ಅನುಭಾವ ಅಂಬುಧಿಯಲ್ಲಿ ಮಿಂದವಳು…: ಅಕ್ಕಮಹಾದೇವಿ ಜಯಂತಿ ಸಂದರ್ಭದಲ್ಲಿ ಪ್ರಜ್ಞಾ ಮತ್ತಿಹಳ್ಳಿ ಬರಹ
“ನಾವೆಲ್ಲರೂ ಲೌಕಿಕದ ಸಕಲ ಭೋಗ ಸಂಗತಿಗಳನ್ನೂ ಇನ್ನಿಲ್ಲದಂತೆ ಹಪಹಪಿಸಿ ಕೊಂಡು ಸುಖಿಸುತ್ತಿದ್ದೇವೆ. ಪ್ರತಿಯೊಂದರಲ್ಲಿಯೂ ಐಷಾರಾಮಿ ವಸ್ತುಗಳನ್ನು ಅಪೇಕ್ಷಿಸುತ್ತೇವೆ. ಈ ಭೋಗ ಸಂಸ್ಕೃತಿಯಿಂದಾಗಿ ಪ್ರಕೃತಿಯಲ್ಲಿ ಲೋಹ-ಅದಿರು-ಗಿಡ-ಮರ-ನದಿ-ಸಮುದ್ರ ಎಲ್ಲವೂ ಅತಿಯಾಗಿ ಬಳಸಲ್ಪಟ್ಟು ಶೋಷಣೆಗೆ ಗುರಿಯಾಗಿವೆ. ಸರಳ ಬದುಕಿಗೆ ಮೊರೆ ಹೋದವರೂ ಕೂಡ ಹೇಳಿದಷ್ಟು ಸುಲಭವಾಗಿ ತಮ್ಮ ಸನ್ಯಾಸವನ್ನು ಆಚರಣೆಗೆ ತರಲಾರರು. ಅಕ್ಕ ಸನ್ಯಾಸವೆಂದರೆ ಹೇಗಿರಬೇಕೆಂದು ತುಂಬಾ ಸರಳವಾದ ಶಬ್ದಗಳಲ್ಲಿ ವಿವರಿಸುತ್ತಾಳೆ.”
ಅಕ್ಕಮಹಾದೇವಿ ಜಯಂತಿಯ ಸಂದರ್ಭದಲ್ಲಿ ಪ್ರಜ್ಞಾ ಮತ್ತಿಹಳ್ಳಿ ಬರಹ