮಳಿಗೆಯಲ್ಲಿ ಇರಿಸಿದ್ದ ಗಣೇಶನ ವಿಗ್ರಹಕ್ಕೆ ‘ಬುದ್ಧ’ ಎಂದು ಲೇಬಲ್ ಇತ್ತು. ನಾನು ಮಾಲೀಕಳ ಬಳಿ ಹೋಗಿ ‘ನೋಡಿ, ಅದು ಗಣೇಶನ ಪ್ರತಿಮೆ, ದಯವಿಟ್ಟು ಆ ‘ಬುದ್ಧ’ ಲೇಬಲ್ ತೆಗೆದುಹಾಕಿ’ ಎಂದರೆ ಆಕೆ ಉಡಾಫೆಯಿಂದ ‘ನನ್ನ ಸ್ಟಾಫ್ ಒಬ್ಬಳು ಆ ಲೇಬಲ್ ಹಚ್ಚಿದ್ದು. ನಾಳೆ ಬಂದಾಗ ಅವಳಿಗೆ ಹೇಳುತ್ತೀನಿ’ ಎನ್ನುವುದೇ! ಅಂದರೆ ಬೇರೆ ಸಂಸ್ಕೃತಿ, ಧರ್ಮ, ನಂಬಿಕೆಗಳಿಗೆ ಅಲ್ಲಿ ಕಿಂಚಿತ್ತೂ ಬೆಲೆಯಿರಲಿಲ್ಲ. ಹತ್ತು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಧಾರಾಳವಾಗಿ ಕಾಣಿಸುತ್ತಿದ್ದ ಅಬೊರಿಜಿನಲ್ ಜನ ಈಗ ಯಾಕಿಲ್ಲ ಎನ್ನುವ ನನ್ನ ಪ್ರಶ್ನೆಗೆ ಸ್ವಲ್ಪಮಟ್ಟಿಗೆ ಉತ್ತರ ದೊರಕಿತ್ತು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

Read More

‘ಆಲ್ ಈಸ್ ಕಾಮ್’ ಎನ್ನುವ ಕ್ರಿಸ್ಮಸ್ ಹಬ್ಬ

ಅದು ಚಳಿಗಾಲದಲ್ಲಿ ಬರುವ ಒಂದು ಸಂಕ್ರಮಣದ ದಿನ. ಆ ದಿನದಿಂದ ಸೂರ್ಯನ ಬೆಳಕು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ‘ಆಲ್ ಈಸ್ ಬ್ರೈಟ್’ ಎನ್ನುವ ಪದಗಳಿಗೆ ಹೊಸ ಅರ್ಥ ಹೊಳೆಯುತ್ತದೆ. ಹೊಸ ಬೆಳಕನ್ನ, ಸೂರ್ಯ ರಶ್ಮಿಯನ್ನ ತರುವ ಚೇತನವೊಂದು ಪ್ರಕೃತಿಯಲ್ಲಿ ಮೂಡಿತೇನೊ ಎನ್ನುವ ನಂಬಿಕೆ ಹುಟ್ಟುತ್ತದೆ. ರೋಮನ್ನರು ಆ ದಿನವನ್ನೇ ಪ್ರಶಸ್ತವೆಂದು ಆರಿಸಿಕೊಂಡರು. ಅವರು ‘ಧರ್ಮಬಾಹಿರ’ವೆಂದು ತಿಳಿದಿದ್ದ ಪೇಗನ್ ಸಂಸ್ಕೃತಿಯ ಹಬ್ಬಗಳ ಹುಟ್ಟಡಗಿಸಲು ಕೂಡ ಡಿಸೆಂಬರ್ ತಿಂಗಳನ್ನ….

Read More

ಹೆಸರು ಗುರುತಿಲ್ಲದ ಕಳೆದುಹೋದ ಜನರ ನೆನಪುಗಳ ದಿನ

ಮೊದಲನೇ ಮತ್ತು ಎರಡನೆ ಮಹಾಯುದ್ಧಗಳಲ್ಲಿ ಬ್ರಿಟನ್ನಿನ ಮತ್ತು ಅವರ ಮಿತ್ರರಾಷ್ಟ್ರಗಳ ಪರವಾಗಿ ಪಾಲ್ಗೊಂಡಿದ್ದ ಆಸ್ಟ್ರೇಲಿಯದ ಸೈನಿಕ ಕುಟುಂಬಗಳಿಗೆ ದೇಶದೊಳಗೆ ಅನೇಕ ಮನ್ನಣೆ ಸಂದಿದೆ. ಆದರೆ ಅವರಲ್ಲಿ ಬಹುತೇಕರು ಬಿಳಿಯರು. ಮಿಕ್ಕವರಿಗೆ ಅದೇ ಮಟ್ಟದಲ್ಲಿ ಮನ್ನಣೆ ಸಿಗಲಿಲ್ಲ. ಆ ಮಿಕ್ಕವರಲ್ಲಿ ಮುಖ್ಯವಾಗಿ ಸೇರಿದವರು ಆಸ್ಟ್ರೇಲಿಯನ್ ಅಬೊರಿಜಿನಲ್ ಜನರು, ಸ್ವಲ್ಪಮಟ್ಟಿಗೆ ಬ್ರಿಟಿಷರ ವಸಾಹತು…

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ