ಆರೋಗ್ಯಕ್ಕಾಗಿ “ಆರೋಗ್ಯ ದೀವಿಗೆ”…: ಕೆ.ಆರ್.ಉಮಾದೇವಿ ಉರಾಳ
. ಸಾಹಿತ್ಯಾಸಕ್ತೆ ವೈದ್ಯೆ ವಿನಯಾರಿಗೆ ಇರುವ ಭಾಷೆಯ ಮೇಲಿನ ಹಿಡಿತದಿಂದಾಗಿ ವೈದ್ಯ ಸಾಹಿತ್ಯದ ಈ ಕೃತಿ ಸುಲಲಿತವಾದ ಭಾಷಾ ಪ್ರಯೋಗದಿಂದ ಆಹ್ಲಾದಕರವಾದ ಓದನ್ನು ಸಾಧ್ಯವಾಗಿಸಿದೆ. ಪ್ರತಿಯೊಂದು ಲೇಖನದಲ್ಲೂ ಆರೋಗ್ಯಕರ ಜೀವನ ರೂಪಿಸಿಕೊಳ್ಳಲು ವ್ಯಕ್ತಿ ಹೊಂದಿರಬೇಕಾದ ಮೂಲಭೂತವಾದ ವೈಜ್ಞಾನಿಕ ಅರಿವನ್ನು ಮೂಡಿಸಲು ಲೇಖಕಿ ಪ್ರಾಂಜಲ ಮನದಿಂದ ಯತ್ನಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಎದುರಾಗುವ ಸಹಜ ಸನ್ನಿವೇಶಗಳನ್ನು ಬಳಸಿಕೊಂಡು ಸೋದಾಹರಣವಾಗಿ ವೈಜ್ಞಾನಿಕ ವಿಷಯಗಳನ್ನು ಆಪ್ತವಾಗಿ ಲೇಖನಗಳಲ್ಲಿ ಅಭಿವ್ಯಕ್ತಿಸಿದ್ದಾರೆ.
ಡಾ. ವಿನಯ ಶ್ರೀನಿವಾಸ್ ವೈದ್ಯಕೀಯ ಬರಹಗಳ ಕೃತಿ “ಆರೋಗ್ಯ ದೀವಿಗೆ” ಕುರಿತು ಕೆ.ಆರ್.ಉಮಾದೇವಿ ಉರಾಳ ಬರಹ