Advertisement

Tag: ಮುನವ್ವರ್ ಜೋಗಿಬೆಟ್ಟು

“ಜಿನ್ನ್‌ ಮತ್ತು ಪರ್ಷಿಯನ್‌ ಕ್ಯಾಟ್‌” ಕಥೆಗಳು….

ಈ ಕಥೆಗಳ ಗಮನ ಸೆಳೆಯುವ ಇನ್ನೂ ಕೆಲವು ಅಂಶಗಳೆಂದರೆ, ನಾಟಕೀಯತೆ, ಕಥಾವರಣದಲ್ಲಿ ಬಿಚ್ಚಿಕೊಳ್ಳುವ ಒಂದು ಬಗೆಯ ನಿಗೂಢತೆ ಮತ್ತು ಜನಪ್ರಿಯ ಕಥನ ಪರಂಪರೆಯಿಂದ ಪಡೆದ ಪ್ರಭಾವ. ಬೆಳೆಯುತ್ತಿರುವ ಲೇಖಕನೊಬ್ಬನಿಗೆ ಯಾವ ಅಂಶವೂ ವರ್ಜ್ಯವಲ್ಲ. ಮಾತ್ರವಲ್ಲ, ತನ್ನ ಕಥನ ಸಾಮರ್ಥ್ಯವನ್ನು ಕಂಡುಕೊಳ್ಳಲು ನಡೆಸುವ ಪ್ರಯೋಗ ಕೂಡ ಮುಖ್ಯ. ಮುನವ್ವರ್ ಅಂತಹ ಕಂಡುಕೊಳ್ಳುವಿಕೆಯ ಪ್ರಯತ್ನದಲ್ಲಿದ್ದಾರೆ.
ಮುನವ್ವರ್‌ ಜೋಗಿಬೆಟ್ಟು ಕಥಾಸಂಕಲನ”ಜಿನ್ನ್‌ ಮತ್ತು ಪರ್ಷಿಯನ್‌ ಕ್ಯಾಟ್‌”ಗೆ ಕೇಶವ ಮಳಗಿ ಬರೆದ ಪ್ರವೇಶಿಕೆ

Read More

ಮುನವ್ವರ್‌ ಜೋಗಿಬೆಟ್ಟು ಬರೆದ ಈ ಭಾನುವಾರದ ಕಥೆ

ಬಟ್ಟೆ ತೊಳೆಯಲು ಹೋಗಿದ್ದ ಉಮ್ಮ ಬಂದು ಹಿತ್ತಲಿಗೆ ತಲುಪಿದ್ದಳು. ಹೊರಳಾಡುತ್ತಿರುವ ಝುಮೈರ್‌ನನ್ನು ಸಮಾಧಾನ ಮಾಡುವ ಶತ ಪ್ರಯತ್ನ ಮಾಡ ತೊಡಗಿದಳು. ವಿಶಣ್ಣನಾಗಿ ಅಬ್ಬ ಮಗನ ರೋಧನೆಯನ್ನು ನೋಡುತ್ತಾ ಕುಳಿತಿದ್ದ. ಹೇಗೋ ಸಮಧಾನಿಸಿ ಮನೆಯೊಳಗೆ ಕರೆದುಕೊಂಡು ಹೋದಳು ಉಮ್ಮ. ಮಗ ಎಷ್ಟೇ ಸಮಾಧಾನ ಮಾಡಿದರೂ ಅವನ ದುಃಖ ಇಳಿಯುವುದಿಲ್ಲವೆಂದು ಉಮ್ಮನಿಗೆ ಖಾತ್ರಿಯಾಯಿತು. ರಾತ್ರಿ ಊಟ ಮಾಡದೆ ಮಲಗಿದ್ದ ಮಗನ ಬಳಿಗೆ ಬಂದವಳು “ಐವತ್ತು ರೂಪಾಯಿ ನಾನು ಕೊಡ್ತೇನೆ.
ಮುನವ್ವರ್‌ ಜೋಗಿಬೆಟ್ಟು ಬರೆದ ಕಥೆ “ಶಾಲಾ ಮಕ್ಕಳ ಪ್ರವಾಸಕ್ಕೆ ಜಯವಾಗಲಿ” ನಿಮ್ಮ ಓದಿಗೆ

Read More

ಕತೆ ಹೇಳಿಸಿಕೊಳ್ಳುವ ಉಮ್ಮ, ಪುಸ್ತಕ ಕೊಡಿಸು ಎನ್ನುವ ಬಾಪಾ

ತಾನು ಕತೆಗಾರನೆಂದು ಹೇಳಿಕೊಳ್ಳುವ ಮುನವ್ವರ್‌ ಜೋಗಿಬೆಟ್ಟು ಅವರ ಅಂತರಂಗದಲ್ಲೊಂದು ಹಾಡಿದೆ. ಅದು ಅವರ ಪರಿಸರ ಪ್ರೀತಿಯ ಹಾಡು. ಅದೇ ಪ್ರೀತಿಯಲ್ಲಿ ಅವರು ಕೆಂಡಸಂಪಿಗೆಗೆ ಸರಣಿ ಬರಹಗಳನ್ನು ಬರೆಯುತ್ತಾ ತಮ್ಮ ಬರವಣಿಗೆಯನ್ನು ಮತ್ತಷ್ಟು ಚಂದಮಾಡಿಕೊಂಡರು. ʻಇಷ್ಕಿನ ಒರತೆಗಳುʼ ಎಂಬ ಕವನ ಸಂಕಲನ ಪ್ರಕಟಿಸಿದರು. ಅವರಿಗೆ ಇಂದು ವಿಜಯಕರ್ನಾಟಕ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿದೆ. ಈ ಬಹುಮಾನ ಬಂದ ಖುಷಿಯಲ್ಲಿ ತುಂಬಾ ಮಾತನಾಡಿದರು.

Read More

ನೇತ್ರಾವತಿಯಲ್ಲಿ ಹರಿದು ಹೋದ ನೀರೆಷ್ಟೋ…

ಏನೇನೋ ಚಿಂತಿಸುತ್ತ ಇದಿನಬ್ಬ ಕುಳಿತಿದ್ದಾನೆ; ಅಷ್ಟರಲ್ಲೇ ದೂರದಲ್ಲಿ ಒಂದು ಸಣ್ಣ ತಂಡ ನಡೆದು ಬರುತ್ತಿದೆ. ಇದಿನಬ್ಬನಿಗೆ ಮತ್ತೆ ಬದುಕುವ ಆಸೆ ಚಿಗುರಿತು, ಅಪರಿಚಿತರಾದರೇನು? ಮನುಷ್ಯರನ್ನು ಕಂಡೆನಲ್ಲಾ ಅನ್ನುವ ಖುಷಿ. ಹತ್ತಿರವಾದಂತೆ ಮುಖ ಚಹರೆ ಸ್ಪಷ್ಟವಾಗತೊಡಗಿತು. ಹೌದು, ಯೂಸುಫ್ ಮತ್ತು ಇತರ ಸಹ ಯಾತ್ರಿಕರು. ದೂರದಲ್ಲಿ ಬಂದವರಿಗೂ ಪರಿಚಯ ಸಿಕ್ಕಿರಬೇಕು. ಎಲ್ಲರೂ ಇದಿನಬ್ಬರ ಕಡೆಗೆ ಓಡಿ ಬಂದರು.  ಉಳಿದವರು ಎಲ್ಲಿ ಹೋದರೋ ಗೊತ್ತಾಗಲಿಲ್ಲ.”

Read More

ಗಣಿಗಾರಿಕೆ ಎಂಬ ಭೂಗತ ಜಗತ್ತಿನ ಅನಾವರಣ

ಮಿಂಚು ಹುಳುವಿನಂತೆ ಹೊಳೆಯುತ್ತಿದ್ದ ಆಫ್ರಿಕಾದ ‘ಡರ್ಬನ್’ ಕಡಲ ತೀರ ಸ್ವಲ್ಪ ಸ್ವಲ್ಪವೇ ಗೋಚರಿಸತೊಡಗಿತ್ತು. ಮತ್ತೂ ಮತ್ತೂ ಹತ್ತಿರವಾದಂತೆ ಕಡಲು ಮುಗಿಯಲೇ ಇಲ್ಲ. ಹಡಗಿನೊಳಗಿದ್ದ ಯಾರೂ ತೀರ ಕಂಡ ಬಳಿಕ ನಿದ್ರೆ ಮಾಡಿರಲಿಲ್ಲ. ಅಂತೂ ಬೆಳಗಿನ ಜಾವ ಸುಮಾರು ನಾಲಕ್ಕು ಗಂಟೆಯ ವೇಳೆಗೆ ಹಡಗು ಬಂದರು ತಲುಪಿತು. ಬರೋಬ್ಬರಿ ೭೨ ದಿನಗಳ ತರುವಾಯ ಹೊಸ ಮನುಷ್ಯರು, ಭೂಮಿ ಅವರ ಕಣ್ಣಿಗೆ ಬಿದ್ದಿತ್ತು.
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರು ಕಾದಂಬರಿಯ ಒಂಭತ್ತನೇ ಕಂತು.

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಜಾರಿದ ಬದುಕನ್ನು ಸ್ವವಿಮರ್ಶಿಸಿಕೊಂಡ ಆತ್ಮಕಥೆ: ನಾರಾಯಣ ಯಾಜಿ ಬರಹ

ನಂದು ದಾದಾ ಅವಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿದರೆ ರಮೇಶಣ್ಣ ಅವಳಿಗೆ ಬಲೆಹಾಕಿ ಅವಳನ್ನು ದುರುಪಯೋಗಪಡಿಸಿ ಮನೆಯಿಂದ ಓಡಿಸಿಕೊಂಡುಹೋಗಿ ನಡುನೀರಿನಲ್ಲಿ ಕೈಬಿಟ್ಟು ಪರಾರಿಯಾಗುತ್ತಾನೆ. ನಂದಣ್ಣನ ಆದರ್ಶಗಳು ಈಕೆಯೊಳಗೆ…

Read More

ಬರಹ ಭಂಡಾರ