Advertisement

Tag: ನಾರಾಯಣ ಯಾಜಿ

ತಾಕಲಾಟಗಳ ಮೌನದಲ್ಲಿ ಮೂಡಿದ ವಸಂತ: ನಾರಾಯಣ ಯಾಜಿ ಬರಹ

ಚರ್ಚಿನಲ್ಲಿ ಹಾಡಿದ ಮಗಳು ರೈಲಿನ ಟಿಕೆಟ್ಟಿಗೆ ಹಣ ಕೂಡಿಟ್ಟಿದ್ದನ್ನು ತಿಳಿದಾಗ ಅದನ್ನು ದೆವ್ವವೆನ್ನುವಂತೆ ದೂರ ಎಸೆಯುವ ಅಸಹಾಯಕತೆ ಮತ್ತು ಉಮ್ಮಳಿಸುವ ದುಃಖ, ಕೋಪಬಂದರೂ ಅಜ್ಜನ ಭಾವನೆಯನ್ನು ಅರ್ಥಮಾಡಿಕೊಂಡು ಮೊಮ್ಮಗಳು ಒಳಗೊಳಗೇ ಅನುಭವಿಸುವ ತುಮುಲ ಇವೆಲ್ಲವನ್ನೂ ರಂಗದಲ್ಲಿ ತೆರೆದಿಡುವ ನಾಟಕದ ಕೊನೆಯಲ್ಲಿ ಮೊಮ್ಮಗಳು ಅಜ್ಜನನ್ನು ಒಪ್ಪಿಸಿ ಹೊರಟು ಹೋಗುವಾಗ ಮಗುವಿನ ಪ್ರತಿಭೆ ಕಾಡ ಬೆಳದಿಂಗಳಾಗಲಿಲ್ಲವಲ್ಲ ಎನ್ನುವ ನಿಟ್ಟಿಸಿರು, ಅಜ್ಜನ ಪಾಡು ಎಂಥದೋ ಎನ್ನುವ ನೋವು ಎರಡೂ ಕಾಡುತ್ತದೆ.
ಡಾ. ಶ್ರೀಪಾದ ಭಟ್ ನಿರ್ದೇಶನದ “ಮೌನ ಕಣಿವೆಯ ಹಾಡು” ನಾಟಕದ ಕುರಿತು ನಾರಾಯಣ ಯಾಜಿ ಬರಹ

Read More

ಭೂಮಾನುಭೂತಿಯ ಬರಹಗಳು: ನಾರಾಯಣ ಯಾಜಿ ಕೃತಿಯ ಕುರಿತ ಹರೀಶ್‌ ಕೇರ ಮುನ್ನುಡಿ

ಈ ಬರಹಗಳು ಆಕಾಶ ಹಾಗೂ ಭೂಮಿಯ ನಡುವೆ ಸಲೀಸಾಗಿ ಯಾನ ಕೈಗೊಳ್ಳುತ್ತವೆ. ಪುರಾಣೇತಿಹಾಸಗಳ ಕ್ಲಾಸಿಕ್‌ ಸಾಹಿತ್ಯಗಳ ಆಕಾಶ ತತ್ವಗಳ ಜೊತೆಜೊತೆಗೇ ನಮ್ಮಂಥ ಸಾಮಾನ್ಯ ಮಾನವರ ನೆಲಕ್ಕಂಟಿದ ಬದುಕಿನ ಭೂಮಿ ತತ್ವವೂ ಹದವಾಗಿ ಬೆರೆತುಕೊಂಡಿವೆ. ಮಹಾತ್ಮ ಗಾಂಧಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಹಾಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇರುವ ಲೇಖನಗಳು ಈ ಕೃತಿಯ ಪ್ರಮುಖ ಲೇಖನಗಳಲ್ಲಿ ಕೆಲವು. ಇವು ನಮ್ಮ ಐತಿಹಾಸಿಕ ನೆಲೆಗಟ್ಟಿನಲ್ಲಿ ಈ ಅದ್ವಿತೀಯ ಪುರುಷರ ಆದರ್ಶಗಳು ಕಾಣ್ಕೆಗಳು ಹೇಗಿದ್ದವು ಎಂಬುದರ ನಿಡುನೋಟವನ್ನು ನೀಡುತ್ತವೆ.
ನಾರಾಯಣ ಯಾಜಿ ಹೊಸ ಕೃತಿ “ಧವಳ ಧಾರಿಣಿ”ಗೆ ಹರೀಶ್‌ ಕೇರ ಬರಹ

Read More

ಪ್ರಜ್ಞಾ ಪ್ರವಾಹವನ್ನು ಧಾರೆಯಾಗಿಸಿದ ಆಖ್ಯಾನಕಾರ ಕೆ. ಟಿ. ಗಟ್ಟಿ: ನಾರಾಯಣ ಯಾಜಿ ಬರಹ

ಗಟ್ಟಿಯವರು ಕಾದಂಬರಿ ಬರೆಯುವಾಗ ನವ್ಯ ತನ್ನ ಉತ್ತುಂಗದಲ್ಲಿ ಇತ್ತು. ತೇಜಸ್ವಿ, ಆಲನಹಳ್ಳಿ ಶ್ರೀ ಕೃಷ್ಣ, ಅಡಿಗರು, ಅನಂತಮೂರ್ತಿ ಇವರೆಲ್ಲರೂ ತಮ್ಮ ವಿಶಿಷ್ಟ ಬಗೆಯ ಬರಹಗಳಿಂದ ಕನ್ನಡ ಸಾಹಿತ್ಯಲೋಕವನ್ನು ರಂಜನೆಯಿಂದ ವೈಚಾರಿಕತೆಯೆಡೆಗೆ ತೆಗೆದುಕೊಂಡು ಹೋಗಿದ್ದರು.
ಇತ್ತೀಚೆಗೆ ತೀರಿಕೊಂಡ ಖ್ಯಾತ ಕಾದಂಬರಿಕಾರ ಕೆ.ಟಿ. ಗಟ್ಟಿಯವರ ಸಾಹಿತ್ಯದ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ ನಿಮ್ಮ ಓದಿಗೆ

Read More

ಕಾಲವೇ ಕಾಪಾಡಿ ಪೋಷಿಸಿದ ತಲೆಮಾರಿನ ಕಥೆ: ನಾರಾಯಣ ಯಾಜಿ ಬರಹ

ಕಾದಂಬರಿಯ ಪಾತ್ರಗಳು ಎರಡನೆಯ ಭಾಗದಲ್ಲಿ ಮುಖಾಮುಖಿಯಾಗುತ್ತವೆಯಾದರೂ ಅದು ತೀವ್ರತೆಗೆ ಎಡೆಮಾಡುವುದಿಲ್ಲ. ಅಲ್ಲೆಲ್ಲ ಒಂದು ಪಾತ್ರ ಸುಮ್ಮನೆ ಆ ಸ್ಥಳವನ್ನು ಬಿಟ್ಟು ದೂರಸರಿಯುತ್ತದೆ. ಚಿದಂಬರನ ಕಾಲಘಟ್ಟದಲ್ಲಿ ಅರವತ್ತರ ನಂತರದ ಸಾಮಾಜಿಕ ನಡವಳಿಕೆಯನ್ನು ಕಾಣಬಹುದು. ಮೊದಲ ಹಂತದಲ್ಲಿ ಗೋವಿಂದ ಮತ್ತು ಸವಿತಾ ದಂಪತಿಗಳ ಶ್ರಮ ಎದ್ದು ಕಾಣಿಸಿದರೆ ಎರಡನೆಯ ಭಾಗದಲ್ಲಿ ಚಿದಂಬರ ಮತ್ತು ಗಿರಿಜಾ ದಂಪತಿಗಳು ಆ ಪಾತ್ರವನ್ನು ನಿರ್ವಹಿಸಿದ್ದಾರೆ. ಇಬ್ಬರದ್ದೂ ಹೋರಾಟದ ಬದುಕು.
ರಾಜಶೇಖರ ಜೋಗಿನ್ಮನೆ ಕಾದಂಬರಿ “ಕೇಳು ಧನಂಜಯ..” ಕುರಿತು ನಾರಾಯಣ ಯಾಜಿ ಬರಹ

Read More

ಜಾರಿದ ಬದುಕನ್ನು ಸ್ವವಿಮರ್ಶಿಸಿಕೊಂಡ ಆತ್ಮಕಥೆ: ನಾರಾಯಣ ಯಾಜಿ ಬರಹ

ನಂದು ದಾದಾ ಅವಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿದರೆ ರಮೇಶಣ್ಣ ಅವಳಿಗೆ ಬಲೆಹಾಕಿ ಅವಳನ್ನು ದುರುಪಯೋಗಪಡಿಸಿ ಮನೆಯಿಂದ ಓಡಿಸಿಕೊಂಡುಹೋಗಿ ನಡುನೀರಿನಲ್ಲಿ ಕೈಬಿಟ್ಟು ಪರಾರಿಯಾಗುತ್ತಾನೆ. ನಂದಣ್ಣನ ಆದರ್ಶಗಳು ಈಕೆಯೊಳಗೆ ಪ್ರಭಾವವನ್ನು ಬೀರಿತ್ತು ಎನ್ನುವುದಕ್ಕೆ ಆಕೆ ತಾನು ವೇಶ್ಯೆಯಾಗಿ ಇರುವಾಗಲೂ ಸಂದರ್ಭ ಬಂದಾಗ ಸ್ವಾತಂತ್ರ್ಯ ಹೋರಾಟ, ಸಮಾಜ ಸೇವೆ, ದೀನದಲಿತರಿಗೆ ನೆರವು ಹೀಗೆ ಹಲವಾರು ಸಂಗತಿಗಳನ್ನು ಮಾಡುತ್ತಲೇ ಇರುತ್ತಾಳೆ. ಆದರೆ ಸ್ವಾತಂತ್ರ್ಯ ಹೊರಾಟಗಾರರಲ್ಲಿ ಎಲ್ಲವರೂ ನಂದಣ್ಣನಂತಹ ವ್ಯಕ್ತಿಗಳಲ್ಲ. ಹೆಚ್ಚಿನವರು ರಮೇಶನಂತಹ ಗೋಮುಖರೇ.
ಬಂಗಾಳಿಯ ಮಾನದಾ ದೇವಿ ಆತ್ಮಕಥನ “ವಿದ್ಯಾವಂತ ವೇಶ್ಯೆಯ ಆತ್ಮಕಥೆ”ಯನ್ನು ನಾಗ ಎಚ್ ಹುಬ್ಳಿ ಕನ್ನಡಕ್ಕೆ ತಂದಿದ್ದು ಈ ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ