Advertisement

Tag: ರಂಜಾನ್ ದರ್ಗಾ

‘ದೇವರು ಹೆಚ್ಚಿಗೆ ಕೊಟ್ಟದ್ದು ನನ್ನದಲ್ಲ’

ಹೊಸಬರು ಹಳ್ಳಿಗೆ ಬಂದರೆ ಕಟ್ಟೆಯ ಮೇಲೆ ಕುಳಿತ ಹಿರಿಯರು ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಎಲ್ಲಿಂದ ಬಂದಿದ್ದಾರೆ, ಯಾರ ಮನೆಗೆ ಹೋಗುತ್ತಿದ್ದಾರೆ. ಬಂದ ಕಾರಣವೇನು, ಅವರ ಕುಲಗೋತ್ರ ಯಾವುದು, ಆ ಆಗಂತುಕರ ಊರಿನಲ್ಲಿ ತಮಗೆ ಪರಿಚಯವಿದ್ದವರ ಕುರಿತು ತಿಳಿದುಕೊಳ್ಳುವುದು, ಆ ಊರಿನ ಜೊತೆಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಳ್ಳುವುದು ಮುಂತಾದವು ನಡೆದೇ ಇರುತ್ತಿದ್ದವು.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಏಳನೆಯ ಕಂತು.

Read More

ಅಲ್ಲೀಬಾದಿಯ ಮೃಗಶಿರ ಮಳೆಹಾಡ ನೆನಪು

ಮಣ್ಣೆತ್ತಿನ ಅಮಾವಾಸೆ ದಿನ ಗುಳ್ಳವ್ವ ಕೂಡುತ್ತಾಳೆ. ಇವಳು ಐದು ವಾರ ಇರುತ್ತಾಳೆ. ಹದಿಹರೆಯದ ಹುಡುಗಿಯರು ಇದರಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವರು. ಅವರ ಜೊತೆ ಗುಳ್ಳವ್ವ ಐದು ವಾರ ಇರುವುದರಿಂದ ಭಾವನಾತ್ಮಕ ಸಂಬಂಧ ಬೆಳೆದಿರುತ್ತದೆ. ವಾರದ ಕೊನೆಯ ದಿನ ಹೊಲದಲ್ಲಿ ಹುಗಿಯುವಾಗ ಇಲ್ಲವೇ, ಗಿಡದ ಮೇಲೆ ಕೂಡಿಸಿ ಬರುವಾಗ ಬಿಕ್ಕಿಬಿಕ್ಕಿ ಅಳುತ್ತಾರೆ. ಗುಳ್ಳವ್ವ ಕೂಡ ಮಳೆಗೆ ಸಂಬಂಧಿಸಿದ ದೇವತೆಯಾಗಿದ್ದಾಳೆ.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿ

Read More

ಜಾತಿಯೆಂಬ ತಡೆರೇಖೆಗಳನ್ನು ದಾಟಿಕೊಂಡು..

ಬಾಬು ಮಾಮಾನ ಗೆಳೆಯನೊಬ್ಬ ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದ. ಎತ್ತಿ ಆಡಿಸುತ್ತಿದ್ದ. ಆತನೊಮ್ಮೆ ಬಾವಿಯಿಂದ ನೀರು ತುಂಬಿಕೊಂಡು ಹೋಗುತ್ತಿದ್ದುದು ಕಾಣಿಸಿತು. ಅವನನ್ನು ಕಂಡೊಡನೆ ಖುಷಿಯಿಂದ ಅವನ ಹಿಂದೆ ಓಡಿದೆ. ಅವನ ಹಳದಿ ರುಮಾಲಿನ ಚುಂಗವನ್ನು ಹಿಡಿದು ‘ಮಾಮಾ’ ಎಂದು ಕೂಗಿದೆ. ಆತನಿಗೆ ಬಹಳ ಸಿಟ್ಟು ಬಂದಿತು. ನನ್ನ ಕಪಾಳಿಗೆ ಹೊಡೆದು ರಸ್ತೆ ಮೇಲೆ ನೀರು ಚೆಲ್ಲಿ ಮತ್ತೆ ಕೊಡ ತುಂಬಲು ಬಾವಿಯ ಮೆಟ್ಟಿಲುಗಳನ್ನು ಇಳಿಯ ತೊಡಗಿದ.”

Read More

ಜಾತಿಗಿಂತ ನೀತಿಗೇ ಹೆಚ್ಚಿನ ಬೆಲೆಯಿದ್ದ ಕಾಲ

ಬಯಲಾಟದಲ್ಲಿ ದ್ರೌಪದಿ ಪಾತ್ರದ ಗಣಪು ಬಂದು ಒಂದಿಷ್ಟು ಕುಣಿದು ಮಾತನಾಡುವಾಗ ಆತನ ಧ್ವನಿ ಒಡೆದದ್ದು ಗೊತ್ತಾಯಿತು. ರಂಗತಾಲೀಮದಲ್ಲಿ ಮಾತಾಡಿ ಮಾತಾಡಿ ಆತ ಧ್ವನಿ ಕಳೆದುಕೊಂಡಿದ್ದಾನೆಂದು ಅಜ್ಜಿ ನನಗೆ ಹೇಳಿದಳು. ಅಜ್ಜಿಯ ಲಕ್ಷ್ಯ ಹೆಚ್ಚಾಗಿ ಅವನಿಗೆ ಹಾರ ಹಾಕಿ ಒಂದು ರೂಪಾಯಿ ಬಹುಮಾನ ಕೊಡುವುದರ ಕಡೆಗೆ ಇತ್ತು. ಎರಡನೇ ಸಲ ರಂಗದ ಮೇಲೆ ಬಂದಾಗ ಹಾರ ಹಾಕಿ ಬಹುಮಾನ ಕೊಡುವುದಕ್ಕಾಗಿ..”

Read More

ಅಜ್ಜಿಯೀಗ ಅಗಸಿ ಬಾಗಿಲ ದಾಟಿರಬಹುದೆ?

ಮೊದಲ ಸಲ ನನ್ನ ಅಜ್ಜಿಯ ಜೊತೆ ರವಿವಾರ ಸಂತೆ ದಿನ ನಡೆಯುತ್ತ ವಿಜಾಪುರಕ್ಕೆ ಹೋಗುವಾಗ ಬಹಳ ದೂರದಿಂದಲೆ ಬೃಹತ್ತಾದ ಗೋಲಗುಂಬಜವನ್ನು ನೋಡಿ ಆಶ್ಚರ್ಯಚಕಿತನಾಗಿದ್ದೆ. ಆಗೊಮ್ಮೆ ಈಗೊಮ್ಮೆ ಕಾಣಿಸುವ ಕಾರುಗಳು, ಲಾರಿಗಳು ಮುಂತಾದವುಗಳ ಜೊತೆ ನಮೂನೆ ನಮೂನೆ ವೇಷಭೂಷಣದ ಜನರು ಮಜವಾಗಿ ಕಾಣುತ್ತಿದ್ದರು. ನಮ್ಮ ಹಳ್ಳಿಯಲ್ಲಾದರೆ ಬಹುಪಾಲು ಜನರು ಧೋತರ ಮತ್ತು ಮಾಂಜರಪಾಟ್ ಬಟ್ಟೆಯಿಂದ ಹೊಲಿದ ಕುಂಬಳಛಾಟಿ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ