Advertisement

Tag: ದಯಾ ಗಂಗನಘಟ್ಟ

ಹುಣಸೇ ಚಿಗುರು ಮತ್ತು ಸ್ತ್ರೀತ್ವ…: ದಯಾ ಗಂಗನಘಟ್ಟ ಮುನ್ನುಡಿ

ಪಿತೃ ಹಿತಾಸಕ್ತ ನಿಲುವುಗಳ ಅರಿವಿರುವ ಕತೆಗಾರ್ತಿ ಪ್ರಜ್ಞಾಪೂರ್ವಕವಾಗಿಯೇ ಅದನ್ನ ತಮ್ಮ ಕತೆಯಲ್ಲಿ ಕಟ್ಟುತ್ತಾರೆ. ಹಾಗಾಗಿಯೇ ಹೆಣ್ಣಿನ ಸಹಜ ಸತ್ವದ ಹುಡುಕಾಟವನ್ನ ಇವರ ಸ್ತ್ರೀ ಪಾತ್ರಗಳಲ್ಲಿ ಬೆದಕಬಹುದು. ಸ್ತ್ರೀತ್ವದ ನಿಲುವಿನ ಬಗ್ಗೆ ಇವರಿಗೊಂದು ಸ್ಪಷ್ಟ ನಿಲುವಿದೆ. ಅದರೊಳಗೊಂದು ಅವರದ್ದೇ ಆದ ಏಸ್ತೆಟಿಕ್ ಇದೆ. ಹೆಣ್ಣಿನ ಅಗತ್ಯ ಮತ್ತು ಆದ್ಯತೆಗಳನ್ನು ಮರು ಪ್ರಶ್ನಿಸಿಕೊಳ್ಳಬೇಕಾದ ಒತ್ತಡ ಕನ್ನಡದ ನವ್ಯ ಸಾಹಿತ್ಯದ ಕೊಡುಗೆಯಾಗಿತ್ತು. ಅದರ ಪರಿಧಿಯನ್ನು ದಾಟಿದ ಈ ಕಾಲಘಟ್ಟದಲ್ಲಿ ಇವರ ಕಥೆಗಳು ಹೆಣ್ಣಿಗೆ ಗಂಡಿನಿಂದ ಏನು ಬೇಕಾಗಿದೆ ಎಂಬ ಪ್ರಶ್ನೆಯನ್ನೂ ಸೂಕ್ಷ್ಮವಾಗಿ ಎತ್ತಿ ಉತ್ತರವನ್ನೂ ಮಿಂಚುವಂತೆ ಮಾಡುತ್ತವೆ.
ದೀಪದ ಮಲ್ಲಿ ಕಥಾಸಂಕಲನ “ಹುಣಸೇ ಚಿಗುರು”ಗೆ ಕತೆಗಾರ್ತಿ ದಯಾ ಗಂಗನಘಟ್ಟ ಬರೆದ ಮುನ್ನುಡಿ

Read More

ತಿಪಟೂರು ಸೀಮೆಯ ಘಮಲು

ಕೇವಲ ನಿರೂಪಕಿ ಆಗದೆ ಕತೆಗಳ ಒಳಗಿನಿಂದ ಬಂದು ಮಾತನಾಡುವ ಕತೆಗಾರ್ತಿಗೆ ಆ ಕಾರಣಕ್ಕೆ ಒಂದು ರೀತಿಯ ಸಹಜ ಯಜಮಾನಿಕೆ ಪ್ರಾಪ್ತವಾಗಿದೆ. ಭಾರತದ ಮಹಾವ್ಯಾಖ್ಯಾನಗಳನ್ನು ನೀಡಿದ ವಾಲ್ಮೀಕಿ ವ್ಯಾಸರು ಕತೆಯ ಒಳಗಿನವರು. ತಾವೂ ತಮ್ಮ ಕತೆಯಲ್ಲಿ ಪಾತ್ರಧಾರಿಗಳು ಅಥವಾ ತಮ್ಮಿಂದಲೇ ಕತೆಗಳನ್ನು ಆರಂಭಿಸಿದವರು. ಕತೆಗಾರಿಕೆಗೆ ಇದೊಂದು ಅತ್ಯುತ್ತಮ ಮಾದರಿ. ತಾನೇ ಊರಾಡಿ ಎತ್ತಿಕೊಂಡು ಬಂದ ಕತೆಗಳಂತಿರುವ ಸಮೂಹ ಪ್ರಜ್ಞೆ ಈ ಕತೆಗಳ ಸತ್ವ. ಕತೆಗಳು ಸಮೂಹದ ಸ್ವತ್ತು. ಸಮೂಹ ಕೊಡುತ್ತಿರುವ ಸಮಸ್ತ ಬೈಗುಳಗಳಾದಿಯಾಗಿ ಯಾವುದನ್ನೂ ಸೋಸದೆ ಇಡಿಯಾಗಿ ನಮಗೆ ತಲುಪಿಸಲಾಗಿದೆ.
ದಯಾ ಗಂಗನಘಟ್ಟ ಕಥಾ ಸಂಕಲನ “ಉಪ್ಪುಚ್ಚಿ ಮುಳ್ಳು”ಗೆ ನಟರಾಜ್‌ ಬೂದಾಳು ಬರೆದ ಮುನ್ನುಡಿ

Read More

ಈ ಮಳೆಗಾಲ ನಮ್ಮದಲ್ಲ…

ಚಲಂ ಕವಿತೆಗಳ ಸಾಂಗತ್ಯ  ಕಡಲ ಮೇಲಿನ ಹಾದಿ. ಅನುಭಾವವನ್ನು ಹುಟ್ಟುಹಾಕುವ ನೀರ ಮೇಲಿನ ಪಯಣ. ಒಮ್ಮೆ ಇದು ಆರಂಭವಾದರೆ ದಿಕ್ಸೂಚಿಯಿಂದ ದಿಕ್ಕನ್ನು ತಿಳಿಯಬೇಕೆ ಹೊರತು ಕಣ್ಣಳತೆಗೆ ನಮಗೆ ಯಾವ ಮಾಹಿತಿಯೂ ದಕ್ಕುವುದಿಲ್ಲ. ಸ್ವಭಾವತಃ ವಾಚಾಳಿಯಲ್ಲದ ಚಲಂ ಅಷ್ಟೇನೂ ಔಟ್ಗೋಯಿಂಗ್ ಅಲ್ಲದ ಅಂತರ್ಮುಖಿ‌. ಅಂತೆಯೇ ಅವರ ಕವಿತೆಗಳೂ.ಕಡಲು ದಡಕ್ಕನೆ ತಂದು ಅಪ್ಪಳಿಸಿದ ಕಪ್ಪೆಚಿಪ್ಪುಗಳಲ್ಲ ಇಲ್ಲಿನ ಕವಿತೆಗಳು. ತಣ್ಣಗೆ ಹರಿವ ನದಿಯೊಳಗೆ ನುರಿದು ಅವಾಗೇ ನುಣ್ಣಗಾದ ನಯಸ್ಸು ಕಲ್ಲಿನಂತವು.
ಚಲಂ ಹಾಡ್ಲಹಳ್ಳಿಯವರ “ಈ ಮಳೆಗಾಲ ನಮ್ಮದಲ್ಲ” ಕವನ ಸಂಕಲನದ ಕುರಿತು ದಯಾ ಗಂಗನಘಟ್ಟ ಬರಹ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಶಾಪ ವಿಮೋಚನೆಯ ಹಂಬಲದ ಮಹತ್ವಾಕಾಂಕ್ಷಿ ಕಥನಗಳು: ಗೋವಿಂದರಾಜು ಕಥಾಸಂಕಲನದ ಮುನ್ನುಡಿ

‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಸಂಕಲನದ ಕಥೆಗಳು ತಮ್ಮ ಆಶಯ ಮತ್ತು ಭಿನ್ನ ದೇಹದ ಮೂಲಕ ಗಮನಸೆಳೆಯುತ್ತವೆ ಹಾಗೂ ಕಥೆಗಾರನ ಪ್ರಯೋಗಶೀಲತೆಯ ಬಗ್ಗೆ ಮೆಚ್ಚುಗೆ ಹುಟ್ಟಿಸುತ್ತವೆ. ಭಾವಾವೇಶಕ್ಕೆ ಒಳಗಾಗದೆ…

Read More

ಬರಹ ಭಂಡಾರ