Advertisement

Tag: ಬೆಂಗಳೂರು ಕತೆ

ಅರ್ಧ ಕತೆಯೇ ಪ್ರಕಟಗೊಂಡಿತ್ತು: ಎಚ್. ಗೋಪಾಲಕೃಷ್ಣ ಸರಣಿ

ಆ ಗುಂಪಿನ ತಮಿಳರನ್ನು ನೋಡಿ ಕೆಲವು ಸಲ ಹೊಟ್ಟೆ ಉರಿಯೋದು. ಆ ಭಾಷೆಯಲ್ಲಿ ಬರುವ ಎಲ್ಲಾ ಪತ್ರಿಕೆಗಳನ್ನು ತರಿಸೋರು ಮತ್ತು ಹತ್ತು ಹದಿನೈದು ಜನ ಗ್ರೂಪ್ ಮಾಡಿಕೊಂಡು ಅದರ ಖರ್ಚು ಶೇರ್ ಮಾಡುತ್ತಿದ್ದರು. ಇನ್ನೂ ವಿಶೇಷ ಅಂದರೆ ಡಿ ಎಂ ಕೆ ಅವರು ತರಿಸುತ್ತಿದ್ದ ಪತ್ರಿಕೆ ಡಿ ಎಂ ಕೆ ವಿರೋಧಿಗಳು ತರಿಸುತ್ತಾ ಇರಲಿಲ್ಲ. ಅವರು ಇವರು ಪರಸ್ಪರ ಮಾತು ಕತೆ ಸಹ ಇಲ್ಲ! ಕೆಲವು ಸಲ ಇದೇ ವಿಷಯವಾಗಿ ತಮಿಳಿನಲ್ಲಿ ಜೋರು ಜೋರು ಮಾತುಕತೆ ಜಗಳ ಆಗುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೧ನೇ ಬರಹ ನಿಮ್ಮ ಓದಿಗೆ

Read More

ಸರ್ಕಾರಿ ಸಿಬ್ಬಂದಿಯೊಂದಿಗೆ ನಡೆದ ಜಟಾಪಟಿ: ಎಚ್. ಗೋಪಾಲಕೃಷ್ಣ ಸರಣಿ

ಬೆಳಿಗ್ಗೆಯಿಂದ ಸುತ್ತಿದ್ದು, ಹಸಿವಿನ ಹೊಟ್ಟೆ, ನಾಲ್ಕು ಮಹಡಿ ಹತ್ತು ಎರಡು ಮಾಡಿ ಇಳಿ… ಬಿಪಿ ಏರಿತು ಕಾಣಿರಿ… ವಾಚಾಮಗೋಚರ ಪುಂಖಾನು ಪುಂಖವಾಗಿ ಬಾಯಿಂದ ಬೈಗುಳ ಹೆಂಗೆ ಯಾವ ಡೆಸಿಮಲ್‌ನಲ್ಲಿ ಉಕ್ಕಿತು ಅಂದರೆ ಮೇಲಿನ ಮಹಡಿ ಕೆಳಗಿನ ಮಹಡಿ ನಾನು ನಿಂತಿದ್ದ ಮಹಡಿ ಜನ ಸುತ್ತಲೂ ಸೇರಿಬಿಟ್ಟರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೆಂಟನೆಯ ಕಂತು

Read More

ಪೆಟ್ಟುಮಾಡಿಕೊಂಡ ಕಿಟ್ಟಪ್ಪನಿಗೆ ಸಂದ ಪೂಜೆ…: ಎಚ್. ಗೋಪಾಲಕೃಷ್ಣ ಸರಣಿ

ಇಲ್ಲಿ ನನ್ನ ಸಂಪೂರ್ಣ ತಲಾಶ್ ನಡೆಯಿತು. ಎಡಗೈ ಇನ್ನೂ ನೇತಾಡುತ್ತಾ ಇತ್ತಲ್ಲ. ಅದನ್ನ ಹೇಗೋ ಮಡಿಸಿ ಒಂದು ಪಂಚೆಯನ್ನ ಸ್ವಿಂಗ್ ತರಹ ಮಾಡಿ ಕೊರಳಿಗೆ ನೇತು ಹಾಕಿದ್ದಳು. ಇಷ್ಟು ಹೊತ್ತಿಗೆ ಮೈಮೇಲೆ ಬಂದಿದ್ದ ಚಾಮುಂಡಿ ದೇವತೆ ಕೊಂಚ ಶಾಂತವಾಗಿತ್ತು. ತಟ್ಟೆಯಲ್ಲಿ ಅನ್ನ, ದಂಟಿನ ಸೊಪ್ಪಿನ ಹುಳಿ ಕಲಸಿ ಕೊಟ್ಟಳು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೆರಡನೆಯ ಕಂತು

Read More

ಮೇಸ್ತ್ರಿಯೊಂದಿಗೆ ಗೆದ್ದ ಯುದ್ಧ…: ಎಚ್. ಗೋಪಾಲಕೃಷ್ಣ ಸರಣಿ

ನನ್ನ ತಲೆಯಿಂದ ದೊಡ್ಡ ಹೊರೆ ಇಳಿದ ಹಾಗನ್ನಿಸಿತು. ಸಾವಿರಾರು ರುಪಾಯಿ ಮಿಗಿಸಿದ ಸಂತೋಷ ಆಯ್ತು. ರೂಪಿ ಸೆವ್ಡ್ ಈಸ್ ರೂಪಿ ಅರ್ನ್‌ಡ್ ಎನ್ನುವ ಫಿಲಾಸಫಿ ನನ್ನದು ಆ ಕಾಲದಿಂದಲೇ…….! ಈ ಸಂತೋಷ ಒಂದುಕಡೆ ಮತ್ತು ಇಡೀ ಜೀವಮಾನ ಅನುಭವಿಸಬೇಕಿದ್ದ ಮಾನಸಿಕ ಒತ್ತಡ ಒಂದುಕಡೆ ನಿವಾರಣೆ ಆದ ಖುಷಿ ಸಿಕ್ತಾ?
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತನೆಯ ಕಂತು

Read More

ಕೋಟಿಕೋಟಿ ಕೈಜಾರಿದ ದುಃಖ…: ಎಚ್.ಗೋಪಾಲಕೃಷ್ಣ ಸರಣಿ

ಇಡೀ ಬೆಂಗಳೂರಿನ ಉಳ್ಳವರು ಅಂದರೆ ರಿಚ್ ಜನ ಇವರ ಮೋಡಿಗೆ ಒಳಗಾದರು. ಇಡೀ ಬೆಂಗಳೂರು ಒಂದು ರೀತಿಯ ಸಾಮೂಹಿಕ ಸನ್ನಿಗೆ ಒಳಗಾಯಿತು, ಐದು ಹತ್ತು ವರ್ಷ ಹಿಂದೆ ಮನೆ ಕಟ್ಟಿಸಿದವರೂ ಕೊಂಡವರೂ ಸೇರಿದಹಾಗೆ ಹಲವು ತಲೆಮಾರುಗಳಿಂದ ಇದ್ದ ಮನೆಗಳು ನೆಲಸಮ ಆದವು. ವಾಸ್ತು ಸರಿ ಇಲ್ಲ ಎಂದು ವಾಸ್ತು ಶಿಲ್ಪಿ ಹೇಳುವುದು ಮತ್ತು ಅಂತಹ ತಜ್ಞರ ಸಲಹೆ ಮೇರೆಗೆ ಮನೆ ಕೆಡವಿ ಕಟ್ಟುವ ಆಟ ಸುಮಾರು ಎರಡು ದಶಕ ನಡೆಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೊಂಭತ್ತನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ