ಮಾನಸಿಕ ಹಿಂಸೆಯೂ ಕ್ರೌರ್ಯವೇ: ಗಿರೀಶ್ ಕಾಸರವಳ್ಳಿ ಕೃತಿಯ ಆಯ್ದ ಭಾಗ
ಕಾರಂತರದ್ದು ಸದಾ ಕ್ರಿಯಾಶೀಲವಾಗಿರುವ ಮನಸ್ಸು. ಅವರಿಗೇ ‘ತಾನು ಖಾಲಿಯಾದೆ’ ಅಂತನ್ನಿಸಬೇಕಾದರೆ ಆ ಭೂಪಾಲ್ ಘಟನೆ ಎಂತಹ ಆಘಾತ ತಂದಿರಬೇಕು. ಅವರ ಮನಸ್ಸು ಮುದುಡುವಂತೆ ಮಾಡಿ, ತಮ್ಮಿಂದ ಇನ್ನು ಸೃಜನಾತ್ಮಕವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಅನ್ನಿಸುವಂತೆ ಮಾಡಿದರಲ್ಲಾ, ಅದುವೇ ಕ್ರೌರ್ಯ. ಭೂಪಾಲ್‌ನ ಆ ಘಟನೆ ನಿಜವಾಗಿಯೂ ನಡೆದದ್ದೋ ಅಲ್ಲವೋ ನನಗೆ ತಿಳಿಯದು. ಅಲ್ಲಿನ ರಾಜಕೀಯ ರಂಗಮಂಡಲದ ಮುಖ್ಯಸ್ಥರಾಗಿದ್ದ ಕಾರಂತರನ್ನು ಬಲಿಪಶು ಮಾಡಿದರು ಎಂದು ಅವರ ಕೆಲವು ಸ್ನೇಹಿತರು ಹೇಳಿದ್ದನ್ನು ನಾನು ಕೇಳಿದ್ದೇನೆ.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ಕ್ರೌರ್ಯ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ